ಮದುವೆ ಊಟ ಮಾಡಿದ ಭದ್ರಾವತಿಯ ಗ್ರಾಪಂ ಕಾರ್ಯದರ್ಶಿ ಸಾವು: 150ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಭದ್ರಾವತಿ : ನಾಲ್ಕು ದಿನಗಳ ಹಿಂದೆ ಭದ್ರಾವತಿ ತಾಲೂಕಿನ ನಾಗತಿಬೆಳಗಲು ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಊಟ ಮಾಡಿ ಅಸ್ವಸ್ಥಗೊಂಡ ಹಲವರ ಪೈಕಿ ಇಂದು ದಾಸರಕಲ್ಲಳ್ಳಿ ಗ್ರಾಮಪಂಚಾಯತ್ ಕಾರ್ಯದರ್ಶಿ ಮೃತಪಟ್ಟಿದ್ದಾರೆ. ದಿನೇಶ್ ಸಿಂಗ್ ಮೃತಪಟ್ಟಿರುವ ದುರ್ದೈವಿ. ನಾಗತಿಬೆಳಗಲು ಗ್ರಾಮದ ಕಲ್ಯಾಣಮಂಟಪದಲ್ಲಿ ನಡೆದ ಮದುವೆಯಲ್ಲಿ ಊಟ ಮಾಡಿದ 150ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ ಚಿಕಿತ್ಸೆ ಫಲಿಸದೆ ದಿನೇಶ್ ಸಿಂಗ್ ಮೃತಪಟ್ಟಿದ್ದಾರೆ. ಅರದೊಟ್ಟು ಗ್ರಾಮದ ನಿವಾಸಿಯೊಬ್ಬರ ಮದುವೆ ನಾಗತಿಬೆಳಗಲು ಗ್ರಾಮದ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಈ ಮದುವೆಯಲ್ಲಿ ಭಾಗಿಯಾಗಿ…