January 11, 2026

ಕುಂಸಿ : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ

ಕುಂಸಿ : ಪಟ್ಟಣದ ಇಂದಿರಾ ಕಾಲೋನಿ ಮೊದಲ ಕ್ರಾಸ್ ಬಳಿ ಅಕ್ರಮವಾಗಿ ಎರಡು ಎತ್ತುಗಳು ಒಂದು ಆಕಳು ಮತ್ತು 3 ಕೋಣಗಳನ್ನು ಶಿವಮೊಗ್ಗದ ಕಸಾಯಿಖಾನೆಗೆ ಸಾಗಿಸುವಾಗ ಪೊಲೀಸರು ತಡೆದು ಮೂಕ ಪ್ರಾಣಿಗಳನ್ನು ರಕ್ಷಿಸಿದ್ದಾರೆ.

ಸಾಗರ ರಸ್ತೆಯಲ್ಲಿ ಜಾನುವಾರುಗಳನ್ನು  KA 14 B 0941 ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನದಲ್ಲಿ ತುಂಬಿಸಿಕೊಂಡು ಶಿವಮೊಗ್ಗದ ಕಡೆ ಹೋಗುವಾಗ ಗಸ್ತಿನಲ್ಲಿರುವ ಪೊಲೀಸರು ತಡೆದು ವಿಚಾರಿಸಲು ಹೋದಾಗ ಪೊಲೀಸರನ್ನು ಕಂಡು ವಾಹನದ ಚಾಲಕ ಕುಂಸಿಯ ಇಂದಿರಾ ಕಾಲೋನಿಯ ಮೊದಲ ಕ್ರಾಸ್ ಕಡೆ ತಿರುಗಿಸಿದ್ದಾನೆ.ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆಯ ಚರಂಡಿ ಪಕ್ಕದಲ್ಲಿದ್ದ ಮಣ್ಣಿನ ದಿಬ್ಬದಲ್ಲಿ ವಾಹನ ಸಿಕ್ಕಿಕೊಂಡಿದೆ.
ವಾಹನವನ್ನ ನಿಲ್ಲಿಸಿ ಅದರಲ್ಲಿದ್ದ ಇಬ್ಬರು ಪರಾರಿಯಾಗಿದ್ದು ಒಬ್ಬ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಈತ ಶಿವಮೊಗ್ಗ ತಾಲೂಕಿನ ಕೋಟೆಗಂಗೂರಿನ ವಾಸಿ ಮಹಮ್ನದ್ ಇಸ್ತಾಕ್ ಜಮೀಲ್ ಎಂದು ತಿಳಿದುಬಂದಿದೆ.

ವಾಹನದಲ್ಲಿ ಆಕಳು ಎತ್ತು ಮತ್ತು ಕೋಣಗಳನ್ನ ಅವೈಜ್ಞಾನಿಕವಾಗಿ ಒತ್ತೊತ್ತಾಗಿ ಕಟ್ಟಿಹಾಕಿದ್ದು ಒಂದು ಎತ್ತಿನ ಕೊಂಬು ಮುರಿದು ರಕ್ತ ಸೋರುತ್ತಿತ್ತು. 

ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *