w
Headlines
Home » ಶಾಸಕರ ರೌಡಿ ಬೆಂಬಲಿಗರ ವಿರುದ್ದ ಕ್ರಮ ಕೈಗೊಳ್ಳಿ,ಸಾಗರ ಕ್ಷೇತ್ರದ ಮರ್ಯಾದೆ ಉಳಿಸಿ : ಗೋಪಾಲಕೃಷ್ಣ ಬೇಳೂರು

ಶಾಸಕರ ರೌಡಿ ಬೆಂಬಲಿಗರ ವಿರುದ್ದ ಕ್ರಮ ಕೈಗೊಳ್ಳಿ,ಸಾಗರ ಕ್ಷೇತ್ರದ ಮರ್ಯಾದೆ ಉಳಿಸಿ : ಗೋಪಾಲಕೃಷ್ಣ ಬೇಳೂರು

ಸಾಗರದಲ್ಲಿ ಬಿಜೆಪಿ ಪಕ್ಷದ ಯುವಮೋರ್ಚಾ ಅಧ್ಯಕ್ಷ ಅರುಣ್ ಕುಗ್ವೆ ರವರನ್ನು ಬಂಧಿಸುವಂತೆ ಒತ್ತಾಯಿಸಿ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲಿ ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು 

ಈ ಸಂದರ್ಭದಲ್ಲಿ ಮಾತನಾಡಿದ ಗೋಪಾಲಕೃಷ್ಣ ಬೇಳೂರು ಸಾಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇತ್ತೀಚೆಗೆ ಭೂಮಾಫಿಯ ಹೆಚ್ಚಾಗಿದ್ದು ಆಡಳಿತರೂಢ ಬಿಜೆಪಿ ಪಕ್ಷದ ಮುಖಂಡರುಗಳು ತಮ್ಮ ಶಾಸಕರ ಕುಮ್ಮಕ್ಕಿನಿಂದ ಭೂ ಮಾಫಿಯಾ ದಂಧೆ ಮಾಡುತ್ತಿದ್ದು ಇದರ ಬಗ್ಗೆ ಸಾಮಾನ್ಯ ಜನರು ಪ್ರಶ್ನೆ ಮಾಡಿದಲ್ಲಿ ಅಂಥವರ ಮೇಲೆ ಮಾರಣಾಂತಿಕ ಹಲ್ಲೆ ಮಾಡುತ್ತಿರುವುದು ಹೆಚ್ಚಾಗುತ್ತಿದೆ ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅರುಣ್ ಕುಗ್ವೆ ಎಂಬುವವನು ಮನೋಜ್ ಕುಗ್ವೆ ಎಂಬುವವರ ಮೇಲೆ ಹಲ್ಲೆ ನಡೆಸಿರುವುದೇ ತಾಜಾ ನಿದರ್ಶನ ಈ ಅರುಣ್ ಕುಗ್ವೆ ಒಬ್ಬ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು ಈತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಸಾಗರ ಕ್ಷೇತದ ಶಾಸಕರ ಆಡಳಿತದಲ್ಲಿ ರೌಡಿಸಂ ದಬ್ಬಾಳಿಕೆ ಮೂಲಕ ಭೂಮಾಫಿಯಾದಲ್ಲಿ ಶಾಮೀಲಾಗಿ ಸಾಮಾನ್ಯ ಜನರ ಮೇಲೆ ದಬ್ಬಾಳಿಕೆ ಹೆಚ್ಚಾಗಿದ್ದು, ಎಂಡಿಎಫ್ ಗಲಾಟೆಯೇ ಅದಕ್ಕೆ ಉದಾಹರಣೆ. ಇಲ್ಲಿಯವರೆಗೂ ಆ ಗಲಾಟೆಯಲ್ಲಿ ಪಾಲ್ಗೊಂಡವರ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಯೋಗ್ಯತೆ ಸರ್ಕಾರಕ್ಕಾಗಲಿ, ಶಾಸಕರಿಗಾಗಲಿ, ಪೊಲೀಸ್ ಇಲಾಖೆಗಾಗಲಿ ಇಲ್ಲದಿರುವುದೇ ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು 

