ಆಸ್ತಿಯಲ್ಲಿ ಪಾಲು ಕೊಡದೇ ಎರಡನೇ ಮದುವೆಯಾದ ಅಪ್ಪ – ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಮಕ್ಕಳು|Murder mystery
ಆಸ್ತಿಯಲ್ಲಿ ಪಾಲು ಕೊಡದೆ, ಎರಡನೇ ಮದುವೆಯಾಗಿ ಮಗು ಮಾಡಿಕೊಂಡ ಅಪ್ಪನನ್ನು ಮೂವರು ಮಕ್ಕಳೇ ಸುಪಾರಿ ಕೊಟ್ಟು ಕೊಲ್ಲಿಸಿದ ಘಟನೆ ಶಿಕಾರಿಪುರದಲ್ಲಿ ನಡೆದಿದೆ. ತಾಲೂಕಿನ ಶಿರಾಳಕೊಪ್ಪದಲ್ಲಿ ನಡೆದ ಘಟನೆಯನ್ನು ಪೊಲೀಸರು ಭೇದಿಸಿದ್ದಾರೆ. ನ. 29ರಂದು ಕೆಎಸ್‌ಆರ್‌ಪಿಯ ನಿವೃತ್ತ ಎಸ್‌ಐ ನಾಗೇಂದ್ರಪ್ಪ ಎಂಬವರ ಶವ ಚರಂಡಿಯಲ್ಲಿ ಸಿಕ್ಕಿತ್ತು. ಇವರು ಶಿರಾಳಕೊಪ್ಪದ ಬೋವಿ ಗ್ರಾಮದವರು. ಆಸ್ತಿ ವಿಚಾರದಲ್ಲಿ ಕೊಲೆ ಶಂಕಿಸಿದ್ದ ಪೊಲೀಸರು ಆ ದಿಕ್ಕಿನಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ. ಬೋವಿ ಗ್ರಾಮದ ರಿಜ್ವಾನ್, ಹಬೀಬುಲ್ಲಾ, ಸುಹೇಲ್ ಎಂಬವರಿಂದ…