Headlines

ಲಿಂಗನಮಕ್ಕಿ ಜಲಾಶಯದ ಎಲ್ಲಾ ಗೇಟ್‌ಗಳು ಓಪನ್ – ಮೈದುಂಬಿ ಹರಿಯುತ್ತಿರುವ ಜೋಗ ಜಲಪಾತ

ಲಿಂಗನಮಕ್ಕಿ ಜಲಾಶಯದ ಎಲ್ಲಾ ಗೇಟ್‌ಗಳು ಓಪನ್ – ಮೈದುಂಬಿ ಹರಿಯುತ್ತಿರುವ ಜೋಗ ಜಲಪಾತ ಸಾಗರ: ಲಿಂಗನಮಕ್ಕಿ ಜಲಾಶಯದ ಎಲ್ಲಾ ರೇಡಿಯಲ್ ಗೇಟ್‌ಗಳನ್ನು ಗುರುವಾರ ಮತ್ತೆ ತೆರೆಯಲಾಗಿದೆ. ಇದರ ಪರಿಣಾಮವಾಗಿ ಶರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ಜೋಗ ಜಲಪಾತವು ಭಾರೀ ರಭಸದಿಂದ ಹರಿಯುತ್ತಿದೆ. ಕಳೆದ ಎರಡು ದಿನಗಳಿಂದ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಳವಾಗಿದೆ. ಜಲಾಶಯಕ್ಕೆ ಇಂದು ೪೭,೨೩೨ ಕ್ಯೂಸೆಕ್ ನೀರು ಸೇರುತ್ತಿದ್ದು, ಈಗಾಗಲೇ ಭರ್ತಿಯಾಗಿರುವ ಕಾರಣ ಎಲ್ಲಾ ಗೇಟ್‌ಗಳನ್ನು ತೆರೆಯಲಾಗಿದ್ದು, ೩೨,೧೩೮ ಕ್ಯೂಸೆಕ್ ನೀರು…

Read More

ಮಹಿಳಾ ಪೊಲೀಸರಿಗೆ ಬಾಗಿನ ಅರ್ಪಿಸಿ, ಪುರುಷರಿಗೆ ರಾಖಿ ಕಟ್ಟಿ ಸೋದರತ್ವ ಮೆರೆದ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ಜೈನ್

ಮಹಿಳಾ ಪೊಲೀಸರಿಗೆ ಬಾಗಿನ ಅರ್ಪಿಸಿ,ಪುರುಷರಿಗೆ ರಾಖಿ ಕಟ್ಟಿ ಸೋದರತ್ವ ಮೆರೆದ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ಜೈನ್ ರಿಪ್ಪನ್‌ಪೇಟೆ : ಹಬ್ಬ ಹರಿದಿನಗಳಲ್ಲಿ ತವರು ಮನೆಗೆ ಹೋಗಿ ಬರುವಷ್ಟು ಸಮಯವಿರದಂತಹ ಸ್ಥಿತಿಯಲ್ಲಿರುವ ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಹೊಂಬುಜ ಗ್ರಾಮ ಪಂಚಾಯ್ತಿ ಸದಸ್ಯೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಯಶಸ್ವತಿ ವೃಷಭರಾಜ್ ಜೈನ್ ಕುಟುಂಬ ವರ್ಗದವರು ಬಾಗಿನ ನೀಡಿ ಸತ್ಕರಿಸಿದರು. ರಾಖಿ ಕಟ್ಟುವುದರಿಂದ ಅಣ್ಣ-ತಂಗಿಯರ ಸಂಬಂಧ ಸಹೋದರತ್ವ ಗಟ್ಟಿಯಾಗಿರುತ್ತದೆಂಬ ನಂಬಿಕೆ ನಮ್ಮ ಹಿಂದುಗಳದ್ದಾಗಿದ್ದು ಪೊಲೀಸರು ಗಣೇಶ ಹಬ್ಬದ ಸಂದರ್ಭದಲ್ಲಿ ರಕ್ಷಣೆಯ…

Read More

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಶಿಕ್ಷಕಿ – ಮರಣದಂಡನೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಶಿಕ್ಷಕಿ – ಮರಣದಂಡನೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಪತಿಯನ್ನು ಕೊಲೆಗೈದ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಮರಣದಂಡನೆ ಶಿಕ್ಷೆ, ಮತ್ತೋರ್ವನಿಗೆ ಏಳು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿರುವ ಘಟನೆ ಭದ್ರಾವತಿ ನಗರದಲ್ಲಿ ನಡೆದಿದೆ. ನಗರದ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಶನಿವಾರ ಈ ತೀರ್ಪು ಪ್ರಕಟಿಸಿದರು. ಅಂತರಗಂಗೆಯ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಲಕ್ಷ್ಮೀ, ಗುಲ್ಬರ್ಗದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕ ಇಮ್ತಿಯಾಜ್…

