ಕೆಂಚನಾಲದಲ್ಲಿ ಪ್ಲೆಕ್ಸ್ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ : ಗ್ರಾಮಸ್ಥರ ಮಧ್ಯಸ್ಥಿಕೆ |Flex
ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಪ್ಲೆಕ್ಸ್ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ನಂತರ ಗ್ರಾಮಸ್ಥರ ಮಧ್ಯಸ್ಥಿಕೆಯಿಂದಾಗಿ ತಿಳಿಗೊಂಡಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಚನಾಲ ಗ್ರಾಮದ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಟಿಪ್ಪು ಬ್ಯಾನರ್ ಕಟ್ಟಲು ಕೆಲ ಯುವಕರು ಮುಂದಾದಾಗ ಕೆಲ ಯುವಕರು ಆಕ್ಷೇಪಿಸಿದ್ದಾರೆ. ಕೆಂಚನಾಲ ವೃತ್ತದಲ್ಲಿ ಇದುವರೆಗೂ ಯಾವ ಬ್ಯಾನರ್ ಗಳನ್ನು ಹಬ್ಬದ ಸಂದರ್ಭದಲ್ಲಿಯೂ…