Headlines

ಚೆಲುವೆಯ ಅಂದದ ಮುಖವನ್ನು ಹೋಲುವ ಕೀಟ ಪ್ರತ್ಯಕ್ಷ – ಮಲೆನಾಡ ಪ್ರಕೃತಿಯಲ್ಲೊಂದು ರೋಚಕ ಘಟನೆ|Hosanagara

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗರಕೊಡಿಗೆ ಗ್ರಾಮ ವಿಚಿತ್ರವಾದ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಈ ಗ್ರಾಮದ ಎಂ ಸಿ ಸುಬ್ರಮಣ್ಯ ಎಂಬುವರ ಮನೆಯಲ್ಲಿ ಚೆಲುವೆಯ ಅಂದದ ಮುಖವನ್ನು ಹೊತ್ತು ಕೀಟ ಒಂದು ಪ್ರತ್ಯಕ್ಷವಾಗಿ ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿ ಕೆಲಕಾಲ ಅಲ್ಲಿಯ ಸಂಚರಿಸಿ ನಂತರ ಕಣ್ಮರೆಯಾಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮನೆಯವರು ಅದರದೊಂದು ಫೋಟೋವನ್ನು ತೆಗೆದಿಟ್ಟುಕೊಂಡು ನಡೆದ ಘಟನೆಯ ಸಾಕ್ಷಿಯನ್ನಾಗಿಸಿದ್ದಾರೆ. ಹೌದು! ಚೆಲುವೆಯನ್ನು ಪೃಕೃತಿಗೆ ಹೋಲಿಸುತ್ತಾರೆ. ಆದರೆ ಪ್ರಕೃತಿಯಲ್ಲಿನ ಜೀವಿಯೊಂದು ಚೆಲುವೆಯ ಅಂದದ ಮುಖವನ್ನು ಹೊತ್ತು ತಂದಿತ್ತು. ಇಂತಹದೊಂದು ವಿಸ್ಮಯದ…

Read More

ಅರಸಾಳು ಗ್ರಾಪಂ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ- ಚುಕ್ಕಾಣಿ ಹಿಡಿದ ಬಿಜೆಪಿ ಬೆಂಬಲಿತರು – ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ|Arasalu

ರಿಪ್ಪನ್‌ಪೇಟೆ : ರಾಜೀನಾಮೆಯಿಂದ ತೆರವಾಗಿದ್ದ ಅರಸಾಳು ಗ್ರಾಪಂನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೆ.ಎನ್. ಉಮೇಶ್ ಕಡೆಗದ್ದೆ ಹಾಗು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಶಾಂತಕುಮಾರಿ ರವೀಂದ್ರ ಆಯ್ಕೆಯಾಗಿದ್ದಾರೆ. ಒಟ್ಟು 12 ಸಂಖ್ಯಾ ಬಲದ ಸದಸ್ಯರನ್ನು ಹೊಂದಿರುವ ಅರಸಾಳು ಗ್ರಾಪಂಗೆ ಈ ಹಿಂದಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಬಿಜೆಪಿ ಬೆಂಬಲಿತ ಉಮೇಶ್ ಕಡೆಗದ್ದೆಗೆ 7 ಮತ, ಪ್ರತಿಸ್ಪರ್ಧಿ…

Read More

ಮಣಿಪಾಲ ಆರೋಗ್ಯಕಾರ್ಡ್ 2022 ರ ನೋಂದಾವಣೆಯನ್ನು 30ನೇ ನವೆಂಬರ್ 2022 ರವರೆಗೆ ವಿಸ್ತರಣೆ | ಕಾರ್ಡ್ ಚಿಕ್ಕದು – ಸೌಲಭ್ಯ ದೊಡ್ಡದು -ಡಾ. ಅವಿನಾಶ್ ಶೆಟ್ಟಿ|Manipal card

