
ಲೋಕಾರ್ಪಣೆಯಾಯಿತು ಐತಿಹಾಸಿಕ ಸಿಗಂಧೂರು ಸೇತುವೆ – ದಶಕಗಳ ಕನಸು ನನಸು
ಲೋಕಾರ್ಪಣೆಯಾಯಿತು ಐತಿಹಾಸಿಕ ಸಿಗಂಧೂರು ಸೇತುವೆ – ದಶಕಗಳ ಕನಸು ನನಸು ಮಲೆನಾಡಿನ ಶರಾವತಿ ಸಂತ್ರಸ್ತರು ದಶಕಗಳಿಂದ ಕಾಯುತ್ತಿದ್ದ ಮಹತ್ವದ ಕನಸು ನನಸಾಗಿದೆ. ಸಿಗಂಧೂರು ಸೇತುವೆ ಇಂದು ಲೋಕಾರ್ಪಣೆಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂಧೂರು ಹೊಳೆಬಾಗಿಲು ಬಳಿ ನಿರ್ಮಿಸಲಾಗಿರುವ ಈ ಸೇತುವೆಯನ್ನು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಅಧಿಕೃತವಾಗಿ ಉದ್ಘಾಟಿಸಿದರು. ಸೇತುವೆ ಲೋಕಾರ್ಪಣೆಗೂ ಮುನ್ನ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ವಿವಿಧ ಮುಖಂಡರು…