ಹಡ್ಲುಬೈಲು ಮನೆ ತೆರವು ಪ್ರಕರಣ : ಅಧಿಕಾರಿಗಳ ದುಂಡಾವರ್ತನೆ ನಡೆಗೆ – ಕಿಮ್ಮನೆ ರತ್ನಾಕರ್ ನೇತ್ರತ್ವದಲ್ಲಿ ಪಾದಯಾತ್ರೆ
ರಿಪ್ಪನ್ ಪೇಟೆ ; ಹೊಸನಗರ ತಾಲೂಕಿನ ಹುಂಚ ಹೋಬಳಿಯ ಹಡ್ಲುಬೈಲಿನ ಜೀವನ್ ಎಂಬವರ ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳ ದುಂಡಾವರ್ತನೆಯನ್ನು ಖಂಡಿಸಿ ಮಂಗಳವಾರ ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಮನೆ ನೆಲಸಮಗೊಂಡ ಜಾಗದಿಂದ ಹೊಂಬುಜ ನಾಡ ಕಚೇರಿಯವರೆಗೆ ಸುಮಾರು 7ಕಿಲೋ ಮೀಟರ್ (ನಡಿಗೆ ) ಪಾದಯಾತ್ರೆ ನಡೆಸಿದರು. ತದ ನಂತರ ನಾಡ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು ರಾಜ್ಯ ಸರ್ಕಾರ ನಿವೇಶನ…