POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಖಾಸಗಿ ಬಸ್ ಚಾಲಕ – ನಿರ್ವಾಹಕರಿಗೆ ಸಮವಸ್ತ್ರ ಕಡ್ಡಾಯ – ಎಸ್ ಪಿ|Uniform

ಖಾಸಗಿ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಸಮಯದಲ್ಲಿ ಸಮವಸ್ತ್ರ ಧರಿಸುವುದು ಕಡ್ಡಾಯ. ತಪಾಸಣೆಯ ವೇಳೆ ಸಮವಸ್ತ್ರ ಧರಿಸದಿರುವುದು ಕಂಡು ಬಂದಲ್ಲಿ ಕಾನೂನು ರೀತಿ ಕ್ರಮ ನಿಶ್ಚಿತ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಎಚ್ಚರಿಸಿದರು.

ತಪಾಸಣೆಯ ವೇಳೆ ಸಮವಸ್ತ್ರ ಧರಿಸದಿರುವುದು ಕಂಡು ಬಂದಲ್ಲಿ ಕಾನೂನು ರೀತಿ ಕ್ರಮ ನಿಶ್ಚಿತ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಎಚ್ಚರಿಸಿದರು.

ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಆರ್‌ಟಿಒ ಗಂಗಾಧರ್‌ ಅವರೊಂದಿಗೆ ಸೇರಿ ಶಿವಮೊಗ್ಗದ ಖಾಸಗಿ ಬಸ್‌ಗಳ ಮಾಲೀಕರ ಸಭೆ ನಡೆಸಿದ ಅವರು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಹಾಗೂ ಅವರಿಗೆ ಯಾವುದೇ ತೊಂದರೆಯಾಗದಂತೆ ನಡೆದುಕೊಳ್ಳಲು ತಿಳಿಸಿದರು.

ಪ್ರಯಾಣಿಕರ ಸುರಕ್ಷತೆ ಮತ್ತು ರಸ್ತೆ ಅಪಘಾತ ತಡೆಗಟ್ಟುಲು ವೇಗ ಮಿತಿ ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬಸ್ ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೇ, ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲುಗಡೆ ಮಾಡಲು ಹೇಳಿದರು.

ಬಸ್ ಗಳಲ್ಲಿ ಸರಕು ಸಾಗಾಣಿಕೆಯ ಸಮಯದಲ್ಲಿ ಗಮನ ಹರಿಸುವುದು. ಒಂದು ವೇಳೆ ಯಾವುದೇ ಅನುಮಾನಾಸ್ಪದ ಸರಕು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲು ತಿಳಿಸಿದರು.

ಬಸ್‌ಗಳಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಕಂಡುಬಂದಲ್ಲಿ ಸಂಬಂಧಪಟ್ಟ ಖಾಸಗಿ ಬಸ್‌ಗಳ ಮಾಲೀಕರೇ ಹೊಣೆಗಾರರಾಗಿರುತ್ತಾರೆ ಎಂದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಉಪವಿಭಾಗದ ಡಿವೈಎಸ್ಪಿ ಬಾಲರಾಜ್, ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ ಮತ್ತು ಪಿಎಸ್‌ಐ (ಸಂಚಾರ) ರವರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.