ನಿನ್ನೆಯ ದಿನ ಮನೋಜ್ ಕುಗ್ವೆ ಎಂಬುವವರ ಮೇಲೆ ಹಲ್ಲೆ ನಡೆಸಿರುವುದಲ್ಲದೆ, ಆಸ್ಪತ್ರೆಗೆ ನುಗ್ಗಿ ತಲೆ ಹೊಡೆದಿದ್ದಾರೆ. ಇಂತಹ ಸುಸಂಸ್ಕೃತ ಕ್ಷೇತ್ರ ಸಾಗರದಲ್ಲಿ ಈ ರೀತಿಯ ಘಟನೆ ನಡೆಯುತ್ತಿರುವುದು ಖೇದಕರ!!, ಪೊಲೀಸ್ ಇಲಾಖೆಗೆ ನೈತಿಕತೆ ಇದ್ದಲ್ಲಿ ಅರುಣ್ ಕುಗ್ವೆ ಮೇಲೆ ಕ್ರಮ ತೆಗೆದುಕೊಳ್ಳಬೇಕು ಒಂದು ವೇಳೆ ತೆಗೆದುಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು 

ಸಾಗರ ಕ್ಷೇತ್ರದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಕೆಲವು ಕಿಡಿಗೇಡಿಗಳಿಗೆ ಶಾಸಕರ ಬೆಂಬಲವಿದ್ದು ಗೃಹ ಸಚಿವರ ಮೂಲಕ ಅವರ ಮೇಲೆ ಯಾವುದೇ ದೂರು ದಾಖಲಾಗದಂತೆ ನೋಡಿಕೊಳ್ಳುತ್ತಾರೆ 

ಸಾಗರದಲ್ಲಿರುವ ಎಎಸ್ಪಿ ರೋಹನ್ ಜಗದೀಶ್ ರವರು ದಕ್ಷ ಅಧಿಕಾರಿಯಾಗಿದ್ದಾರೆ ಅವರ ಮೇಲೆ ನಂಬಿಕೆ ಯಿಂದ ಬಂದು ನಮ್ಮ ಮನವಿ ಕೊಟ್ಟಿದ್ದೇವೆ ನಮ್ಮ ಮನವಿಯನ್ನು ಅವರು ಪುರಸ್ಕರಿಸುತ್ತಾರೆಂಬ ಅಚಲವಾದ ನಂಬಿಕೆಯಿದೆ ಎಂದರು.

ಈ ಹಿಂದೆ ಹಲವು ಬಾರಿ ಗಡಿ ಗಡಿಪಾರಾಗಿರುವ ಅರುಣ್ ಕುಗ್ವೆ ಸಾಗರ ಕ್ಷೇತ್ರದಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದಬ್ಬಾಳಿಕೆ ಹಾಗೂ ರಾಬರಿ ಪ್ರಕರಣಗಳಲ್ಲಿ ಕಂಡು ಬಂದಿರುತ್ತಾನೆ ಆ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ನಡೆಸಿ ಆತನ ವಿರುದ್ಧ ಕ್ರಮ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಎಎಸ್ಪಿ ರೋಹನ್ ಜಗದೀಶ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಾಗರ ನಗರಸಭೆ ವಿರೋಧ ಪಕ್ಷದ ನಾಯಕ ಗಣಪತಿ ಮಂಡಗಳಲೆ, ಜಿ.ಪಂ ಮಾಜಿ ಸದಸ್ಯೆ ಅನಿತಾ ಕುಮಾರಿ,ಅಶೋಕ್ ಬೇಳೂರು,ರವಿ ಕುಗ್ವೆ,  ವಿ.ಶಂಕರ್, ಯಶ್ವಂತ್ ಫಣಿ,ಸಂತೋಷ್ ಸದ್ಗುರು,ರವಿ ಲಿಂಗನಮಕ್ಕಿ. ತಾರಮೂರ್ತಿ,ಅನ್ವರ್,ಸಲೀಂ,ರಮೇಶ್ ಚಂದ್ರಗುತ್ತಿ,ಹಂಸ ರಾಮನಗರ,ಚಿನ್ಮಯ್ ಮೊದಲಾದವರು ಇದ್ದರು.

ಪ್ರತಿಭಟನೆಯ ವೀಡಿಯೋ ಇಲ್ಲಿ ವೀಕ್ಷಿಸಿ👇




Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.