Headlines

ಭೀಕರ ಕಾರು ಅಪಘಾತ : ಹೊಸನಗರ ಮೂಲದ ಮಾಜಿ ಯೋಧ ಸಾವು – ಇಬ್ಬರ ಸ್ಥಿತಿ ಗಂಭೀರ|accident

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಾವಿನಹೊಳೆ ನಿವಾಸಿ ಪ್ರಗತಿಪರ ರೈತ ಹಾಗೂ ಮಾಜಿ ಸೈನಿಕ ಚನ್ನಪ್ಪ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಬೆಂಗಳೂರಿನಿಂದ ಮನೆಗೆ ವಾಪಸ್ಸಾಗುವಾಗ ಶಿವಮೊಗ್ಗ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮರಣ ಹೊಂದಿರುವುದಾಗಿ ಎಂದು ತಿಳಿದು ಬಂದಿದೆ. ಈ ಅಪಘಾತದಲ್ಲಿ ಮೃತರ ಪತ್ನಿ ಮತ್ತು ಪುತ್ರಿಗೂ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪುತ್ರಿಯನ್ನು ಬೆಂಗಳೂರಿಗೆ ತನ್ನ ಮಾರುತಿ ಆಲ್ಟೊ 800 ಕಾರಿನಲ್ಲಿ ಕರೆದುಕೊಂಡು ಹೋಗಿ…

Read More

ಕೋಡೂರು ಗ್ರಾಪಂ ವ್ಯಾಪ್ತಿಯ ಹೆಚ್ ಕುನ್ನೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ | ಸಾರ್ವಜನಿಕರು ತಮ್ಮ ಸಮಸ್ಯೆಗಳ ವಿವರವನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು ; ಗ್ರೇಡ್ 2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ|koduru

ರಿಪ್ಪನ್‌ಪೇಟೆ : ಸಾರ್ವಜನಿಕ ಸಮಸ್ಯೆ ಪರಿಹರಿಸಲು‌ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳ ವಿವರವನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದು ಹೊಸನಗರ ಗ್ರೇಡ್ 2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋ ತಿಳಿಸಿದರು. ಕೋಡೂರು ಗ್ರಾಪಂ ವ್ಯಾಪ್ತಿಯ ಹೆಚ್ ಕುನ್ನೂರು ಗ್ರಾಮದಲ್ಲಿಂದು ಆಯೋಜಿಸಲಾಗಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು. ಹಳ್ಳಿ ಜನರ ಕಷ್ಟ ಸುಖ ಮೇಲ್ಮಟ್ಟದ ಅಧಿಕಾರಿಗಳಿಗೆ ಗೊತ್ತಾಗೋದು ಇಲ್ಲಿ ಬಂದಾಗ ಮಾತ್ರ. ಹೀಗಾಗಿ ರಾಜ್ಯ…

Read More

ಕೋಟಿ ಹಣವಿದ್ದರೂ ತುತ್ತು ಅನ್ನಕ್ಕೆ ಪರದಾಟ : ಆಸ್ತಿ ಪಡೆದು ಕೈಕೊಟ್ಟ ಮಕ್ಕಳು – ಅನ್ನಕ್ಕಾಗಿ ಅಂಗಲಾಚುತ್ತಿರುವ ವೃದ್ದ|sadstory

ಹೊಸನಗರ : ಮನುಷ್ಯ ತನ್ನ ಜೀವನದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿ ಆಸ್ತಿಪಾಸ್ತಿಗಳನ್ನು ಗಳಿಸುವುದು ತನ್ನ ಮಕ್ಕಳು ತಾನು ಪಟ್ಟ ಕಷ್ಟ ಅನುಭವಿಸದಿರಲಿ ಹಾಗೂ ತಮ್ಮ ವೃದ್ದಾಪ್ಯ ಸ್ಥಿತಿಯಲ್ಲಿ ಆಸರೆಯಾಗಿ ಇರಲಿ ಎಂದು ತಾನೇ…ಆದರೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹಳ್ಳಿಯೊಂದರಲ್ಲಿ ತಾನು ಗಳಿಸಿದ ಆಸ್ತಿಯೇ ವೃದ್ದರೊಬ್ಬರಿಗೆ ಮುಳುವಾಗಿ ತುತ್ತು ಅನ್ನಕ್ಕೆ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಹೌದು ಹೊಸನಗರ ಪಟ್ಟಣದಿಂದ ಸುಮಾರು 12 ಕಿಮೀ ದೂರದಲ್ಲಿರುವ ಮಳಲಿ ಗ್ರಾಮದ ಅತೀ ಶ್ರೀಮಂತರಾಗಿ ಬಾಳಿ ಬದುಕಿದ್ದ ಮಳಲಿ ಶೀನಯ್ಯನವರು ತಮ್ಮ…

