ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮ ಗೋ ಸಾಕಾಣಿಕೆ : ಇಬ್ಬರಬಂಧನ
ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಗೋವಿನ ಮಾರಾಟ ಮತ್ತು ಸಾಗಾಣಿಕ ವಿರುದ್ಧ ದಾಳಿ ನಡೆಸಲಾಗಿದ್ದು ಒಂದು ಕಡೆ ಗೋವುಗಳನ್ನ ರಕ್ಷಿಸಲಾದರೆ ಇನ್ನೊಂದೆಡೆ ಮನೆಯಲ್ಲಿಯೇ ಗೋವನ್ನ ಕಡಿದು ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿದೆ ಬಂದಿದೆ. ಸಾಗರ ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಅಕ್ರಮವಾಗಿ ಮೂರು ಗೋವುಗಳನ್ನ ಟಾಟಾಏಸ್ ವಾಹನದಲ್ಲಿ ತುಂಬಿಸಿಕೊಂಡು ಹೋಗುವಾಗ ಪೊಲೀಸರು ತಡೆದು ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಆಟೋದಲ್ಲಿದ್ದ ಓರ್ವ ಪರಾರಿಯಾಗಿದ್ದಾನೆ. ಕಣಸೆ ಗ್ರಾಮದ ಗಣಪತಿ ಮತ್ತು ಆತನ ಪುತ್ರ ದೇವರಾಜ್ ನನ್ನ ಬಂಧಿಸಲಾಗಿದೆ. ಅದರಂತೆ…