ರಿಪ್ಪನ್‌ಪೇಟೆ : ಸಾರ್ವಜನಿಕ ಬೇಡಿಕೆಯ ಮೇರೆಗೆ ಮಣಿಪಾಲ ಆರೋಗ್ಯಕಾರ್ಡ್ 2022 ರ ನೋಂದಾವಣೆಯನ್ನು 30ನೇ ನವೆಂಬರ್ 2022 ರವರೆಗೆ ವಿಸ್ತರಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಹೇಳಿದರು.  ಪಟ್ಟಣದ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಣಿಪಾಲ ಆರೋಗ್ಯಕಾರ್ಡ್ (MAC) ಅನ್ನು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ಆರಂಭಿಸಲಾಯಿತು. ಮಣಿಪಾಲ್ ಕಾರ್ಡ್ “ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ” ಎಂಬುದು ಈ ವರ್ಷದ ದ್ಯೇಯ…

Read More

ಮನೆಗೆ ಬೆಂಕಿ ಇಟ್ಟು ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ – ರಿಪ್ಪನ್‌ಪೇಟೆಯ ಗವಟೂರು ಗ್ರಾಮದಲ್ಲೊಂದು ಅಮಾನವೀಯ ಘಟನೆ|Ripponpet

ರಿಪ್ಪನ್‌ಪೇಟೆ;- ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗವಟೂರು ಗ್ರಾಮದ ಸರ್ವೇ ನಂಬರ್ ೧೬೯ ರ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದ ಗಂಗಮ್ಮ ಕೋಂ ಎಸ್.ಚಂದ್ರಪ್ಪ ಎಂಬುವರ ಮೇಲೆ ಸದರಿ ಗ್ರಾಮದ ನಿವಾಸಿಗಳು ಜಾಗದ ವಿಚಾರದಲ್ಲಿ ಗಲಾಟೆ ಮಾಡಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಎಸಗಿ ವಾಸಿಸುತ್ತಿದ್ದ ಮನೆಗೆ ಬೆಂಕಿ ಹಚ್ಚಿ ಸಂಪೂರ್ಣ ನಾಶಗೊಳಿಸಿರುವ ಘಟನೆ ರಿಪ್ಪನ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಜಾಗದ ವಿಚಾರದಲ್ಲಿ ಕೇಸ್ ನ್ಯಾಯಾಲಯದಲ್ಲಿದ್ದು ನ್ಯಾಯಾಲಯದ ತೀರ್ಪು…

Read More

ಗಾಂಜಾ ಮಾರಾಟಕ್ಕೆ ಯತ್ನ – ಬೈಕ್ ಸಹಿತ ಮೂವರು ಯುವಕರ ಬಂಧನ|Arrested

ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂವರು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.   ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿ ನಿಸರ್ಗ ಬಡಾವಣೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಅಡಿ ಮೂವರು ಆರೋಪಿಗಳನ್ನ ಪೊಲೀಸರು ಬಂದಿಸಿದ್ದು 615 ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದಾರೆ. ಮಂಗಳವಾರ ಶಿವಮೊಗ್ಗ ಡಿವೈಎಸ್.ಪಿ ನೇತೃತ್ವದಲ್ಲಿ, ತುಂಗಾನಗರದ ಪಿಎಸ್ ಐ ಮತ್ತು ಸಿಬ್ಬಂಧಿಗಳ ತಂಡವು ನಿಸರ್ಗ ಲೇ ಔಟ್ ನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿತರಾದ 1) ಮದಾರಿ ಪಾಳ್ಯದ…

Read More

ತಾಯಿಯ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಹಿಂತಿರುಗಿದ ಮಗ ಹೃದಯಾಘಾತದಿಂದ ಸಾವು|Hosanagara

ಹೊಸನಗರ : ತಾಯಿಯ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದ ಮಗ ಸಹ ಸಾವನ್ನಪ್ಪಿದ ಘಟನೆ ತಾಲೂಕಿನ ಸುಳಗೋಡು ಗ್ರಾಮ ಪಂಚಾಯತಿಯ ಹುಲ್ಲುಸಾಲೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ಹುಲ್ಲುಸಾಲೆ ಗ್ರಾಮದ ಚಿನ್ನಮ್ಮ(78) ವಯೋ ಸಹಜವಾಗಿ ಸಾವನ್ನಪ್ಪಿದ್ದರು. ಇವರ ಅಂತ್ಯ ಸಂಸ್ಕಾರವನ್ನು ಭಾನುವಾರ ನಡೆಸಲಾಯಿತು. ತಾಯಿ ಚಿನ್ನಮ್ಮನ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದ 30 ನಿಮಿಷದ ನಂತರ ಚಿನ್ನಮ್ಮನ ಮಗ ತಿಮ್ಮಪ್ಪಗೌಡ(58) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಿಮ್ಮಪ್ಪಗೌಡ ತನ್ನ ತಾಯಿಯನ್ನು ಬಹಳ ಪ್ರೀತಿಸುತ್ತಿದ್ದರು. ಇದರಿಂದ…

Read More

ರಿಪ್ಪನ್‌ಪೇಟೆಯ ಸುಧೀಂದ್ರ ಆರ್ ಪ್ರಭು(ಕಲ್ಲು ಬಾಬಣ್ಣ) ನಿಧನ – ಸಂತಾಪ|Ripponpet

ರಿಪ್ಪನ್ ಪೇಟೆ ; ಪಟ್ಟಣದ ಹೊಸನಗರ ರಸ್ತೆಯ ನಿವಾಸಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಹಾಗೂ  ಸಪ್ತಗಿರಿ ಟ್ರೇಡರ್ಸ್  ಮಾಲೀಕ  ಸುಧೀಂದ್ರ ಆರ್ ಪ್ರಭು ಯಾನೆ ಕಲ್ಲು ಬಾಬಣ್ಣ ( 62) ವರ್ಷ  ಅವರು ಬುಧವಾರ ಬೆಳಗ್ಗೆ ಸ್ವಗೃಹದಲ್ಲಿ ಹೃದಯಾಘಾತದಿಂದ  ನಿಧನರಾದರು. 4 ದಶಕಗಳಿಂದ ಪಟ್ಟಣದಲ್ಲಿ ಮನೆ ಕಟ್ಟಡ ನಿರ್ಮಾಣದ ಸಾಮಗ್ರಿಗಳ ಮಾರಾಟದ ಮೂಲಕ  ಚಿರಪರಿಚಿತರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು  ಜನ ಮನ್ನಣೆ ಗಳಿಸಿದ್ದರು.  ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು,ಹಾಗೂ ಅಪಾರ ಬಂಧು ಬಳಗವನ್ನು…

Read More

ಹೆಲ್ಮೆಟ್ ಧರಿಸಿ ಸೈಕಲ್ ತುಳಿದು ಬೈಕ್ ಪ್ರಯಾಣಿಕರಿಗೆ ವಿಭಿನ್ನ ರೀತಿಯಲ್ಲಿ ಜಾಗೃತಿ ಮಾಡಿಸಿದ 72 ರ ಹರೆಯದ ಸಾಮಾಜಿಕ ಹೋರಾಟಗಾರ|Ripponpet

ರಿಪ್ಪನ್‌ಪೇಟೆ : 72 ವರ್ಷದ ಹಿರಿಯ ನಾಗರಿಕರೊಬ್ಬರು ತಮ್ಮ ಇಳಿ ವಯಸ್ಸಿನಲ್ಲಿಯೂ ಜನರಿಗೆ ಹೆಲ್ಮೆಟ್‌ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅದೂ ಸೈಕಲ್‌ ಮೂಲಕ ಎಂಬುದು ಮತ್ತೊಂದು ವಿಶೇಷ ಮೂರು ತಲೆಯ ಹೆಲ್ಮೆಟ್‌ ಹಾಕಿ, ತಮ್ಮ ಹಳೇ ಸೈಕಲ್‌ ಏರಿ ರಸ್ತೆಯುದ್ದಕ್ಕೂ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದಲ್ಲಿ ಜನಪರ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತರಾಗಿರುವ ಟಿ.ಆರ್.ಕೃಷ್ಣಪ್ಪ, ಸೈಕಲ್ ಸವಾರಿಯ ಮೂಲಕ ವಿಭಿನ್ನ ರೀತಿಯಲ್ಲಿ ಮೂರು ಹೆಲ್ಮೆಟ್ ಹಾಕಿಕೊಂಡು ಜನರಲ್ಲಿ ಜಾಗೃತಿ…

