w
Headlines
Home » ಶಿವಮೊಗ್ಗ ಜಿಲ್ಲೆಯ ನಾಲ್ವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ :

ಶಿವಮೊಗ್ಗ ಜಿಲ್ಲೆಯ ನಾಲ್ವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ :

ಶಿವಮೊಗ್ಗ : ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನ ಘೋಷಿಸಲಾಗಿದ್ದು, ಶಿವಮೊಗ್ಗ ಜಿಲ್ಲೆಗೆ ನಾಲ್ವರಿಗೆ ಈ ಪ್ರಶಸ್ತಿ ಲಭಿಸಿದೆ. ವಿವಿಧ ಕ್ಷೇತ್ರದಲ್ಲಿ ಎಲೆಮರೆಕಾಯಿಂತೆ ಕೆಲಸ ಮಾಡಿರುವ ಕಲಾವಿಧರನ್ನ ಗುರುತಿಸಿ ಅವರಿಗೆ ಪ್ರತಿ ವರ್ಷದಂತೆ ಸರ್ಕಾರ ಪ್ರಶಸ್ತಿ ನೀಡಲಾಗುತ್ತದೆ. 

ಅದರಂತೆ ಈ ಬಾರಿಯೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಸೇವಾ ಸಿಂಧು ಮೂಲಕ ಸಾರ್ವಜನಿಕರು ಮಾಡಿದ ಶಿಫಾರಸುಗಳನ್ನ ಪರಿಶೀಲಿಸಿ ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ರಚಿತವಾಗಿರುವ ಪ್ರಶಸ್ತಿ ಆಯ್ಕೆ ಸಮಿತಿ ಮತ್ತು ಪ್ರಶಸ್ತಿ ಸಲಹಾ ಸಮಿತಿಯ ಮನ್ನಣೆ ನೀಡಿದ ಹೆಸರುಗಳನ್ನ ಆಯ್ಕೆ ಸಮಿತಿ ಫೈನಲೈಸ್ ಮಾಡಿ 66 ಜನರನ್ನ ಆಯ್ಕೆ ಮಾಡಲಾಯಿತು.

ಯೋಗ ಕ್ಷೇತ್ರದಲ್ಲಿ ಬಾಮಾ ಶ್ರೀಕಂಠ, ಯಕ್ಷಗಾನ ಕ್ಷೇತ್ರದಲ್ಲಿ ಗೋಪಾಲಾಚಾರ್ಯ, ಶಿಕ್ಷಣ ಕ್ಷೇತ್ರದಲ್ಲಿ ಪ್ರೊ.ಪಿ.ವಿ.ಕೃಷ್ಣಭಟ್, ಜಾನಪದ ಕ್ಷೇತ್ರದಲ್ಲಿ ಹುಚ್ಚಪ್ಪ ಮಾಸ್ತರ್ ರನ್ನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.