Headlines

ಸೊರಬ: ಚಲಿಸುತ್ತಿದ್ದಾಗ ಧಗ ಧಗನೇ ಹೊತ್ತಿ ಉರಿದ ಕಾರು

ಸೊರಬ :  ತಾಲೂಕಿನ ಚಿಕ್ಕಚೌಟಿಯಿಂದ ಆನವಟ್ಟಿಗೆ ಹೊರಟಿದ್ದ ಮಾರುತಿ ಸ್ವಿಫ್ಟ್ ಡಿಸೈರ್  ಕಾರಿನಲ್ಲಿ ದಟ್ಟನೆ ಹೊಗೆ
ಕಾಣಿಸಿಕೊಂಡಿದೆ. ರಾಜು ಎಂಬುವರು ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದು ರಸ್ತೆಯ ಪಕ್ಕಕ್ಕೆ ವಾಹನ ನಿಲ್ಲಿಸಿದ್ದಾರೆ.

ನಿಲ್ಲಿಸಿದ ಕ್ಷಣ ಮಾತ್ರದಲ್ಲಿ ಇಡೀ ವಾಹನಕ್ಕೆ ಧಗ್ಗನೇ ಬೆಂಕಿ ಹೊತ್ತಿಕೊಂಡಿದೆ. ಧಗ ಧಗನೇ ಬೆಂಕಿಗೆ ವಾಹನ ಸಂಪೂರ್ಣ ಹೊತ್ತಿ ಉರಿದಿದೆ. ಅಕ್ಕ ಪಕ್ಕದ ತೋಟದ ಮನೆಯವರು ಬಂದು ಬೆಂಕಿ ಆರಿಸಲು ಯತ್ನಿಸಿದ್ದಾರೆ.


ಚಲಿಸುತ್ತಿದ್ದ ಮಾರುತಿ ಸ್ವಿಫ್ಟ್ ಡಿಸೈರ್‌ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಮೊದಲಿಗೆ ಬ್ಯಾನೆಟ್ ನಲ್ಲಿ ಬ್ಲಾಕ್ ಸ್ಮೋಕ್ ಕಾಣಿಸಿಕೊಂಡಿದ್ದು ನಂತರ ಇಡೀ ವಾಹನ ಬೆಂಕಿಗೆ ಆಹುತಿ ಆಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲವೆಂದು ತಿಳಿದು ಬಂದಿದೆ. ಈ ಘಟನೆ ಸುಮಾರು 8 ಗಂಟೆಯ ಸಮಯದಲ್ಲಿ ನಡೆದಿದೆ.


About The Author

Leave a Reply

Your email address will not be published. Required fields are marked *