w
Headlines
Home » “ಸಾಗರದ ಜ್ಯೂನಿಯರ್ ಕಾಲೇಜಿನಲ್ಲೂ ಪ್ರಾರಂಭವಾದ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ .!!!”

“ಸಾಗರದ ಜ್ಯೂನಿಯರ್ ಕಾಲೇಜಿನಲ್ಲೂ ಪ್ರಾರಂಭವಾದ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ .!!!”

ಸಾಗರ :ಕರ್ನಾಟಕದಲ್ಲಿ ಇದೀಗ ಕೇಸರಿ ಶಾಲು ಹಾಗೂ ಹಿಜಾಬ್ ನ ವಿಚಾರವಾಗಿ  ಸಂಘರ್ಷ ನಡೆಯುತ್ತಿದೆ.ಉಡುಪಿ ಕಾಲೇಜಿನಲ್ಲಿ ಪ್ರಾರಂಭವಾದ ಹಿಜಾಬ್ ಸಂಘರ್ಷ ಇದೀಗ ರಾಜ್ಯಾದ್ಯಂತ ಪ್ರಾರಂಭವಾಗಿದೆ.
ಇದೀಗ ಇದರ ಸಂಘರ್ಷ  ಮಲೆನಾಡಿಗೂ ಕಾಲಿಟ್ಟಿದ್ದು ಶಿವಮೊಗ್ಗ ಜಿಲ್ಲೆ ಸಾಗರದ ಸರ್ಕಾರಿ ಜ್ಯೂನಿಯರ್  ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದರು.ಇವರನ್ನು ತಡೆಯಲು ಪ್ರಿನ್ಸಿಪಾಲ್ ಪ್ರಯತ್ನಪಟ್ಟರು ಯಶಸ್ವಿ ಕಾಣಲಾಗುತ್ತಿಲ್ಲ.

ಸಾಗರದ ಜ್ಯೂನಿಯರ್ ಕಾಲೇಜಿನ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿನಿಯರಿಂದ  ಹಿಜಾಬ್ ಹಾಗೂ ಬುರ್ಖಾವನ್ನು ನೀವು ತೆಗೆಸಿದರೆ ನಾವು ಕೂಡ  ಕೇಸರಿ ಶಾಲನ್ನು ತೆಗೆಯುತ್ತೇವೆ ಇಲ್ಲವಾದರೆ ನಾವು ಶಾಲು ಧರಿಸಿಕೊಂಡೇ ಕಾಲೇಜಿನ ಕೊಠಡಿಗೆ ಬರುತ್ತೇವೆಂದು ವಾದವಿವಾದಕ್ಕೆ ಇಳಿದಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಇದೀಗ ಕೇಸರಿ ಶಾಲನ್ನು ಧರಿಸಿಕೊಂಡು ಬಂದಿದ್ದು ಕಾಲೇಜಿನ ಮುಂದೆ ಹೈಡ್ರಾಮಾವೇ ನಡೆಯುತ್ತಿದೆ.


ಪೊಲೀಸರು ಹಾಗೂ ಶಾಲಾಡಳಿತ ಮಂಡಳಿ ಎಷ್ಟೇ ಪ್ರಯತ್ನಪಟ್ಟರೂ ವಿದ್ಯಾರ್ಥಿಗಳು ಹಿಜಾಬ್ ಹಾಗೂ ಬುರ್ಖಾ ತೆಗೆಯುವವರೆಗೂ ನಾವು ಕೇಸರಿ ಶಾಲು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇👇👇




Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.