Headlines

ತೀರ್ಥಹಳ್ಳಿ ತುಂಗಾ ನದಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆ :

ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಅಪರಿಚಿತ ಯುವಕನೋರ್ವನ ಶವವೊಂದು ಪತ್ತೆಯಾಗಿದೆ.


ಇಂದು ರಾಮೇಶ್ವರ ದೇವಸ್ಥಾನದ ಹಿಂಭಾಗದ ನದಿಯಲ್ಲಿ ಪತ್ತೆಯಾಗಿದೆ. 
ಅಪರಿಚಿತ ಯುವಕನೊಬ್ಬ ಭಾನುವಾರ ತನ್ನ ಚಪ್ಪಲಿ, ಶರ್ಟ್, ಪ್ಯಾಂಟ್ ಬಿಚ್ಚಿಟ್ಟು ಸ್ನಾನ ಮಾಡಲು ನದಿಗೆ ಇಳಿದಿದ್ದನು ಎನ್ನಲಾಗಿದೆ.

ಸ್ಥಳೀಯ ಸಾರ್ವಜನಿಕರ ಮಾಹಿತಿ ಮೇರೆಗೆ ಕುರುವಳ್ಳಿಯ ಸಮಾಜ ಸೇವಕ ಪ್ರಮೋದ್ ಪೂಜಾರಿ ಮತ್ತು ತಂಡ ಹಾಗೂ ಅಗ್ನಿಶಾಮಕದಳದವರು ಶವವನ್ನು ಹುಡುಕಲು ಮುಂದಾಗಿದ್ದರು. 

ಇಂದು ತುಂಗಾ ಸೇತುವೆ  ಸಮೀಪ ಶವ ಪತ್ತೆಯಾಗಿದ್ದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

About The Author

Leave a Reply

Your email address will not be published. Required fields are marked *