Read More

ರಿಪ್ಪನ್‌ಪೇಟೆ : ಸಿದ್ದಪ್ಪನಗುಡಿ ಬಳಿ ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಯುವಕನ ಬಂಧನ|Ripponpet

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಸಿದ್ದಪ್ಪನಗುಡಿ ಬಸ್ ನಿಲ್ದಾಣದ ಬಳಿ ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸಿದ್ದಪ್ಪನಗುಡಿ ನಿವಾಸಿ ಸಿದ್ದೇಶ್ ಬಂಧಿತ ಆರೋಪಿಯಾಗಿದ್ದಾನೆ. ವೈದ್ಯಕೀಯ ಪರೀಕ್ಷೆಯಿಂದ ಆರೋಪಿ ಗಾಂಜಾ ಸೇವನೆ ಮಾಡಿರುವುದು ಡೃಡಪಟ್ಟಿರುವ ಹಿನ್ನಲೆಯಲ್ಲಿ ಮಾದಕ ದ್ರವ್ಯ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ. ಘಟನೆಯ ಹಿನ್ನಲೆ : ಇಂದು ಬೆನವಳ್ಳಿ ಗ್ರಾಮದ ಸಿದ್ಧಪ್ಪನ ಗುಡಿ ಹತ್ತಿರ ರಿಪ್ಪನ್‌ಪೇಟೆ ಪೊಲೀಸರು ಗಸ್ತು ಸಂಚರಿಸುತ್ತಿರುವಾಗ ಬೆಳಿಗ್ಗೆ 10-45 ಗಂಟೆ ವೇಳೆಗೆ ಸಾರ್ವಜನಿಕ ಸ್ಥಳದಲ್ಲಿ…

Read More

ತೀರ್ಥಹಳ್ಳಿ : ಮುಸ್ಲಿಂ ಮಹಿಳೆಯರಂತೆ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ತಿರುಗಾಡುತಿದ್ದ ಪುರುಷ ವಶಕ್ಕೆ|Thirthahalli

ತೀರ್ಥಹಳ್ಳಿ : ಪಟ್ಟಣದ ಕುವೆಂಪು ವೃತ್ತದಲ್ಲಿ ಮಹಿಳೆಯರಂತೆ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಮತ್ತು  ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಈತನ ಹೆಸರು ರಾಜಾ ಎನ್ನಲಾಗಿದ್ದು ಸುಮಾರು 35 ವರ್ಷ ವಯಸ್ಸಿನವನು. ತಾನು ರಾಯಚೂರಿನಿಂದ ಬಂದವನು ಎಂದು  ಪೋಲಿಸರ ಮುಂದೆ ಹೇಳಿಕೊಂಡಿದ್ದಾನೆ.  ಮಂಗಳವಾರ ಬೆಳಿಗ್ಗೆ ಕುವೆಂಪು ವೃತ್ತದಲ್ಲಿ ಬುರ್ಖಾ ಧರಿಸಿದ್ದ ಈತನ ವೇಷ ಭೂಷಣ ವರ್ತನೆಯನ್ನು ನೋಡಿ ಸಾರ್ವಜನಿಕರು ಅನುಮಾನದಿಂದ ಪೋಲೀಸರಿಗೆ ಮಾಹಿತಿಯನ್ನು ನೀಡಿ ಆತನನ್ನು ಪೊಲೀಸರಿಗೊಪ್ಪಿಸಿದ್ದರು. ರಾಜಾನನ್ನು ಠಾಣೆಗೆ ಕರೆದೊಯ್ದ ಪೋಲೀಸರು…

Read More