ಹುಂಚ ಪತ್ತಿನ ಸಹಕಾರಿ ಬ್ಯಾಂಕ್ ಸಿಇಓ ರನ್ನು ನಿವೃತ್ತಿಗೊಳಿಸಲು ವಾರ್ಷಿಕ ಮಹಾಸಭೆಯಲ್ಲಿ ಒಕ್ಕೊರಲಿನ ನಿರ್ಧಾರ

ರಿಪ್ಪನ್‌ಪೇಟೆ: ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ವಹಣೆ ಸರಿಯಾಗಿ ಮಾಡದ ಕಾರ್ಯನಿರ್ವಾಹಣಾಧಿಕಾರಿಯನ್ನು ಕೂಡಲೇ ಹುದ್ದೆಯಿಂದ ನಿವೃತ್ತಿಗೊಳಿಸಿ ಸಂಸ್ಥೆ ಉಳಿಸಿ ಎಂಬ ಆಗ್ರಹವು ವಿಶೇಷ ಮಹಾಸಭೆಯಲ್ಲಿ ಸರ್ವಸದಸ್ಯರು ಒಕ್ಕೊರಲಾಗಿ ನಿರ್ಧರಿಸಿ ತನಿಖೆ ನಡೆಸುವಂತೆ ಆಗ್ರಹಿಸಿದರು.


ಹುಂಚ ರಂಗರಾವ್ ಸ್ಮಾರಕ ಸಭಾಭವನದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿಯಮಿತದ 2020-21 ನೇ ಸಾಲಿನ ವಿಶೆಷ ಮಹಾಸಭೆಯಲ್ಲಿ ಸಂಘದ ಸಿಇಓ ಇವರ ಬೇಜವಾಬ್ದಾರಿಯ ಬಗ್ಗೆ ಆಕ್ಷೇಪವೆತ್ತಿದ ಸಂಘದ ಸದಸ್ಯರು 2020-21 ಸಾಲಿನ ಲೆಕ್ಕ ಪರಿಶೋಧನಾ ವರದಿ ಸಭೆಯಲ್ಲಿ ಮಂಡಿಸಿರುವ ಬಗ್ಗೆ ಭಾರಿ ವಿರೋಧ ವ್ಯಕ್ತಪಡಿಸಿ ಈ ಹಿಂದಿನ ಸಾಲಿನ ಲೆಕ್ಕ ಪರಿಶೋಧನೆಗೆ ಆಡಳಿತ ಮಂಡಳಿ ಮುಂದಾದಾಗ ಲೆಕ್ಕಪತ್ರಗಳಲ್ಲಿ ಬಹಳಷ್ಟು ನ್ಯೂನ್ಯತೆಗಳು ಕಂಡುಬಂದಿದೆ. ಸಂಘದ ವ್ಯವಹಾರ ವಹಿವಾಟಿನ ಅಂಕಿಅಂಶಗಳು ವ್ಯತ್ಯಾಸ ಇರುತ್ತೆದೆ ಎಂದು ಆರೋಪಿಸಿದರು.



ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಘದಿಂದ ಅಮಾನತುಗೊಂಡಿರುವ ಸಿಇಓ ಹೆಚ್.ಸರೋಜರವರು ಸಂಘದ ವ್ಯವಹಾರದ ಪೂರಕ ದಾಖಲೆಗಳನ್ನು ಒದಗಿಸುವಲ್ಲಿ ವಿಫಲರಾಗಿರುತ್ತಾರೆ. ಸಂಘದ ಚುನಾಯಿತ ಪ್ರತಿನಿಧಿಗಳಿಗೆ ಗೌರವ ನೀಡದೆ ಕೆಲವು ವಿಷಯಗಳಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುತ್ತಾರೆ ವರ್ತನೆಯನ್ನು ಸರಿಪಡಿಸಿಕೊಳ್ಳುವಂತೆ ಆಡಳಿತ ಮಂಡಳಿ ಸಾಕಷ್ಟು ಬಾರಿ ತಿಳುವಳಿಕೆ ಪತ್ರ ನೀಡಿದರೂ ಗಮನಕ್ಕೆ ತೆಗೆದುಕೊಂಡಲ್ಲಿ ಇದರಿಂದ ಕೃಷಿ ಪತ್ತಿನ ಸಹಕಾರ ಸಂಘದ ಹಾಗೂ ಅಡಳಿತ ಮಂಡಳಿಗೆ ಕೆಟ್ಟ ಹೆಸರುಬರುವ ಅಪಾಯವಿರುವುದರಿಂದ ಶೀಘ್ರ ಕಾನೂನಾತ್ಮಕ ತನಿಖೆ ನಡೆಸಿ ಕ್ರಮ ಕೈಗೊಂಡು ಸಿಇಓ ಹೆಚ್.ಸರೋಜ ಅವರನ್ನು ಕೂಡಲೇ ನಿವೃತ್ತಿಗೊಳಿಸಿ ಸಂಸ್ಥೆಯನ್ನು ಉಳಿಸಿ ಎಂದು ಒಕ್ಕೊರಲಿನಿಂದ ಮೇಲಾಧಿಕಾರಿಗಳನ್ನು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಯದುಕುಮಾರ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್‌ನ ಕ್ಷೇತ್ರಾಧಿಕಾರಿ ಇಂದ್ರಕುಮಾರ,ಸಂಘದ ಉಪಾಧ್ಯಕ್ಷರಾದ ಆರ್ ರಾಘವೇಂದ್ರ ಹುಂಚದಕಟ್ಟೆ,
ನಿರ್ದೇಶಕರಾದ ಹೆಚ್.ಜಿ.ರಾಜಶೇಖರ ಹಿರೇಬೈಲು, ಓ.ಆರ್.ವಿನಾಯಕ, ಮಂಜು ಭಟ್, ನಾಗೇಶ್, ಯಶಸ್ವತಿ ವೃಷಭರಾಜ್ ಜೈನ್, ಪ್ರೇಮ, ಮಲ್ಲಿಕಾ, ಚಂದ್ರಮ್ಮ, ಸತೀಶ್‌ಭಟ್ ಹಾಗೂ ಷೇರುದಾರರಾದ ರೇಣುಕಪ್ಪ ಗೊರ್ನಹಳ್ಳಿ,ಮಂಜುನಾಥ, ಸತ್ಯನಾರಾಯಣ ಮೊದಲಮನೆ, ಅನಂತರಾವ್ ಕಡಸೂರು,ಶ್ರೀಧರ್,ಗಿರೀಶ್ ಹೊನ್ನೆಬೈಲ್,ಶಂಕರಣ್ಣ ಕೀಚಲುಕೊಪ್ಪ,ದಿನೇಶ್ ಪೂಜಾರಿ ಹುಂಚಾ ಮತ್ತು ಸಂಘದ ಎಲ್ಲಾ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *