ಲಾಕ್ ಡೌನ್ ನಿಂದ ಕೃಷಿ ಕಡೆಗೆ ಯುವಕರ ಒಲವು::

ರಿಪ್ಪನ್ ಪೇಟೆ:::: ಕೊರೋನಾ ದಿಂದ ಸರಕಾರ ಎಲ್ಲಾ ಕಡೆ ಲಾಕ್ ಡೌನ್ ಹೇರಿರುವುದರಿಂದ ಹೆಚ್ಚಿನ ಯುವಕರು ಕೃಷಿ ಕಡೆಗೆ ಆಕರ್ಷಿತರಾಗಿದ್ದಾರೆ..
ಕೊರೋನದಿಂದ  ಎಲ್ಲ ಕ್ಷೇತ್ರಗಳು ಕಂಗೆಟ್ಟು ಕುಳಿತಿರುವಾಗ  ಕೃಷಿ ಕ್ಷೇತ್ರವು ಮಾತ್ರ ಅದಕ್ಕೆ ವಿರುದ್ಧವಾಗಿದೆ.  ಈ ಲಾಕ್  ಡೌನ್ ಸಂದರ್ಭದಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲಾ ಕೆಲಸ ಕಾರ್ಯಗಳು ತುಂಬಾ  ಅಚ್ಚುಕಟ್ಟಾಗಿ  ನಡೆದಿದೆ. 
ಬೆಂಗಳೂರಿನಿಂದ  ಮನೆಗೆ ಬಂದಿದ್ದ  ಅನೇಕ ಯುವಕರು  ಮರಳಿ ಬೆಂಗಳೂರಿನ ಕಡೆ ತಲೆಹಾಕಲು ಇಷ್ಟಪಡುತ್ತಿಲ್ಲ  ಇದಕ್ಕೆ ಮೂಲಕಾರಣವೇ ಕೃಷಿ..
ಕೃಷಿ ಅವಲಂಬಿತ ದೇಶವಾದ ಭಾರತ ಮುಂದಿನ ದಿನಗಳಲ್ಲಿ ಕೃಷಿ  ಕ್ಷೇತ್ರದಲ್ಲಿ ತುಂಬಾ ಬಲಿಷ್ಠವಾಗಿ ಹೊರ  ಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ  ಎಂದು ಕೃಷಿಕ ಹಾಗೂ  ರಿಪ್ಪನ್ ಪೇಟೆಯ ಬಿಜೆಪಿಯ ಮುಖಂಡರಾದ ಲಿಂಗಪ್ಪ ರವರು ಪತ್ರೀಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ..

Leave a Reply

Your email address will not be published. Required fields are marked *