w
Headlines
Home » ತೀರ್ಥಹಳ್ಳಿ : ಎಬಿವಿಪಿ ತಾಲೂಕು ಅಧ್ಯಕ್ಷನ ಮೇಲೆ ಯುವಕರಿಂದ ಹಲ್ಲೆ!!!: ಲಘು ಲಾಠಿ ಪ್ರಹಾರ

ತೀರ್ಥಹಳ್ಳಿ : ಎಬಿವಿಪಿ ತಾಲೂಕು ಅಧ್ಯಕ್ಷನ ಮೇಲೆ ಯುವಕರಿಂದ ಹಲ್ಲೆ!!!: ಲಘು ಲಾಠಿ ಪ್ರಹಾರ

ತೀರ್ಥಹಳ್ಳಿ : ಎಬಿವಿಪಿ ತಾಲೂಕು ಅಧ್ಯಕ್ಷ ಮತ್ತು ಆತನ ಸ್ನೇಹಿತನ ಮೇಲೆ 15 ಜನ ಯುವಕರು ಹಲ್ಲೆ ನಡೆಸಿದ್ದು ಗಲಾಟೆಯನ್ನ ಬಿಡಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಘಟನೆ ಪಟ್ಟಣದ ಬಾಳೆಬೈಲು ಸಮೀಪ ಇಂದು ನಡೆದಿದೆ.

ತೀರ್ಥಹಳ್ಳಿಯ ಜಿಪಿಎಸ್ ಸಿ ಕಾಲೇಜಿನಲ್ಲಿ ಬಿಸಿಎ ಓದುತ್ತಿರುವ ಹಾಗೂ ಎಬಿವಿಪಿ ಸಂಘಟನೆಯ ತಾಲೂಕು ಅಧ್ಯಕ್ಷ ಪ್ರತೀಕ್ ಗೌಡ ಮಳೆ ಅಧಿಕವಾಗಿರುವುದರಿಂದ ಮನೆಗೆ ತೆರಳಲು ಸ್ನೇಹಿತನಿಗೆ ಕಾರು ತರಲು ಹೇಳಿರುತ್ತಾನೆ. ಅದೇ ಸಮಯಕ್ಕೆ ನಿಶಾಂತ್ ಟಾಟಾ ಇಂಡಿಕಾ ಕಾರನ್ನ ತಂದಿದ್ದಾನೆ.

ಪ್ರತೀಕ್ ಗೌಡ ಕಾರಿನಲ್ಲಿ ಕುಳಿತುಕೊಂಡು ಕಾಲೇಜಿನ ಕಾಂಪೌಂಡ್ ನಿಂದ  ಹೋಗುತ್ತಿದ್ದಂತೆ ಕಾಲೇಜಿನ ಹೊರಭಾಗದಲ್ಲಿದ್ದ ಅದೇ ಕಾಲೇಜಿನ ಮತ್ತು ಇತರೆ ಇಬ್ಬರು ಯುವಕರು ಕಾರನ್ನ ತಡೆದು ಕಾರಿನ ಡೋರನ್ನ ಒಡೆದು ಕಾರಿನಲ್ಲಿರುವ ಇಬ್ಬರು ಯುವಕರನ್ನ ಹೊರಗೆ ಎಳೆಯಲು ಯತ್ನಿಸಿದ್ದಾರೆ.

ಅಬ್ದುಲ್ ವಾಜಿದ್, ನಿಹಾರ್, ನಿಹಾನ್ ,ಹ್ಯಾರಿಸ್, ಸದಾಪ್ ಸಾವಿದ್ ರಿಜ್ವಾನ್, ಜೇಶನ್,ಮಾಸೂಮ್ ಇನ್ನಿತರೆ ಹೊರಗಿನ ಯುವಕರು ಈ ಇಬ್ಬರು  ಯುವಕರನ್ನ ಕಾರಿನಿಂದ ಹೊರಗೆ ಎಳೆದು ತಳಿಸಿ ನೆಲಕ್ಕೆ ಉರುಳಿಸಿ ಥಳಿಸಿದ್ದಾರೆ. ಕೈಕಾಲುಗಳಿಗೆ ಕಲ್ಲುಗಳಿಂದ ಥಳಿಸಿದ್ದಾರೆ. ನಮ್ಮ ತಂಟೆಗೆ ಬಂದರೆ ನಿಮ್ಮನ್ನ ಜೀವಂತವಾಗಿ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾರೆ.

ಈ ವೇಳೆ ಪೊಲೀಸರು ಸ್ಥಳಕ್ಕೆ ಬಂದಿದ್ದು ಜಗಳ ಬಿಡಿಸಲು ಯತ್ನಿಸಿದ್ದು  ಇಬ್ಬರು ಯುವಕರನ್ನ 15 ಜನರ ಗ್ಯಾಂಗ್ ಬಿಡಲು ಸಿದ್ದವಿರಲಿಲ್ಲ. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಲಾಠಿ ಪ್ರಹಾರ ಮಾಡುತ್ತಿದ್ದಂತೆ ಹಲ್ಲೆ ನಡೆಸಿದ ಗ್ಯಾಂಗ್ ಅಲ್ಲಿಂದ ಜಾಗ ಖಾಲಿಮಾಡಿದ್ದಾರೆ .

ಈ ಘಟನೆ ಹಳೇಯ ದ್ವೇಷದಿಂದ ನಡೆದಿದೆ ಎಂದು ಆರೋಪಿಸಿ ಪ್ರತೀಕ್ ಗೌಡ  ಅಬ್ದುಲ್ ವಾಜಿದ್, ನಿಹಾರ್, ನಿಹಾನ್ ,ಹ್ಯಾರಿಸ್, ಸದಾಪ್ ಸಾವಿದ್ ರಿಜ್ವಾನ್, ಜೇಶನ್,ಮಾಸೂಮ್ ಇನ್ನಿತರೆ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.