POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಶಿವಮೊಗ್ಗದ ಎನ್ ಟಿ ರಸ್ತೆಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ : ಇಬ್ಬರು ಅರೆಸ್ಟ್

ಹಳೆ ದ್ವೇಷದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಯುವಕನೊಬ್ಬನ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದ ಯುವಕ ಮೃತಪಟ್ಟಿದ್ದಾನೆ.

ಟಿಪ್ಪುನಗರ ನಿವಾಸಿ ಜಿಕೃಲ್ಲಾ ಖಾನ್ (28) ಮೃತ ವ್ಯಕ್ತಿ. ಎನ್.ಟಿ.ರಸ್ತೆಯ ಫಲಕ್ ಶಾದಿ ಮಹಲ್ ಬಳಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ.

ಫಲಕ್ ಶಾದಿ ಮಹಲ್ ಬಳಿ ಜಿಕೃಲ್ಲಾ ಖಾನ್ ಮೇಲೆ ಟ್ವಿಸ್ಟ್ ಇಮ್ರಾನ್, ಗ್ಯಾಸ್ ಇಮ್ರಾನ್, ವಸೀಮ್, ಶಹಬಾಜ್, ರುಮಾನ್, ವಸೀಮ್, ಕಾಲಾ ವಸೀಮ್ ಮತ್ತು ನಬೀಲ್ ಎಂಬುವವರು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಜಿಕೃಲ್ಲಾ ಖಾನ್’ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಬೆಳಗಿನ ಜಾವ ಚಿಕಿತ್ಸೆಗೆ ಸ್ಪಂದಿಸದೆ ಜಿಕೃಲ್ಲಾ ಖಾನ್ ಮೃತಪಟ್ಟಿದ್ದಾನೆ.

ಫಲಕ್ ಶಾದಿ ಮಹಲ್ ಬಳಿ ಜಿಕೃಲ್ಲಾ ಖಾನ್ ಮೇಲೆ ಟ್ವಿಸ್ಟ್ ಇಮ್ರಾನ್, ಗ್ಯಾಸ್ ಇಮ್ರಾನ್, ವಸೀಮ್, ಶಹಬಾಜ್, ರುಮಾನ್, ವಸೀಮ್, ಕಾಲಾ ವಸೀಮ್ ಮತ್ತು ನಬೀಲ್ ಎಂಬುವವು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಜಿಕೃಲ್ಲಾ ಖಾನ್’ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಬೆಳಗಿನ ಜಾವ ಚಿಕಿತ್ಸೆಗೆ ಸ್ಪಂದಿಸದೆ ಜಿಕೃಲ್ಲಾ ಖಾನ್ ಮೃತಪಟ್ಟಿದ್ದಾನೆ.

ಘಟನೆಗೆ ಸಂಬಂಧಪಟ್ಟಂತೆ ಟ್ವಿಸ್ಟ್ ಇಮ್ರಾನ್, ಗ್ಯಾಸ್ ಇಮ್ರಾನ್, ಶಹಬಾಜ್, ರುಮಾನ್, ವಸೀಮ್, ಕಾಲಾ ವಸೀಮ್ ಮತ್ತು ನಬೀಲ್ ಇವರ ಮೇಲೆ ಎಫ್ಐಆರ್ ಆಗಿದೆ. ಇದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಉಳಿದವರು ತಲೆ ಮರೆಸಿಕೊಂಡಿದ್ದಾರೆ.
ಇವರ ನಡುವೆ ಹಳೆ ದ್ವೇಷವಿತ್ತು

ಗ್ಯಾಸ್ ಇಮ್ರಾನ್ ಮತ್ತು ಜಿಕೃಲ್ಲಾ ಖಾನ್ ಮಧ್ಯೆ ಈ ಹಿಂದೆ ಕಾರು ಪಾರ್ಕಿಂಗ್ ವಿಚಾರವಾಗಿ ಜಗಳವಾಗಿತ್ತು. ನಂತರ ಜಿಕೃಲ್ಲಾ ಖಾನ್ ಗ್ಯಾಸ್ ಇಮ್ರಾನ್’ನ ತಂದೆ ಅಯೂಬ್ ಖಾನ್ ಅವರ ಅಂಗಡಿಗೆ ಬಂದ ಮೊಬೈಲ್ ಕಿತ್ತುಕೊಂಡು ಹೋಗಿದ್ದಾನೆ ಎಂದು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.

ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.