w
Headlines
Home » ಹೊಸನಗರ ವಿಧಾನ ಸಭಾ ಕ್ಷೇತ್ರ ಮರಳಿ ಪಡೆಯುವ ಹೋರಾಟದ ಪೂರ್ವಭಾವಿ ಸಭೆ : ಹೋರಾಟಕ್ಕೆ ನಿಟ್ಟೂರು ಶ್ರೀಗಳ ಸಾರಥ್ಯ !!!!!

ಹೊಸನಗರ ವಿಧಾನ ಸಭಾ ಕ್ಷೇತ್ರ ಮರಳಿ ಪಡೆಯುವ ಹೋರಾಟದ ಪೂರ್ವಭಾವಿ ಸಭೆ : ಹೋರಾಟಕ್ಕೆ ನಿಟ್ಟೂರು ಶ್ರೀಗಳ ಸಾರಥ್ಯ !!!!!

ಹೊಸನಗರ ವಿಧಾನಸಭಾಕ್ಷೇತ್ರ ಹೋರಾಟದ ಕೂಗು ಸಂಘಟನೆಯೇ ಶಕ್ತಿ ಎಂಬ ದ್ಯೇಯದೊಂದಿಗೆ ಮುಂದಿನ ಹೋರಾಟದ ರೂಪುರೇಷೆ ಸಭೆ ನಡೆಯಿತು.

ಸಂಘಟನೆಯೇ ಮೂಲಶಕ್ತಿ ಎಂಬ ಯೋಜನೆ ಮುಖಾಂತರ ಇಂದು ಹೊಸನಗರದ ಗಾಯತ್ರಿ ಮಂದಿರದಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರ  ಹೋರಾಟದ ಪೂರ್ವಭಾವಿ ರೂಪುರೇಷಗಳನ್ನು ಚರ್ಚಿಸುವುದಕ್ಕಾಗಿ ಇಂದು ಸರ್ವಧರ್ಮದ ಪ್ರಮುಖರು, ಸರ್ವ ಪಕ್ಷದ ಪ್ರಮುಖರು ಹಾಗೂ ಹೊಸನಗರ ತಾಲೂಕಿನ ನಾಗರಿಕರು ಉಪಸ್ಥಿತರಿದ್ದರು.

ಈ ಸಭೆಯ ಉದ್ದೇಶ ಸಂಘಟನೆ ಮತ್ತು ಹೋರಾಟದ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು ಬೇಕಾದಂತಹ ಯೋಜನೆಯನ್ನು ರೂಪಿಸುವುದಾಗಿತ್ತು ಅದರಂತೆ ಉಪಸ್ಥಿತರಿದ್ದ ಮುಖಂಡರುಗಳು ಸ್ವಾಮೀಜಿಗಳು ಮತ್ತು ಸದಸ್ಯರುಗಳಿಂದ ಹಲವು ವಿಷಯಗಳ ಪ್ರಸ್ತಾಪ ಮತ್ತು ಕಾರ್ಯತಂತ್ರಗಳ ಕುರಿತು ಚರ್ಚಿಸಲಾಯಿತು.

ಅದರಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಘಟನೆಯನ್ನು ಗಟ್ಟಿಗೊಳಿಸಿ ಹೊಸನಗರದಿಂದ ದಿಲ್ಲಿಯವರೆಗೆ ನಮ್ಮ ಕೂಗು ಹೋರಾಟ ಸುದ್ದಿಯಾಗಬೇಕು ಎಂದು ಎಲ್ಲರೂ ಅಭಿಪ್ರಾಯಪಟ್ಟರು.
ಅದರಂತೆಯೇ ಪ್ರಸ್ತುತ ಶಾಸಕರು ಮತ್ತು ಸಂಸದರ ಮುಖಾಂತರ ಸರ್ಕಾರದ ಮೇಲೆ ಒತ್ತಡ ತಂದು ಸದರಿ ನಿಯಮೋಪಾಯಗಳನ್ನು ಬದಲಿಸಿ ಹೊಸನಗರ ಕ್ಷೇತ್ರ ಮಾಡಲು ಅನುವು ಮಾಡಿಕೊಡುವಂತೆ ನ್ಯಾಯಯುತವಾಗಿ ಕೇಂದ್ರ ಸರ್ಕಾರದ ಮೊರೆಹೋಗಲು ಚಿಂತಿ ಸಲಾಯಿತು 

ಈ ನಿಟ್ಟಿನಲ್ಲಿ ಮುಂದಿನ ಸಭೆಯನ್ನು ಕರೆದು ಮುಂದಿನ ಹೋರಾಟಕ್ಕೆ  ಅಣಿಯಾಗುವುದು.

ಈ ಸಭೆಯಲ್ಲಿ ನಿಟ್ಟೂರು ಮಠದ ಸ್ವಾಮೀಜಿಗಳು ರೇಣುಕಾನಂದ ಶ್ರೀಗಳು, ಮಾಜಿ ಶಾಸಕರಾದ ಶ್ರೀ ಸ್ವಾಮಿರಾವ್, ಕಲಗೋಡು ರತ್ನಾಕರ್ ,ಆರ್ ಎ ಚಾಬುಸಾಬ್, ಸುರೇಶ್ ಸ್ವಾಮಿರಾವ್, ವೀರೇಶ್ ಆಲವಳ್ಳಿ, ಕೆವಿ ಮಲ್ಲಿಕಾರ್ಜುನ್, ಬಿಜಿ ನಾಗರಾಜ್, ಗಣಪತಿ ಬೆಳಗೊಡು, T R ಕೃಷ್ಣಪ್ಪ ಹಾಗೂ ಇತರ ಹೋರಾಟಗಾರರು ಉಪಸ್ಥಿತರಿದ್ದರು.



ಮಾಹಿತಿ : ಅಜಿತ್ ಬಡೆನಕೊಪ್ಪ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.