ಮೊದಲ ದಿನದ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದ SSLC ವಿದ್ಯಾರ್ಥಿಗಳು.
ರಿಪ್ಪನ್ ಪೇಟೆ : ಈ ಬಾರಿಯ SSLC ಮೊದಲ ದಿನದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಬರೆದಿದ್ದಾರೆ. ಪಟ್ಟಣದ ಸರ್ಕಾರಿ ಪ್ರೌಢಶಾಲೆ ಹಾಗೂ ಮೇರಿ ಮಾತಾ ಶಾಲೆಯಲ್ಲಿ ಪರೀಕ್ಷೆಗೆ ಸಕಲ ಸಿದ್ದತೆಗಳನ್ನು ಮಾಡಲಾಗಿತ್ತು.ಮೊದಲ ದಿನದ ಪರೀಕ್ಷೆಗೆ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಹಾಜರಾಗಿದ್ದರು. ಪೋಷಕರು ಪರೀಕ್ಷೆ ಮುಗಿಯುವವರೆಗೂ ಶಾಲಾ ಆವರಣದಲ್ಲಿ ಕಾಯುತ್ತಿದ್ದ ಸನ್ನಿವೇಶ ಕಂಡುಬಂತು. ಹೊಸನಗರ ತಾಲೂಕಿನಲ್ಲಿ ಒಟ್ಟಿ 1620 ವಿದ್ಯಾರ್ಥಿಗಳಲ್ಲಿ 1615 ವಿದ್ಯಾರ್ಥಿಗಳು ಈ ಬಾರಿಯ SSLC ಪರೀಕ್ಷೆಗೆ ಹಾಜರಾಗಿದ್ದಾರೆ. ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 9ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು…