Headlines

ಶಿವಮೊಗ್ಗ ವಿಪ ಚುನಾವಣೆಯಲ್ಲಿ ಬಿಜೆಪಿ ಗೆಲುವು : ರಿಪ್ಪನ್ ಪೇಟೆಯಲ್ಲಿ ವಿಜಯೋತ್ಸವ

ರಿಪ್ಪನ್ ಪೇಟೆ : ಭಾರಿ ತೀವ್ರ ಕುತೂಹಲ ಕೆರಳಿಸಿದ್ದ ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಡಿ ಎಸ್ ಅರುಣ್ ಭರ್ಜರಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಇಂದು ವಿನಾಯಕ ವೃತ್ತದಲ್ಲಿ ವಿಜಯೋತ್ಸವ ಆಚರಿಸಿ,ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರ ಮಿಸಿದರು.
ಪಟ್ಟಣದ ವಿನಾಯಕ ವೃತ್ತದಲ್ಲಿ ಕಾರ್ಯಕರ್ತರು ಪ್ರಧಾನಿ ನರೇಂದ್ರಮೋದಿ, ರಾಷ್ಟ್ರಾಧ್ಯಕ್ಷ ಅಮಿತ್‌ಷಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ಕಟೀಲ್‌, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ,ಶಾಸಕ ಹರತಾಳು ಹಾಲಪ್ಪ ಅವರ ಪರ ಜೈಕಾರಗಳನ್ನು ಕೂಗುತ್ತಾ,ಪಟಾಕಿ ಸಿಡಿಸುವ ಮೂಲಕ ನೆರೆದಿದ್ದವರಿಗೆ ಸಿಹಿಹಂಚಿ ಸಂಭ್ರಮಿಸಿದರು.
ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಡಳಿತ ಯೋಜನೆಗಳೇ ಬಿಜೆಪಿಯ ಗೆಲುವಿಗೆ ಶ್ರೀರಕ್ಷೆಯಾಗಿವೆ ಎಂದು ಅತೀವ ಸಂತಸ ವ್ಯಕ್ತಪಡಿಸಿದರು.

ಮುಖಂಡರಾದ ಆರ್ ಟಿ ಗೋಪಾಲ್ ಮಾತನಾಡಿ ಪ್ರಧಾನಿ ನರೇಂದ್ರಮೋದಿ ಅವರ ಸರಕಾರದ 7 ವರ್ಷದ ಕಾರ್ಯಕ್ರಮಗಳು ಹಾಗೂ ಪಕ್ಷದ ಕಾರ್ಯಕರ್ತರ ಸಂಘಟನೆಯ ಹಿನ್ನೆಲೆಯಲ್ಲಿಪಕ್ಷ ಜಯಗಳಿಸಲು ಕಾರಣವಾಗಿದೆ, ಅಭಿವೃದ್ಧಿಯ ಪರ ಮತದಾರನ ಒಲವು ಎಂಬುದನ್ನು ಈ ಚುನಾವಣೆ ಸಾಬೀತುಪಡಿಸಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬೆಳ್ಳೂರು ತಿಮ್ಮಪ್ಪ,ಸುಧೀಂದ್ರ ಪೂಜಾರಿ, ಸುರೇಶ್ ಸಿಂಗ್,ಎನ್ ಸತೀಶ್, ಕಗ್ಗಲಿ ಲಿಂಗಪ್ಪ ,ಕೀರ್ತಿ ಕೆ ಗೌಡ ,ಪದ್ಮಾ ಸುರೇಶ್, ತಾ.ಪಂ ಮಾಜಿ ಸದಸ್ಯ ನಾಗರತ್ನ ದೇವರಾಜ್, ಬಾಳೂರು ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಬೆಳ್ಳೂರು ಅಧ್ಯಕ್ಷೆ ಭವಾನಿ, ಉಪಾಧ್ಯಕ್ಷೆ ಮಹಾಲಕ್ಷ್ಮಿ ಮತ್ತು ದಿವಾಕರ್ ,ಅಮೃತ ಗ್ರಾ.ಪಂ.ಉಪಾಧ್ಯಕ್ಷ ಲಿಂಗರಾಜ್ ಬಂಡಿ, ಆರ್.ರಾಘವೇಂದ್ರ, ತರಕಾರಿ ಯೋಗೇಂದ್ರಗೌಡ, ಜಂಬಳ್ಳಿ ಗೀರೀಶ್, ನಾಗೇಂದ್ರ ಕಲ್ಲೂರು, ದೀಪಾ, ರಿಯಾಜ್ ಅಹಮ್ಮದ್, ಕೆ.ಬಿ.ಹೂವಪ್ಪ, ರಾಘು, ಬೆಳ್ಳೂರು ತಿಮ್ಮಪ್ಪ, ಎಪಿಎಂಸಿ ನಿರ್ದೇಶಕ ರಾಮಚಂದ್ರ, ದೇವೇಂದ್ರಪ್ಪಗೌಡ, ನಾಗೇಂದ್ರ, ಪರಶುರಾಮ ಹೊನ್ನಕೊಪ್ಪ, ಮಹೇಶ್, ಪುಟ್ಟರಾಜ್‌ ಹಾಲುಗುಡ್ಡೆ, ಲೀಲಾ ಉಮಾಶಂಕರ್, ಅಶ್ವಿನಿ, ವಿನೋಧ ಇನ್ನಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *