w
Headlines
Home » ದೀಪಾವಳಿ ಸಂಭ್ರಮಕ್ಕೆ ಬೀಗರ ಮನೆಗೆ ಹೊರಟಿದ್ದ ಕುಟುಂಬದವರ ಮೇಲೆ ಜವರಾಯನ ಅಟ್ಟಹಾಸ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣ ಸಾವು!!!

ದೀಪಾವಳಿ ಸಂಭ್ರಮಕ್ಕೆ ಬೀಗರ ಮನೆಗೆ ಹೊರಟಿದ್ದ ಕುಟುಂಬದವರ ಮೇಲೆ ಜವರಾಯನ ಅಟ್ಟಹಾಸ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣ ಸಾವು!!!

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಬಳಿ ಬೈಕ್ ಹಾಗೂ 407 ಟೆಂಪೋ  ವಾಹನದ ನಡುವೆ ಮುಖಾಮುಖಿ ಅಪಘಾತ ವಾಗಿದ್ದು ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ತಂದೆ ಕೂಡ ಸಾವನ್ನಪ್ಪಿರುವ ಘಟನೆ ನಡೆದಿದೆ.

ಒಂದೇ ಕುಟುಂಬದ ನಾಲ್ವರು ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎದುರು ಭಾಗದಿಂದ ಬಂದ 407  ಟೆಂಪೋ ವಾಹನ ಡಿಕ್ಕಿ ಹೊಡೆದಿದ್ದು ರಾಮಚಂದ್ರ ವೀರಪ್ಪ ( 42) ಪುಟಾಣಿ ಮಕ್ಕಳಾದ ಶಶಾಂಕ್( 11) ಆದರ್ಶ( 5)ಸ್ಥಳದಲ್ಲೇ ಅಸುನೀಗಿದ್ದಾರೆ.
ಇನ್ನೂ ಪತ್ನಿ ಭಾಗ್ಯಮ್ಮನಿಗೂ ಕೂಡ ತೀವ್ರ ಪೆಟ್ಟಾಗಿದ್ದು ಅವರು ಚಿಂತಾಜನಕವಾಗಿದ್ದು  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
 
ಬೀಗರ ಮನೆಗೆ ದೀಪಾವಳಿ ಸಂಭ್ರಮಕ್ಕೆ ಹೊರಟಿದ್ದವರಿಗೆ ಜವರಾಯನ ಅಟ್ಟಹಾಸ::
ರಾಮಚಂದ್ರನ ಬೀಗರ ಮನೆಯಾದ ಚಿಕ್ಕ ಜಂಬೂರಿನಲ್ಲಿ ಇಂದು ದೀಪಾವಳಿಯ ಹಬ್ಬ ಆಚರಣೆ ಇತ್ತು.ಹಬ್ಬದ ಆಚರಣೆ ಮಾಡಲು ಕುಟುಂಬ ಸಮೇತ ಹೊರಟ ಕುಟುಂಬದ ಮೇಲೆ ಜವರಾಯ ಅಟ್ಟಹಾಸ ಮೆರೆದಿದ್ದು ಬಾರದ ಲೋಕಕ್ಕೆ ಕಳುಹಿಸಿದ್ದು ಮಾತ್ರ ದುಃಖಕರ ಸಂಗತಿ.





ವರದಿ : ಪವನ್ ಕುಮಾರ್ ಕಠಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.