January 11, 2026

ರಿಪ್ಪನ್ ಪೇಟೆಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಸಂಭ್ರಮ : ಸಂಭ್ರಮದ ಯಶಸ್ವಿಗೆ ಸಕಲ ಸಿದ್ಧತೆ : ಮಂಜುಳಾ ಕೇತಾರ್ಜಿ ರಾವ್

ರಿಪ್ಪನ್ ಪೇಟೆ : ಆಜಾದ್ ಕಿ ಅಮೃತ್ ಮಹೋತ್ಸವ ಅಂಗವಾಗಿ ರಿಪ್ಪನ್ ಪೇಟೆಯ ಗ್ರಾಮಾಡಳಿತ ಸಕಲಸಿದ್ಧತೆಯನ್ನು ಮಾಡಿದ್ದು 3000ಕ್ಕೂ ಅಧಿಕ ಜನರು ಈ ಸಂಭ್ರಮಕ್ಕೆ ಸಾಕ್ಷಿಗಳಾಗಲಿದ್ದಾರೆ ಎಂದು ಪಟ್ಟಣದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಕೇತರ್ಜಿ ರಾವ್ ಹೇಳಿದರು.

 ಇಂದು ಪೋಸ್ಟ್ ಮ್ಯಾನ್ ಸುದ್ದಿ ಬಳಗದೊಂದಿಗೆ ಮಾತನಾಡಿದ ಅವರು ನಮ್ಮ ದೇಶದ ಸ್ವಾತಂತ್ರ್ಯೋತ್ಸವದ ಆಜಾದ್ ಕೀ ಅಮೃತ್ ಮಹೋತ್ಸವವನ್ನು ಸಡಗರದಿಂದ ಆಚರಿಸಲು ದೇಶಾದ್ಯಂತ ಸಡಗರ ಹಾಗೂ ಸಂಭ್ರಮದಿಂದ ಸಿದ್ಧತೆಯನ್ನು ನಡೆಸುತ್ತಿದ್ದಾರೆ ಹಾಗೆಯೇ ನಮ್ಮ ರಿಪ್ಪನ್ ಪೇಟೆ ಗ್ರಾಮ ಆಡಳಿತವು ಸಹ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಿದ್ದು ಈಗಾಗಲೇ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪರವರು ಮನೆಮನೆಗೂ ಧ್ವಜವನ್ನು ತಲುಪಿಸುವಂತಹ ವ್ಯವಸ್ಥೆಯನ್ನು ಮಾಡಿದ್ದಾರೆ. 

ಜಾತಿ ಮತ ಪಂಥಗಳ ಭೇದವನ್ನು  ಮರೆತು  ಸದ್ಭಾವನೆಯಿಂದ ಎಲ್ಲರೂ ಬೆರೆತು ಸ್ವಾತಂತ್ರ್ಯಕ್ಕೆ ಹೋರಾಡುವ ಅವಕಾಶ ಸಿಗಲಿಲ್ಲ ಆದರೆ ಐತಿಹಾಸಿಕ ಅಮೃತ ಮಹೋತ್ಸವ ಆಚರಿಸುವ ಅವಕಾಶ ಸಿಕ್ಕಿದೆ. ತಿರಂಗಕ್ಕೆ ಹೆಗಲಾಗೋಣ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸೋಣ  ಎಂದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

About The Author

Leave a Reply

Your email address will not be published. Required fields are marked *