Headlines

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಭಾಗಿಯಾದ ಗೃಹಸಚಿವ ಆರಗ ಜ್ಞಾನೇಂದ್ರ : ಸಾಂಸ್ಕೃತಿಕ ಉಡುಗೆ ಧರಿಸಿ ಮಿಂಚಿದ ಪೊಲೀಸರು |Thirthahalli

ತೀರ್ಥಹಳ್ಳಿ : ನಮಗೆಲ್ಲರಿಗೂ ಇದೊಂದು ವಿಶೇಷ ಹಬ್ಬ. ರಾಕ್ಷಸರ ಗುಣವುಳ್ಳವರನ್ನು ಸಂಹಾರ ಮಾಡಲು ದುರ್ಗೆಯು ನಾನಾ ರೀತಿಯ ಅವತಾರವನ್ನು ಎತ್ತಿದಂತಹ ಹಬ್ಬ. ಕೆಟ್ಟ ಶಕ್ತಿಗಳನ್ನು ದಮನ ಮಾಡಲು ಎಲ್ಲಾ ರೀತಿಯ ಶಕ್ತಿ ಪಡೆಯಲು ಆಚರಿಸುವ ಹಬ್ಬ. ಪೊಲೀಸರಿಗೆ ಇದೊಂದು ರೀತಿಯಲ್ಲಿ ವಿಶೇಷ ಹಬ್ಬ ಎಂದು ಭಾವಿಸಿದ್ದೇನೆ. ಯಾಕೆಂದರೆ ಶಿಷ್ಟರ ರಕ್ಷಣೆ ದುಷ್ಟರಿಗೆ ಶಿಕ್ಷೆ ಇದು ಪೊಲೀಸ್ ಇಲಾಖೆಯಿಂದ ನೆಡೆಯುವಂತಹದ್ದು ಈ ಕಾರಣಕ್ಕೆ ಎಲ್ಲಾ ಸಿಬ್ಬಂದಿಗಳಿಗೂ ಆಯುಧ ಪೂಜೆಯ ಶುಭಾಶಯಗಳು ಎಂದು ತಿಳಿಸಿದರು.


ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ವಿಜೃಂಭಣೆಯಿಂದ ಆಯುಧ ಪೂಜೆಯನ್ನು ನೆರವೇರಿಸಿ ಪೂಜೆ ಸಲ್ಲಿಸಿ ನಂತರ ಮಾತನಾಡಿದ ಅವರು ಗೃಹಸಚಿವನಾಗಿ ಒಂದು ವರ್ಷ ಮೂರು ತಿಂಗಳಾಯಿತು. ಹಲವು ಸಮಸ್ಯೆಗಳು ನನ್ನ ಅವಧಿಯಲ್ಲಿ ಬಂದಿದೆ. ಬಹಳಷ್ಟು ಜನರು ನನನ್ನು  ಈ ಖಾತೆ ನಿನಗೆ ಬೇಕಿತ್ತಾ ಎಂಬುದಾಗಿಯೂ  ಕೇಳಿದ್ದರು. ನನ್ನ ಜೀವನದಲ್ಲಿ ನನಗೆ ಇದೊಂದು ರೀತಿ ಚಾಲೆಂಜ್, ಸುಲಭದ ಖಾತೆ ಅಥವಾ ಇನ್ಯಾವುದೇ ಖಾತೆಯನ್ನು ಯಾರು ಬೇಕಾದರೂ ನಿಭಾಯಿಸಬಹುದು. ಈ ಖಾತೆಯನ್ನು ನಿಭಾಯಿಸಲು ಶಕ್ತಿ ಇದೆ ಎಂದೇ ನಮ್ಮ ಹಿರಿಯರು ನನಗೆ ಕೊಟ್ಟಿದ್ದಾರೆ. ಮಂತ್ರಿಯಾಗುವುದೇ ಕಷ್ಟವಿತ್ತು ಅಂತಹದರಲ್ಲಿ ದೊಡ್ಡ ಖಾತೆಯೊಂದನ್ನು ನೀಡಿದ್ದಾರೆ ಹಾಗಾಗಿ ಇದೊಂದು ರೀತಿ ಚಾಲೆಂಜ್ ಆಗಿ ಸ್ವೀಕಾರ ಮಾಡಿದ್ದೇನೆ ಎಂದು ತಿಳಿಸಿದರು.

ತಾವು ಗೃಹಸಚಿವರಾದ ನಂತರ ಪೊಲೀಸ್ ಇಲಾಖೆಗೆ ಏನೆಲ್ಲಾ ವ್ಯವಸ್ಥೆ ಆಗಿದೆ ಮತ್ತು ಆಗಬೇಕಿದೆ ಎಂಬುದನ್ನು ಸಿಬ್ಬಂದಿಗಳ ಹತ್ತಿರ ಚರ್ಚಿಸಿದರು. ಆಯುಧ ಪೂಜೆಯ ಪ್ರಯುಕ್ತ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಾಂಸ್ಕೃತಿಕ ಉಡುಪನ್ನು ಧರಿಸುವ ಮೂಲಕ ಕಣ್ಮನ ಸೆಳೆದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

ವರದಿ : ಅಕ್ಷಯ್ ಕುಮಾರ್

Leave a Reply

Your email address will not be published. Required fields are marked *