Read More

ಕುತ್ತಿಗೆ ಕತ್ತರಿಸುವ ಸಂಸ್ಕೃತಿ ನಮ್ಮದಲ್ಲ – ಕೊರಳಿಗೆ ಹಾರ ಹಾಕುವುದು ನಮ್ಮ ಭಾರತ ದೇಶದ ಸಂಸ್ಕೃತಿ : ಕಲ್ಲಡ್ಕ ಪ್ರಭಾಕರ್ ಭಟ್ |Ripponpet

ರಿಪ್ಪನ್‌ಪೇಟೆ : ಭಾರತ ದೇಶವನ್ನು ಮುಸಲ್ಮಾನ್, ಕ್ರೀಶ್ಚಿಯನ್ ದೇಶವನ್ನಾಗಿ ಮಾಡಬೇಕು ಎಂಬ ಹಿನ್ನಲೆಯಲ್ಲಿ ಜನಸಂಖ್ಯೆಯನ್ನು ಹೆಚ್ಚಿಸಿದರು.ಮತಾಂತರ ಮಾಡುವುದರೊಂದಿಗೆ ಭಯೋತ್ಪದನೆಯನ್ನು ಹುಟ್ಟು ಹಾಕಿ ಹಿಂದು ಧರ್ಮವನ್ನು ಒಡೆಯುವುದರೊಂದಿಗೆ ನಮ್ಮ ಸಂಸ್ಕೃತಿ ಸಂಸ್ಕಾರಕ್ಕೆ ದಕ್ಕೆ ತರುವ ಕಾರ್ಯದಲ್ಲಿ ತೊಡಗಿರುವವರಿಗೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಸಂಘಟನ್ಮಾಕವಾಗಿ ತಕ್ಕ ಉತ್ತರ ನೀಡುತ್ತದೆಂದು ಕರ್ನಾಟಕ ದಕ್ಷಿಣ ಪ್ರಾಂತ್ ಕಾರ್ಯಕಾರಣಿ ಅಹ್ವಾನಿತ ಸದಸ್ಯ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಎಚ್ಚರಿಸಿದರು. ರಿಪ್ಪನ್‌ಪೇಟೆಯ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ಸಾಗರ ಜಿಲ್ಲಾ ಪ್ರಾಂತ್ಯದ  ರಾಷ್ಟ್ರೀಯ ಸ್ವಯಂ ಸೇವಕರ ಸಂಘದವರು ಅಯೋಜಿಸಲಾದ…

Read More

ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಕಿಮ್ಮನೆ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ | ಶಿವಮೊಗ್ಗದಲ್ಲೊಂದು 7 ಚಕ್ರದ ಹೈಟೆಕ್ ಆಟೋ -ಏನಿದರ ವಿಶೇಷ??? ಸುದ್ದಿ ನೋಡಿ

ತೀರ್ಥಹಳ್ಳಿ: ಮೇಲಿನಕುರುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುರುವಳ್ಳಿ ಬಂಡೆಯಲ್ಲಿ ಕಾರ್ಮಿಕರಿಗೆ ಭೂ ಮತ್ತು ಗಣಿ ಅಧಿಕಾರಿಗಳು ಹಿಂಸೆ ನೀಡುತ್ತಿರುವುದನ್ನು ಖಂಡಿಸಿ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ನೆಡೆಸುತ್ತಿದ್ದಾರೆ.   ಗೃಹ ಸಚಿವರು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಬಂಡೆ ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವುದರಿಂದ ಶುಕ್ರವಾರ ಬೆಳಿಗ್ಗೆ 9 ಗಂಟೆಯೊಳಗಾಗಿ ಅವರ ಸಮಸ್ಯೆ ಬಗೆಹರಿಸಿದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಗಾಂಧಿ ಮತ್ತು ಅಂಬೇಡ್ಕರ್ ಫೋಟೋದೊಂದಿಗೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ…

