w
Headlines
Home » ಮಲೆನಾಡು ಭಾಗದ ನೆಟ್ ವರ್ಕ್ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ: ಶಾಸಕ ಹರತಾಳು ಹಾಲಪ್ಪ

ಮಲೆನಾಡು ಭಾಗದ ನೆಟ್ ವರ್ಕ್ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿದೆ: ಶಾಸಕ ಹರತಾಳು ಹಾಲಪ್ಪ

ಸಾಗರ :: ಮಲೆನಾಡು ಭಾಗದಲ್ಲಿ ಉಂಟಾಗಿರುವ ನೆಟ್ ವರ್ಕ್ ಸಮಸ್ಯೆಯಿಂದ ಅನೇಕ ಜನರಿಗೆ ಆನ್ ಲೈನ್ ಮೂಲಕ ಮಾಡುವ ಕೆಲಸಗಳಿಗೆ ತೊಂದರೆ ಆಗುತ್ತಿದ್ದು ಮತ್ತು ರಾಜ್ಯದಲ್ಲಿ ತಹಸೀಲ್ದಾರ್ ಕನ್ವರ್ಟೆಡ್ ನಿವೇಶನಗಳ ಸಮಸ್ಯೆಗಳ ಕುರಿತು ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಇವರ ಗಮನಕ್ಕೆ ತಂದಿದ್ದು ಶೀಘ್ರದಲ್ಲೇ ಇದನ್ನು ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ ಇದರಿಂದ  ಅನೇಕ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಹರತಾಳು ಹಾಲಪ್ಪ  ತಿಳಿಸಿದರು

ಅವರು ಇಂದು ಸಾಗರ ನಗರಸಭೆ ಹಮ್ಮಿಕೊಂಡಿದ್ದ 2021 ನೇ ಸಾಲಿನ 15ನೇಹಣಕಾಸು ಅನುದಾನದಲ್ಲಿ ನಿರ್ಮಿಸಿರುವ ಗಣಪತಿ ಕೆರೆ ಬಳಿಯ ಹೈಮಾಸ್ಕ್ ದೀಪವನ್ನು ಉದ್ಘಾಟಿಸಿ ಮಾತನಾಡಿದರು 
ನಗರಸಭೆಯ ಅಧ್ಯಕ್ಷೆ ಮಧುರಾ ಶಿವಾನಂದ್. ಬಿಜೆಪಿ ಜಿಲ್ಲಾಧ್ಯಕ್ಷ ನಗರಸಭೆ ಸದಸ್ಯ ಟಿ. ಡಿ ಮೇಘರಾಜ್, ಬಿ.ಟಿ .ರವೀಂದ್ರ, ನಗರಸಭೆ ಸದಸ್ಯರುಗಳಾದ  ಗಣೇಶ್ ಪ್ರಸಾದ್. ತುಕಾರಾಂ.ಕುಸುಮಾ ಸುಬ್ಬಣ್ಣ  ಶ್ರೀನಿವಾಸ್. ಅರವಿಂದ ರಾಯ್ಕರ್ ನಗರಸಭೆಯ
ಆಯುಕ್ತರಾದ ನಾಗಪ್ಪ ಹಾಗೂ ಇಲಾಖೆಯ ಸಿಬ್ಬಂದಿಗಳು  ಮತ್ತು ಇತರರು ಹಾಜರಿದ್ದರು

ವರದಿ: ಧರ್ಮರಾಜ್. ಜಿ 

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.