ರೈತನ ಹೊಟ್ಟೆಗೆ ತಿವಿದ ಕಾಡುಕೋಣ..!!! ಚಿಂತಾಜನಕ ಸ್ಥಿತಿಯಲ್ಲಿರುವ ರೈತ ಮಣಿಪಾಲ್ ಆಸ್ಪತ್ರೆಗೆ ದಾಖಲು
ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಅರಣ್ಯ ವಲಯದ ಆಗುಂಬೆ ಗ್ರಾಮ ಪಂಚಾಯಿತಿಯ ಹೊಸೂರು ಬಳಿಯ ಅಸಿಮನೆಯಲ್ಲಿ ಕಾಡುಕೋಣವೊಂದು ರೈತರೊಬ್ಬರಿಗೆ ತಿವಿದ ಘಟನೆ ಸೋಮವಾರ ಸಂಜೆ ನಡೆದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕಳುಹಿಸಲಾಗಿದೆ. ಅಸಿಮನೆ ರಾಘವೇಂದ್ರ ಭಟ್ ಎಂಬುವರ ತೋಟಕ್ಕೆ ಬಂದಿದ್ದ ಕಾಡು ಕೋಣಗಳನ್ನು ರಾಘವೇಂದ್ರ ಭಟ್ ಮತ್ತು ಅವರ ಪತ್ನಿ ತೋಟದಿಂದ ಬೆರೆಸಲು ಹೋಗಿದ್ದಾಗ ಏಕಾಏಕಿ ಹೊಟ್ಟೆಗೆ ಇರಿದಿದೆ. ಗಂಭೀರ ಗಾಯಗೊಂಡ ರಾಘವೇಂದ್ರ ಭಟ್ ಅವರನ್ನು ಆಗುಂಬೆ ಭಾಗದ ಪ್ರಮುಖ ನಾಯಕ ಹಸಿರುಮನೆ ನಂದನ್ ಮತ್ತು ಸ್ನೇಹಿತರು ತಮ್ಮ…