Read More

ಅರಸಾಳು ಗ್ರಾಮ ಪಂಚಾಯತಿ ಅಧ್ಯಕ್ಷ ಉಮಾಕರ್ ರಾಜೀನಾಮೆ |arasalu

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾಕರ್ ರಾಜೀನಾಮೆ ಸಲ್ಲಿಸಿದ್ದಾರೆ. ಅರಸಾಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ 20 ತಿಂಗಳ ಕಾಲ ಕಾರ್ಯನಿರ್ವಹಿಸಿದ ಹೂವಪ್ಪ ಯಾನೆ ಉಮಾಕರ್ ಸಾಗರದ ಉಪ ವಿಭಾಗ ಅಧಿಕಾರಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಕೆಲಸದ ಒತ್ತಡ ಹಾಗೂ ಕಾರಣಾಂತರದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಾಗರ ನಗರಸಭೆಯ ವಿರೋಧ ಪಕ್ಷದ ನಾಯಕ ಗಣಪತಿ ಮಂಡಗಳಲೆ, ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಸದಸ್ಯ ಆಸಿಫ್ ಭಾಷಾಸಾಬ್,…

Read More

ರಿಪ್ಪನ್‌ಪೇಟೆಯಲ್ಲಿ ಆರ್ ಎಸ್ ಎಸ್ ಪಥಸಂಚಲನ : ಗಮನಸೆಳೆದ ಗಣವೇಷಧಾರಿಗಳು – ಕಲ್ಲಡ್ಕ ಪ್ರಭಾಕರ್ ಭಟ್ ರವರಿಂದ ಪುಷ್ಪಾರ್ಚನೆ|RSS

ರಿಪ್ಪನ್‌ಪೇಟೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಕರು ಪಟ್ಟಣದಲ್ಲಿ ಇಂದು ಗಣವೇಷ ಧರಿಸಿ ಪಥಸಂಚಲನ ನಡೆಸಿದರು. ಪಟ್ಟಣದ ಹೊಸನಗರ ರಸ್ತೆಯ ರಾಮಮಂದಿರದಿಂದ ಆರಂಭವಾದ ಪಥಸಂಚಲನ, ತೀರ್ಥಹಳ್ಳಿ ರಸ್ತೆ ಮಾರ್ಗವಾಗಿ ಚೌಡೇಶ್ವರಿ ಬೀದಿಯಿಂದ ಹಳೇ ಸಂತೆ ಮಾರ್ಕೇಟ್ ರಸ್ತೆಯಿಂದ ವಿನಾಯಕ ವೃತ್ತಕ್ಕೆ ಆಗಮಿಸಿ ಸಾಗರ ರಸ್ತೆಯ ಮೂಲಕ ಪಥಸಂಚಲನ ಸಾಗಿತು. ವಿನಾಯಕ ವೃತ್ತದಲ್ಲಿ ಅಲಂಕೃತ ವಾಹನದಲ್ಲಿದ್ದ ಡಾ.ಹೆಡ್ಗೆವಾರ್ ಮತ್ತು ಗೋಳ್ವಾಲ್ಕರ್ ಭಾವಚಿತ್ರಕ್ಕೆ ನಾಗರೀಕರು ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಪುಷ್ಪಾರ್ಚನೆ ಸಲ್ಲಿಸಿದರು.  ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

Read More

ಹೊಸನಗರದ ಕೊಡಚಾದ್ರಿ ಕಾಲೇಜಿನಲ್ಲಿ ಬೀಗ ಮುರಿದು ಕಳ್ಳತನ : ಕಾಲೇಜಿನ ಕಡತಗಳು ಚೆಲ್ಲಾಪಿಲ್ಲಿ |ಕ್ಯಾಡ್ ಫೌಂಡೇಶನ್ ವತಿಯಿಂದ ಕೋಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರ ಉಚಿತ ವಿತರಣೆ|hosangar

