ಅರ್ಧ ಲಕ್ಷ ರೂ. ದಾಟಿದ ಕೆಂಪಡಕೆ ದರ, ಹಬ್ಬಕ್ಕೂ ಮುನ್ನ ಅಡಕೆ ಬೆಳೆಗಾರರಿಗೆ ಭರ್ಜರಿ ಗಿಫ್ಟ್!
ಶಿವಮೊಗ್ಗ : ನಗರದ ಅಡಿಕೆ ಮಾರುಕಟ್ಟೆಯಲ್ಲಿ ಕೆಂಪಡಿಕೆ ಶುಕ್ರವಾರ ಪ್ರತಿ ಕ್ವಿಂಟಲ್‍ಗೆ ಸರಾಸರಿ ₹51 ಸಾವಿರ ದರ ಕಂಡಿದೆ. ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ ಅಡಿಕೆ ದರ ಗಗನಮುಖಿಯಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಹೆಚ್ಚಿದ ದರದಿಂದಾಗಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿ ಅಡಿಕೆ ಮಾರುಕಟ್ಟೆಯಲ್ಲಿ ಆವಕ ಹೆಚ್ಚುತ್ತಿದೆ. ಅತೀ ಹೆಚ್ಚು ಅಡಿಕೆ ಬೆಳೆಯುವ ಹೊಸನಗರ,ತೀರ್ಥಹಳ್ಳಿ, ಸಾಗರ ಬಾಗದ ರೈತರ ಮನೆಯಲ್ಲಿ ಹಬ್ಬದ ವಾತಾವರಣವಾಗಿದೆ. ಕಳೆದ ಕೆಲ ತಿಂಗಳಿನಿಂದ ₹40 ಸಾವಿರ ಆಸುಪಾಸಿನಲ್ಲಿ ಅಡಿಕೆ ಖರೀದಿ ಆಗುತ್ತಿತ್ತು. ನಾಲ್ಕು ದಿನಗಳ…