Headlines

ರಿಪ್ಪನ್‌ಪೇಟೆ ಪದವಿ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ರಿಪ್ಪನ್‌ಪೇಟೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿ ಪ್ರಜ್ವಲ್ ಎನ್ ಎಮ್ ಉತ್ತರಾಖಂಡ ರಾಜ್ಯದ ರುದ್ರಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ 23ನೇ ಯುವ ವಾಲಿಬಾಲ್ ಚಾಂಪಿಯನ್‌ ಶಿಪ್ ಗೆ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ರಾಷ್ಟೀಯ ಮಟ್ಟದ  ವಾಲಿಬಾಲ್ (21ವರ್ಷದೊಳಗಿನ ವಯೋಮಿತಿ) ಪಂದ್ಯವು ಇದೇ ತಿಂಗಳ 11 ರಿಂದ 16 ರವರೆಗೆ ಉತ್ತರಾಖಂಡ ರಾಜ್ಯದ ರುದ್ರಪುರದಲ್ಲಿ ನಡೆಯಲಿದೆ.


ರಿಪ್ಪನ್ ಪೇಟೆಯ ವಿದ್ಯಾ ನಗರ ನಿವಾಸಿಗಳಾದ ಶಿಕ್ಷಕರಾದ ಮಹೇಶ್ವರ ಆಚಾರಿ ಹಾಗೂ ಮೀನಾಕ್ಷಿ ದಂಪತಿಗಳ ಪುತ್ರನಾದ ಪ್ರಜ್ವಲ್ ಎನ್ ಎಂ ರಿಪ್ಪನ್ ಪೇಟೆಯ ಸಿದ್ದಿ ವಿನಾಯಕ ವಾಲಿಬಾಲ್ ಕ್ಲಬ್ ತಂಡದ ಆಟಗಾರರಾಗಿದ್ದರು.

ಕರ್ನಾಟಕ ರಾಜ್ಯ ಪ್ರತಿನಿಧಿಸುವ ಅವಕಾಶ ಪಡೆದಿರುವ ಪ್ರಜ್ವಲ್ ಎನ್ ಎಂ ರವರಿಗೆ ರಿಪ್ಪನ್‌ಪೇಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಹರತಾಳು ಹಾಲಪ್ಪ ,ಪ್ರಾಚಾರ್ಯ ಪ್ರೊ ಚಂದ್ರಶೇಖರ್ ,ಕಾಲೇಜು ಅಭಿವೃದ್ಧಿ ಸಮಿತಿಯವರು ಹಾಗೂ ಉಪನ್ಯಾಸಕ ವೃಂದದವರು ಶುಭ ಕೋರಿದ್ದಾರೆ.

ಯುವ ಆಟಗಾರನಿಗೆ  ರಿಪ್ಪನ್ ಪೇಟೆ ಯ ಸಿದ್ದಿ ವಿನಾಯಕ ವಾಲಿಬಾಲ್ ಕ್ಲಬ್ ನ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಶುಭ ಕೋರಿವೆ.

About The Author

Leave a Reply

Your email address will not be published. Required fields are marked *