ಹೊಸನಗರ: ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಎಲ್ಲಾ ರೂಂಗಳ ಬೀಗಗಳನ್ನು ತುಂಡರಿಸಿ ಒಳ ನುಗ್ಗಿದ ದುಷ್ಕರ್ಮಿಗಳು ಸುಮಾರು 15ಕ್ಕೂ ಹೆಚ್ಚು ಕಾಲೇಜಿನ ಕಡತಗಳು, ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ಮೊದಲಾದ ದಾಖಲೆಗಳಿರುವ 09 ಗಾಡ್ರೇಜ್ ಬೀರುಗಳನ್ನು ಮುರಿದು ಬೀರುವಿನಲ್ಲಿದ್ದ ಕಡತಗಳನ್ನು ಚೆಲ್ಲಾಪಿಲ್ಲಿ ಮಾಡಿ ಗಾಡ್ರೇಜ್ ಬೀರುನಲ್ಲಿದ್ದ ಅಂದಾಜು 20 ಸಾವಿರ ರೂ. ಗಳಷ್ಟು ಹಣವನ್ನು ದೋಚಿಕೊಂಡು ಹೋಗಿರುವ ಘಟನೆ ತಡರಾತ್ರಿ 2:45 ರ ಸುಮಾರಿಗೆ ನಡೆದಿದೆ. ನಿನ್ನೆ ಸಂಜೆಯಿಂದ ಪಟ್ಟಣ ಹಾಗೂ ಸುತ್ತಮುತ್ತ…

Read More

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕ ಅಸ್ತಿತ್ವಕ್ಕೆ |SJKPS

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕ ಇಂದು ಅಸ್ತಿತ್ವಕ್ಕೆ ಬಂದಿದೆ. ಹೊಸನಗರ ಪಟ್ಟಣದ ಪ್ರವಾಸಿ ಮಂದಿರದಲ್ಲಿಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗೋಪಾಲ್ ಯಡಗೆರೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಘಟಕ ಅಸ್ತಿತ್ವಕ್ಕೆ ಬಂದಿತು. ನೂತನ ಅಧ್ಯಕ್ಷರಾಗಿ ವೆಂಕಟೇಶ್ ಮೂರ್ತಿ,ಉಪಾಧ್ಯಕ್ಷರಾಗಿ ನಾರಾಯಣ್ ಕಾಮತ್ ಮತ್ತು ರಫಿ ರಿಪ್ಪನ್‌ಪೇಟೆ ಪ್ರಧಾನ ಕಾರ್ಯದರ್ಶಿಯಾಗಿ ರಿ.ರಾ. ರವಿಶಂಕರ್ ಕಾರ್ಯದರ್ಶಿಯಾಗಿ ಹೆಚ್ ಎಸ್ ನಾಗರಾಜ್ ಕೋಶಾಧಿಕಾರಿಯಾಗಿ ರವಿರಾಜ್ ಎಂ.ಜಿ. ಭಟ್ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ದೀಪಕ್ ಸ್ವರೂಪ್…

Read More

ಅ.16ಕ್ಕೆ ತಳಲೆಯಲ್ಲಿ ಜಿಲ್ಲೆಯಲ್ಲಿಯೇ ಮೊದಲ ಬಹುಸೇವಾ ವಾಣಿಜ್ಯ ಸಂಕೀರ್ಣ ಉದ್ಘಾಟನೆ |Ripponpet

ರಿಪ್ಪನ್‌ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಬಾರ್ಡ್ ಯೋಜನೆಯಿಂದ ನಿರ್ಮಾಣಗೊಂಡ ಜಿಲ್ಲೆಯಲ್ಲಿಯೇ ಪ್ರಥಮ ಬಹುಸೇವಾ ವಾಣಿಜ್ಯ ಸಂಕೀರ್ಣ ಗೋದಾಮು ಅಕ್ಟೋಬರ್ 16 ರ ಭಾನುವಾರ ಬೆಳಿಗ್ಗೆ 11 ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ  ಹೆಚ್.ಎಸ್. ದಿನೇಶ್‌ಗೌಡ ಹೇಳಿದರು. ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಸುಮಾರು 70 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತವಾದ ಬಹುಮಹಡಿ ಸಂಕೀರ್ಣವನ್ನು ನಿರ್ಮಿಸಲಾಗಿದೆ. ನಬಾರ್ಡ್ ಯೋಜನೆಯಂತೆ…

Read More