Read More

ಬಾವಿಗೆ ಹಾರಿ ಮಾಜಿ ಯೋಧ ಆತ್ಮ*ಹತ್ಯೆ

ಬಾವಿಗೆ ಹಾರಿ ಮಾಜಿ ಯೋಧ ಆತ್ಮಹತ್ಯೆ ಕುಂಸಿ: ಮಾಜಿ ಸೈನಿಕರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕುಂಸಿ ಸಮೀಪದ ಚಿನ್ಮನೆ ಗ್ರಾಮದ ಮಾಜಿ ಯೋಧ ಡಿ.ಆರ್.ಸುರೇಶಪ್ಪ ದೊಡ್ಮನೆ (೬೬) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಬೆಳಗಿನ ಜಾವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಊರಿನಲ್ಲಿ ವ್ಯವಸಾಯದ ಜೊತೆಗೆ ಅಂಗಡಿ ನಡೆಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದ ಬೇಸತ್ತು ತನ್ನ ಮನೆ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ…

Read More

ಕ್ರೀಡೆ ಸಹೋದರತ್ವವನ್ನು ಬೆಳೆಸುತ್ತದೆ – ಜಿ ಶೇಷಾಚಲ ನಾಯಕ್

ಕ್ರೀಡೆ ಸಹೋದರತ್ವವನ್ನು ಬೆಳೆಸುತ್ತದೆ – ಜಿ ಶೇಷಾಚಲ ನಾಯಕ್ ರಿಪ್ಪನ್ ಪೇಟೆ : ಮಕ್ಕಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರೀಡೆ ಸಹಕಾರಿಯಾಗಿದೆ. ಕ್ರೀಡೆಯಲ್ಲಿ ನೋಲು-ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವಂತಾಗಬೇಕು. ಕ್ರೀಡೆ ಸಹೋದರತ್ವವನ್ನು ಬೆಳಸುತ್ತದೆ. ದ್ವೇಷ ಅಸೂಯೆಯನ್ನು ದೂರ ಮಾಡುವ ಮೂಲಕ ಸಾಮರಸ್ಯವನ್ನು ಬೆಳಸುವಲ್ಲಿ ಕ್ರೀಡೆ ಉತ್ತಮ ವೇದಿಕೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿಯ ಪಿ.ಎಂ.ಘೋಷಣ್ ಸಹಾಯಕ ನಿರ್ದೇಶಕ ಜಿ.ಶೇಷಾಚಲ ನಾಯಕ್ ತಿಳಿಸಿದರು. ರಿಪ್ಪನ್‌ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ…

Read More

ಶಾರ್ಟ್ ಸರ್ಕ್ಯೂಟ್‌ – ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟ

ಶಾರ್ಟ್ ಸರ್ಕ್ಯೂಟ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಷ್ಟ ಹೊಸನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಂದು ಹೊತ್ತಿ ಉರಿದಿರುವ ಘಟನೆ ಹೊಸನಗರ ತಾಲೂಕಿನ ಗೊರಗೋಡು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮನೆಯಲ್ಲಿದ್ದ ವಸ್ತುಗಳು ಮತ್ತು ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಿಕಲ್ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮೇಲಿನ ಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡು ಗ್ರಾಮದಲ್ಲಿ ಲಕ್ಷಣ್ ಅವರಿಗೆ ಸೇರಿದ ಮನೆಯನ್ನು ಬಾಡಿಗೆಗೆ ಪಡೆದು ದಂಪತಿಗಳು ವಾಸಿಸುತ್ತಿದ್ದರು. ದಂಪತಿಗಳು ಹೊರಗೆ ಹೋದ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯಲ್ಲಿ ಬೆಂಕಿ…

Read More

ಮೈಸೂರು-ತಾಳಗುಪ್ಪ ರೈಲು | ಅರಸಾಳು, ಕುಂಸಿ ಪ್ರಯಾಣಿಕರಿಗೆ ಬಿಗ್ ಗುಡ್ ನ್ಯೂಸ್

ಮೈಸೂರು-ತಾಳಗುಪ್ಪ ರೈಲು | ಅರಸಾಳು, ಕುಂಸಿ ಪ್ರಯಾಣಿಕರಿಗೆ ಬಿಗ್ ಗುಡ್ ನ್ಯೂಸ್ ಶಿವಮೊಗ್ಗ: ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರೆಸಲಾಗುತ್ತಿದೆ.ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ನೀಡಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಅರಸಾಳು ಹಾಗೂ ಕುಂಸಿ ರೈಲು ನಿಲ್ದಾಣಗಳಲ್ಲಿ ಕೆಳಗಿನ ರೈಲುಗಳ ತಾತ್ಕಾಲಿಕ ನಿಲುಗಡೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ರೈಲು ಸಂಖ್ಯೆ 16227/16228 ಮೈಸೂರು – ತಾಳಗುಪ್ಪ – ಮೈಸೂರು ಎಕ್ಸ್’ಪ್ರೆಸ್ ಅರಸಾಳು ನಿಲ್ದಾಣದಲ್ಲಿ 1 ನಿಮಿಷ ನಿಲ್ಲುತ್ತದೆ. ರೈಲು ಸಂಖ್ಯೆ…

