w
Headlines
Home » ಮದುವೆ ಊಟ ಮಾಡಿದ ಭದ್ರಾವತಿಯ ಗ್ರಾಪಂ ಕಾರ್ಯದರ್ಶಿ ಸಾವು: 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಮದುವೆ ಊಟ ಮಾಡಿದ ಭದ್ರಾವತಿಯ ಗ್ರಾಪಂ ಕಾರ್ಯದರ್ಶಿ ಸಾವು: 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಭದ್ರಾವತಿ : ನಾಲ್ಕು ದಿನಗಳ ಹಿಂದೆ ಭದ್ರಾವತಿ ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಊಟ ಮಾಡಿ ಅಸ್ವಸ್ಥಗೊಂಡ ಹಲವರ ಪೈಕಿ ಇಂದು ದಾಸರಕಲ್ಲಳ್ಳಿ ಗ್ರಾಮಪಂಚಾಯತ್ ಕಾರ್ಯದರ್ಶಿ ಮೃತಪಟ್ಟಿದ್ದಾರೆ.

ದಿನೇಶ್ ಸಿಂಗ್ ಮೃತಪಟ್ಟಿರುವ ದುರ್ದೈವಿ. ನಾಗತಿಬೆಳಗಲು ಗ್ರಾಮದ ಕಲ್ಯಾಣಮಂಟಪದಲ್ಲಿ ನಡೆದ ಮದುವೆಯಲ್ಲಿ ಊಟ ಮಾಡಿದ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ 
ಚಿಕಿತ್ಸೆ ಫಲಿಸದೆ ದಿನೇಶ್ ಸಿಂಗ್ ಮೃತಪಟ್ಟಿದ್ದಾರೆ.

ಅರದೊಟ್ಟು ಗ್ರಾಮದ ನಿವಾಸಿಯೊಬ್ಬರ ಮದುವೆ
ನಾಗತಿಬೆಳಗಲು ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಈ ಮದುವೆಯಲ್ಲಿ ಭಾಗಿಯಾಗಿ ಊಟ ಮಾಡಿದವರಲ್ಲಿ ಕಾಣಿಸಿಕೊಂಡ ವಾಂತಿ, ಬೇದಿ, ಹೊಟ್ಟೆನೋವು, ತಲೆಸುತ್ತು, ಜ್ವರ ಕಾಣಿಸಿಕೊಂಡಿದೆ.

ಅಸ್ವಸ್ಥರನ್ನು ಹೊಳೆಹೊನ್ನೂರು, ಭದ್ರಾವತಿ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಧುವಿನ ಸಂಬಂಧಿಕರು ಹಾವೇರಿ ಜಿಲ್ಲಾಸ್ಪತ್ರೆಗೆ.ದಾಖಲಾಗಿದ್ದಾರೆ. ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿವೆಯೇ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.