w
Headlines
Home » ಬಸ್ ನಲ್ಲಿ ಶೃಂಗೇರಿ ಮೂಲದ ಮುಸ್ಲಿಂ ಯುವಕ, ಹಿಂದೂ ಯುವತಿಯ ರೋಮ್ಯಾನ್ಸ್ ; ಸಾರ್ವಜನಿಕರಿಂದ ತರಾಟೆ

ಬಸ್ ನಲ್ಲಿ ಶೃಂಗೇರಿ ಮೂಲದ ಮುಸ್ಲಿಂ ಯುವಕ, ಹಿಂದೂ ಯುವತಿಯ ರೋಮ್ಯಾನ್ಸ್ ; ಸಾರ್ವಜನಿಕರಿಂದ ತರಾಟೆ

ಶೃಂಗೇರಿ : ತಾಲೂಕು ಹಾಗೂ ತೀರ್ಥಹಳ್ಳಿ ಗಡಿಭಾಗದ ಬಿದರಗೋಡು ಗ್ರಾಮದ ಯುವಕನೊಬ್ಬ ಉಡುಪಿ ಮೂಲದ ಹಿಂದೂ ಯುವತಿಯಳೊಡನೆ ಅಸಭ್ಯವಾಗಿ ವರ್ತಿಸಿ ಹಿಂದೂ ಸಂಘಟಕರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.

ಬಿದರಗೋಡಿನ ಸುನೈಫ್ ಇಬ್ರಾಹಿಂ ಎಂಬಾತ ಉಡುಪಿ-ಮಂಗಳೂರು ಬಸ್ ನಲ್ಲಿ ಉಡುಪಿ ಮೂಲದ ಹಿಂದೂ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡು, ಥಳಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ.

ಲವ್ ಜಿಹಾದ್ ಆರೋಪ;

ಸುನೈಫ್ ಇಬ್ರಾಹಿಂ ಮೂಲತಃ ಚಿಕ್ಕಮಗಳೂರು-ಶಿವಮೊಗ್ಗ ಗಡಿಭಾಗವಾದ ಬಿದರಗೋಡಿನವನು. ಉಡುಪಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇತ್ತೀಚಿಗೆ ಕಾರ್ಕಳ ಮೂಲದ ಹಿಂದೂ ಯುವತಿಯೊಂದಿಗೆ ಪಾರ್ಕ್, ಬೀಚ್ ನಲ್ಲಿ ತಿರುಗಾಡುತ್ತಿದ್ದ. ಇದನ್ನು ಹಿಂದೂ ಸಂಘಟಕರು ಗಮನಿಸಿದ್ದರು, ಬಸ್ಸಿನಲ್ಲಿ ಹುಡುಗಿ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ ವೇಳೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತನ ಜೊತೆಯಲ್ಲಿದ್ದ ಯುವತಿ ಲಗೇಜ್ ಸಹಿತ ಬಂದಿದ್ದು, ಅವರಿಬ್ಬರು ಮದುವೆಯಾಗಲು ಕೇರಳಕ್ಕೆ ಹೊರಟಿದ್ದರು ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.