Read More

RIPPONPETE | ಬಾವಿಗೆ ಬಿದ್ದು ಯುವಕ ಸಾವು – ಕಾಲು ಜಾರಿ ಬಿದ್ದಿರುವ ಶಂಕೆ

RIPPONPETE | ಬಾವಿಗೆ ಬಿದ್ದು ಯುವಕ ಸಾವು – ಕಾಲು ಜಾರಿ ಬಿದ್ದಿರುವ ಶಂಕೆ ರಿಪ್ಪನ್ ಪೇಟೆ : ಇಲ್ಲಿನ ನೆವಟೂರು ಗ್ರಾಮದ ಯುವಕನೊಬ್ಬ ಬಾವಿಗೆ ಬಿದ್ದು ಮೃತಪಟ್ಟಿದ್ದು ಆತ್ಮಹತ್ಯೆಯೋ ಅಥವಾ ಕಾಲುಜಾರಿ ಬಿದ್ದಿದ್ದಾನೋ ಎಂಬ ಶಂಕೆ ವ್ಯಕ್ತವಾಗಿದೆ. ನೆವಟೂರು ಗ್ರಾಮದ ಆನಂದ್ (30) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಇಂದು ಬೆಳಿಗ್ಗೆ ಮೃತ ಯುವಕನ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ , ನೆವಟೂರು ಗ್ರಾಮದ ಭರ್ಮಪ್ಪ ಎಂಬುವವರ ಪುತ್ರನಾದ ಆನಂದ್ ಇಂದು…

Read More

RIPPONPETE | ಅಡ್ಡೇರಿ ಸರ್ಕಾರಿ ಶಾಲೆ ಕುಸಿತ – ತಪ್ಪಿದ ಭಾರಿ ಅನಾಹುತ, ಮಕ್ಕಳಿಗೆ ತಾತ್ಕಾಲಿಕ ವ್ಯವಸ್ಥೆ ಅಗತ್ಯ

ಅಡ್ಡೇರಿ ಸರ್ಕಾರಿ ಶಾಲೆ ಕುಸಿತ – ತಪ್ಪಿದ ಭಾರಿ ಅನಾಹುತ, ಮಕ್ಕಳಿಗೆ ತಾತ್ಕಾಲಿಕ ವ್ಯವಸ್ಥೆ ಅಗತ್ಯ ರಿಪ್ಪನ್ ಪೇಟೆ : ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡ್ಡೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಗೋಡೆಗಳು ಕುಸಿದು ಬಿದ್ದಿವೆ. ಘಟನೆ ಸೋಮವಾರ ರಾತ್ರಿ ನಡೆದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 17 ವಿದ್ಯಾರ್ಥಿಗಳ ಭಾರಿ ಅನಾಹುತದಿಂದ ಪಾರಾಗಿದ್ದಾರೆ. ಶಾಲೆಯ ಕಟ್ಟಡ ಸಂಪೂರ್ಣ ಹಾನಿಗೊಳಗಾದ ಹಿನ್ನೆಲೆಯಲ್ಲಿ,…

Read More

ಹಣಗೆರೆ ಬಳಿ ಭಯಾನಕ ರಸ್ತೆ ಅಪಘಾತ – ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಹಣಗೆರೆ ಬಳಿ ಭಯಾನಕ ರಸ್ತೆ ಅಪಘಾತ – ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು ಶಿವಮೊಗ್ಗ, ಹಣಗೆರೆಕಟ್ಟೆ ರಸ್ತೆಯ ಕುಣಜೆ ಗ್ರಾಮದ ಬಳಿ ನಿನ್ನೆ ಭಯಾನಕ ರಸ್ತೆ ಅಪಘಾತ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗದೇ ಪಾರಾಗಿದ್ದಾರೆ. ಶಿವಮೊಗ್ಗದಿಂದ ಹಣಗೆರೆಕಟ್ಟೆ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಒಂದಕ್ಕೆ ಎದುರಿನಿಂದ ಬಂದ ಸ್ವಿಫ್ಟ್ ಕಾರೊಂದು ಹಿಂಬದಿ ಭಾಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ, ಬಸ್‌ನ ಹಿಂಬದಿ ನಾಲ್ಕು ಟಯರ್‌ಗಳು ಸಂಪೂರ್ಣವಾಗಿ ಕಿತ್ತು ಹೋಗಿವೆ. ಕಾರಿನ ಮುಂಭಾಗ ತೀವ್ರವಾಗಿ ಜಕಂಗೊಂಡಿದ್ದರೂ,…

Read More