w
Headlines
Home » ಭದ್ರಾವತಿ ಮಹಿಳಾ ಸಮಾಜದಿಂದ ಬಜರಂಗದಳ ಸಂಘಟನೆಯ ಕರೋನಾ ವಾರಿಯರ್ಸ್ ಗಳಿಗೆ ಸನ್ಮಾನ:

ಭದ್ರಾವತಿ ಮಹಿಳಾ ಸಮಾಜದಿಂದ ಬಜರಂಗದಳ ಸಂಘಟನೆಯ ಕರೋನಾ ವಾರಿಯರ್ಸ್ ಗಳಿಗೆ ಸನ್ಮಾನ:

ಭದ್ರಾವತಿ:ಕರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ಉಚಿತವಾಗಿ ನೆರೆವೆರಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಬಜರಂಗದಳ ಸಂಘಟನೆಯ ಕರೋನಾ ವಾರಿಯರ್ಸ್ ಗಳನ್ನು ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

     ಕರೋನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರೆವೇರಿಸಲು ಕುಟುಂಬ ವರ್ಗದವರೇ ಹಿಂದೆ ಮುಂದೆ ನೋಡುವ ಸಂದರ್ಭದಲ್ಲಿ ಅದರಲ್ಲೂ ಉಚಿತವಾಗಿ ಮೃತ ದೇಹಗಳ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಸಂಕಷ್ಟದ ಸಮಯದಲ್ಲಿ ನೆರವಾಗಿ ನಿಂತಿರುವ ಬಜರಂಗದಳ ಕಾರ್ಯಕರ್ತರ ಸೇವೆ ಶ್ಲಾಘನೀಯವಾಗಿದ್ದು, ಈ ಯುವಕರ ಸೇವೆಯನ್ನು ನಗರದ ವಿವಿಧ ಸಂಘ-ಸಂಸ್ಥೆಗಳು ಗುರುತಿಸುವ ಮೂಲಕ ಸನ್ಮಾನಿಸಿ ಗೌರವಿಸುತ್ತಿವೆ.ಅದೆ ರೀತಿಯಲ್ಲಿ ಮಹಿಳಾ ಸೇವಾ ಸಮಾಜದ ವತಿಯಿಂದ ಸಹ ಸನ್ಮಾನಿಸಿ ಗೌರವಿಸಲಾಯಿತು.

 ಈ ಸಂಧರ್ಭದಲ್ಲಿ ಮಹಿಳಾ ಸಮಾಜದ ಸಂಸ್ಥಾಪಕಿ ರತ್ನಮ್ಮ ಶ್ರೀನಿವಾಸ ಮೂರ್ತಿ, ಹಾಗು ಗೌರವಧ್ಯಕ್ಷೆ  ವಸುಧಾ ಮುಕುಂದ, ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಲಾಯಿತು.

  ಸಂಘದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶೋಭಾ ಗಂಗರಾಜು, ಖಜಾಂಚಿ  ಜಯಂತಿ ನಾಗರಾಜ್ ಶೇಟ್, ಕಮಲಕುಮಾರಿ, ಇಂದಿರಾ ರಮೇಶ್, ಲೋಯಿತಾ ನಂಜಪ್ಪ, ಶಾರದಾ ಶ್ರೀನಿವಾಸ್, ಡಾ. ವೀಣಾ ಭಟ್, ರೈಲ್ವೆ ಸಲಹಾ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ವರದಿ : ಈಶ್ವರ್ ಭದ್ರಾವತಿ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.