
ಪ್ರಾಚೀನ ನರಸಿಂಹ ದೇವರ ವಿಗ್ರಹ ಕಿಡಿಗೇಡಿಗಳಿಂದ ಭಗ್ನ – ಭಕ್ತರ ಆಕ್ರೋಶ
ಪ್ರಾಚೀನ ನರಸಿಂಹ ದೇವರ ವಿಗ್ರಹ ಕಿಡಿಗೇಡಿಗಳಿಂದ ಭಗ್ನ – ಭಕ್ತರ ಆಕ್ರೋಶ ಸೊರಬ: ಅಪೂರ್ವ ಪ್ರಾಚೀನ ನರಸಿಂಹ ವಿಗ್ರಹವನ್ನು ಭಗ್ನಗೊಳಿಸಿದ ಘಟನೆ ತಾಲ್ಲೂಕಿನ ಕುಬಟೂರಿನಲ್ಲಿ ಸೋಮವಾರ ಸಂಜೆ ನಡೆದಿದೆ. ನರಸಿಂಹ ಕ್ಷೇತ್ರವೆನ್ನಲಾದ ಸೊರಬ ತಾಲ್ಲೂಕಿನಲ್ಲಿ ಅನೇಕ ನರಸಿಂಹ ದೇಗುಲಗಳಿವೆ. ಸುಮಾರು ಎರಡನೇ ಶತಮಾನದಿಂದ ನಾಲ್ಕನೆ ಶತಮಾನದ ಅವಧಿಯ ವಿಗ್ರಹಗಳು ಗಮನಸೆಳೆದಿದ್ದು ಕುಬಟೂರು ವಿಗ್ರಹ ಜಿಲ್ಲೆಯ ಕೆಲವೇ ಕೆಲವು ಪ್ರಾಚೀನ ವಿಗ್ರಹಗಳಲ್ಲಿ ಒಂದು. ಇತಿಹಾಸ ಆರಂಭಿಕ ಹಂತದ ವಿಗ್ರಹಗಳಾಗಿರುವ ಇವು ಕುಳಿತು ಮಣಿಯನ್ನು ಹಿಡಿದಿರುವ ಭಂಗಿಯಲ್ಲಿದ್ದು ಅನೇಕರ ಆರಾಧ್ಯ…