ಶಿವಮೊಗ್ಗದ ಕವಯತ್ರಿ ಕುಮಾರಿ ನಿತ್ಯಶ್ರೀ ಗೆ ರಾಜ್ಯೋತ್ಸವ ಪ್ರಶಸ್ತಿ : ಸತತ ಮೂರು ಪ್ರಶಸ್ತಿ ಮುಡಿಗೇರಿಸಿಕೊಂಡ ಯುವ ಬರಹಗಾರ್ತಿ
ಶಿವಮೊಗ್ಗದ ಉದಯೋನ್ಮುಖ ಯುವ ಕವಯಿತ್ರಿ ಅಂಕಣಗಾರ್ತಿ ಲೇಖಕಿ ಹಲವು ಜಿಲ್ಲೆಗಳ ಪತ್ರಿಕೆಯ ಬರಹಗಾರ್ತಿ ಕು ನಿತ್ಯಶ್ರೀ ಆರ್ ಇವರಿಗೆ ಡಿಸೆಂಬರ್ 18ರಂದು ಮಂಡ್ಯದ ಗಾಂಧಿ ಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯ ಕವಿಗೋಷ್ಠಿಯಲ್ಲಿ ಭಾಗಿಯಾಗಿ ನಂತರ ಈ ವೇದಿಕೆಯಲ್ಲಿ ರಾಜ್ಯಾಧ್ಯಕ್ಷರು ಪೋತೆರಾ ಮಹಾದೇವು ಮತ್ತು ಮುಖ್ಯ ಅತಿಥಿಗಳಾದ ಹುಲಿಯೂರು ದುರ್ಗ ಲಕ್ಷ್ಮಿನಾರಾಯಣರವರು ಡಾ. ಶಿವಕುಮಾರ್ ಮತ್ತು ಗುರುಪ್ರಸಾದ್ ವಕೀಲರು ಹಾಗೂ ಇನ್ನಿತರ ಅತಿಥಿ ಗಣ್ಯರ ಸಮ್ಮುಖದಲ್ಲಿ ಉದಯೋನ್ಮುಖ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ವರ್ಷದಲ್ಲಿ ಸತತ ಮೂರು ಪ್ರಶಸ್ತಿ ಮುಡಿಗೇರಿಸಿಕೊಂಡ ಯುವ ಬರಹಗಾರ್ತಿ ಕುಮಾರಿ ನಿತ್ಯಶ್ರಿ ಗೆ ಜಿಲ್ಲೆಯಾದ್ಯಂತ ಹಿರಿಯ,ಕಿರಿಯ ಸಾಹಿತಿಗಳು ಅಭಿನಂದನೆಗಳ ಮಹಪೂರವನ್ನೇ ಸಲ್ಲಿಸಿದ್ದಾರೆ.


