
ಬೊಮ್ಮನಕಟ್ಟೆಯಲ್ಲಿ ರೌಡಿ ಶೀಟರ್ ಅವಿನಾಶ್ ನ ಬರ್ಬರ ಹತ್ಯೆ
ಬೊಮ್ಮನಕಟ್ಟೆಯಲ್ಲಿ ರೌಡಿ ಶೀಟರ್ ಅವಿನಾಶ್ ನ ಬರ್ಬರ ಹತ್ಯೆ ಶಿವಮೊಗ್ಗ ನಗರದ ಹಳೆ ಬೊಮ್ಮನಕಟ್ಟೆಯ ಕೆಂಚಮ್ಮನ ದೇವಸ್ಥಾನದ ಹಿಂಬದಿಯ ಕೆರೆ ಏರಿಯ ಮೇಲೆ ಶನಿವಾರ ತಡರಾತ್ರಿ ವ್ಯಕ್ತಿಯೊಬ್ಬನ ಕೊಲೆ ನಡೆದಿದೆ. ಹಳೇಬೊಮ್ಮನಕಟ್ಟೆಯ ಶೇಖರಪ್ಪ ಎಂಬುವವರ ಪುತ್ರ ಅವಿನಾಶ್ (32) ಕೊಲೆಗೀಡಾದವ. ಅವಿನಾಶ್ 10 ವರ್ಷಗಳ ಹಿಂದೆ ನಡೆದ ರೌಡಿ ಶೀಟರ್ ತಮಿಳುಗಿರಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ. ನಂತರ ನ್ಯಾಯಾಲಯ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪೆರೋಲ್ ಮೇಲೆ ಅವಿನಾಶ್ ಈಚೆಗೆ ಮನೆಗೆ ಬಂದಿದ್ದನು ಎಂದು ತಿಳಿದುಬಂದಿದೆ.ಕೊಲೆ…