w
Headlines
Home » ಅಪ್ರಾಪ್ತ ನಾದಿನಿಯನ್ನ ಲೈಂಗಿಕವಾಗಿ ಬಳಸಿ ವಿಕೃತಿ ಮೆರೆದ ಕ್ರೂರಿ ಬಾವ! ಪ್ರಸವಪೂರ್ವ ಹೆರಿಗೆಯಾದ ಮಗು ಸಾವು

ಅಪ್ರಾಪ್ತ ನಾದಿನಿಯನ್ನ ಲೈಂಗಿಕವಾಗಿ ಬಳಸಿ ವಿಕೃತಿ ಮೆರೆದ ಕ್ರೂರಿ ಬಾವ! ಪ್ರಸವಪೂರ್ವ ಹೆರಿಗೆಯಾದ ಮಗು ಸಾವು

ನಾದಿನಿ ಮೇಲೆ ಕಳೆದ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಸಿ ಮಗು ಕರುಣಿಸಿದ್ದ ಕ್ರೂರಿ ಬಾವನನ್ನು ಪೊಲೀಸರು ಬಂದಿಸಿದ್ದಾರೆ. ದುರಾದೃಷ್ಟವಶಾತ್ ಪ್ರಸವಪೂರ್ವ ಹೆರಿಗೆಯಾದ ಬಳಿಕ ಮಗು ಮೃತಪಟ್ಟಿದೆ.

ಕುಂಸಿ ಗ್ರಾಪಂ ವ್ಯಾಪ್ತಿಯ ಕ್ಯಾಂಟೀನ್‌ವೊಂದರ ಮಾಲೀಕ ಪ್ರವೀಣ್ ಬಂಧಿತ ಆರೋಪಿ. ಪತ್ನಿ ಮನೆಯಲ್ಲಿ ಇಲ್ಲದಾಗ ಆಕೆಯ ತಂಗಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದ. ಅಪ್ರಾಪ್ತೆ 6ನೇ ತರಗತಿಯಿಂದ ಅಕ್ಕನ ಮನೆಯಲ್ಲಿದ್ದುಕೊಂಡು ಓದುತ್ತಿದ್ದಳು. ಎಸ್ಸೆಸ್ಸೆಲ್ಸಿವರೆಗೆ ಓದಿದ್ದ ಅಪ್ರಾಪ್ತೆ ಮೇಲೆ ಬಾವನ ಕಣ್ಣು ಬಿದ್ದಿತ್ತು. ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದ.


ತದನಂತರ ಅನಾರೋಗ್ಯದ ಕಾರಣ ಅಕ್ಕ ಮತ್ತು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆಗೆ ಒಳಪಡಿಸಿದಾಗ ಆಕೆ 5 ತಿಂಗಳ ಗರ್ಭಿಣಿ ಎಂಬುದು ದೃಢಪಟ್ಟಿತ್ತು. ಆಗ ಬಾವ ಪ್ರವೀಣ್ ನಡೆಸಿದ್ದ ಕೃತ್ಯವನ್ನು ಆಕೆ ಕುಟುಂಬದವರ ಮುಂದೆ ಹೇಳಿದ್ದಳು.

 ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ್ದಳು. 7 ತಿಂಗಳಿಗೆ ಮಗು ಜನಿಸಿತ್ತು. ಪ್ರಸವಪೂರ್ವ ಹೆರಿಗೆ ಆಗಿದ್ದರಿಂದ ಅದೇ ದಿನ ಅಪ್ರಾಪ್ತೆಯ ಸಹೋದರ ಶಿಶುವನ್ನು ಮೆಗ್ಗಾನ್ ಆಸ್ಪತ್ರೆ ಐಸಿಯುಗೆ ದಾಖಲಿಸಿದ್ದ. ಈ ವೇಳೆ ಮಗುವಿನ ತಾಯಿಗೆ 19 ವರ್ಷವೆಂದು ವಯಸ್ಸು ನೋಂದಣಿ ಮಾಡಿಸಿದ್ದ. ಅಲ್ಲದೆ, ಆಕೆಯ ಆಧಾರ್ ನಂಬರ್ ಸೇರಿದಂತೆ ಸಮರ್ಪಕ ಮಾಹಿತಿ ನೀಡಿರಲಿಲ್ಲ. ಆದರೆ, ಮರುದಿನವೇ ಮಗು ಮೃತಪಟ್ಟಿದ್ದು ಅಪ್ರಾಪ್ತೆ ತಾಯಿ ಸೇರಿದಂತೆ ಕುಟುಂಬದವರು ಆಸ್ಪತ್ರೆಯಿಂದ ಕಾಲ್ಕಿತ್ತಿದ್ದರು. ಈ ಬಗ್ಗೆ ಅನುಮಾನಗೊಂಡ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

 ಅಪ್ರಾಪ್ತೆ ವಿಳಾಸ ಅಪೂರ್ಣವಾಗಿದ್ದರಿಂದ ಪೊಲೀಸರೂ ತನಿಖೆ ಕೈಗೊಂಡಿದ್ದರು. ಕೊನೆಗೂ ಅಪ್ರಾಪ್ತೆಯ ವಿಳಾಸ ಪತ್ತೆ ಮಾಡಿ ಆಕೆಯ ವಯಸ್ಸನ್ನು ಖಚಿತಪಡಿಸಿಕೊಂಡಿದ್ದರು. ಮಗು ಜನಿಸಿದಾಗ ಆಕೆ ಇನ್ನೂ ಅಪ್ರಾಪ್ತೆ ಎಂಬುದು ದೃಢಪಟ್ಟಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಲೈಂಗಿಕವಾಗಿ ಆಕೆಯನ್ನು ಬಳಸಿಕೊಂಡಿದ್ದ ಬಾವ ಪ್ರವೀಣ್‌ನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.