ರಿಪ್ಪನ್‌ಪೇಟೆ : ಕಳಪೆ ಕಾಮಗಾರಿಗೆ ಮೂರೇ ತಿಂಗಳಲ್ಲಿ ಕಿತ್ತು ಹೋದ ಚಿನ್ನದ ರಸ್ತೆ – 4.5 ಕೋಟಿ ರೂ ನೀರಲ್ಲಿ ಹೋಮ | Ripponpet
ಅಭಿವೃದ್ಧಿಯ ಮಂತ್ರ ಪಠಿಸುತ್ತಿರುವ ಜನಪ್ರತಿನಿಧಿಗಳು ಪ್ರತಿ ವರ್ಷ ಸರ್ಕಾರದಿಂದ ಕೋಟಿಗಟ್ಟಲೆ ಹಣ ತಂದು ತಾಲೂಕಿನ ವಿವಿಧ ಭಾಗದ ರಸ್ತೆಗಳ ಡಾಂಬರೀಕರಣ ಮಾಡುತ್ತಿದ್ದರೂ ಸರಿಯಾದ ಮೇಲ್ವಿಚಾರಣೆ ಇಲ್ಲದೆಯೋ ಅಥವಾ 40% ಕಮೀಷನ್ ದಂಧೆಯೋ ಏನೋ ಗೊತ್ತಿಲ್ಲ ತಾಲೂಕಿನ ಅಭಿವೃದ್ಧಿ ದಶಕಗಳ ಹಿಂದೆ ಹೋಗಿದೆಯೇನೋ ಎನ್ನಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ. ಹೌದು ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗವಟೂರು – ಮಾವಿನಸರ ರಸ್ತೆ ನಾಲ್ಕೈದು ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಡಾಂಬಾರು ಕಾಣದೇ ಬಹಳ ವರ್ಷಗಳೇ ಕಳೆದಿತ್ತು. ಗ್ರಾಮಸ್ಥರ ಹಲವು ವರ್ಷದ…