Headlines

ಮಾನವೀಯತೆ ಮೆರೆದ ಶಾಸಕ ಹರತಾಳು ಹಾಲಪ್ಪ :

ರಿಪ್ಪನ್‌ಪೇಟೆ : ಇಂದು ಶಾಸಕರು ಹರ್ ಘರ್ ತಿರಂಗ ಅಭಿಯಾನ ಅಂಗವಾಗಿ ಸಾಗರದಿಂದ ರಿಪ್ಪನ್‌ಪೇಟೆ ಗೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಬೈಕ್ ಅಪಘಾತದಲ್ಲಿ ತೀವ್ರ ರಕ್ತಸ್ರಾವವಾಗಿದ್ದ ಮಹಿಳೆಯೊಬ್ಬರನ್ನು ತಮ್ಮ ವಾಹನದಲ್ಲಿಯೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು.



ನೆವಟೂರು ಸಮೀಪದ ಆನೆಕೆರೆ ಗ್ರಾಮದ ಬಳಿ, ದೀಪಾ (CRP ಆಚಾಪುರ ಕ್ಲಸ್ಟರ್, ಶಿಕ್ಷಣ ಇಲಾಖೆ) ಎಂಬುವವರು ಅಪಘಾತಗೊಂಡು, ತೀವ್ರ  ರಕ್ತಸ್ರಾವದಲ್ಲಿರುವುದನ್ನು ಗಮನಿಸಿದ ಶಾಸಕರು ಕೂಡಲೇ ತಮ್ಮ ವಾಹನ ನಿಲ್ಲಿಸಿ ಅವರನ್ನು ತಮ್ಮ ವಾಹನದಲ್ಲಿಯೇ ರಿಪ್ಪನಪೇಟೆ ಪ್ರಾ.ಆ. ಕೇಂದ್ರಕ್ಕೆ ಸಾಗಿಸಿ, ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದರು.



ಶಾಸಕರ ಈ ಕಾರ್ಯವೈಖರಿಗೆ ಸಾರ್ವಜನಿಕರು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.


ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ ಡಿ ಮೇಘರಾಜ್ ಹಾಗೂ ಸ್ಥಳೀಯ ಮುಖಂಡರು ಇದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇

About The Author

Leave a Reply

Your email address will not be published. Required fields are marked *