ಶಾಲಾ ಆವರಣದಲ್ಲಿ ಕಿಡಿಗೇಡಿಗಳ ಎಣ್ಣೆ ಪಾರ್ಟಿ – ಗ್ರಾಮಸ್ಥರ ಆಕ್ರೋಶ , ಸ್ಥಳಕ್ಕೆ ಪಿಎಸ್‌ಐ ರಾಜುರೆಡ್ಡಿ ಭೇಟಿ
ಶಾಲಾ ಆವರಣದಲ್ಲಿ ಕಿಡಿಗೇಡಿಗಳ ಎಣ್ಣೆ ಪಾರ್ಟಿ – ಗ್ರಾಮಸ್ಥರ ಆಕ್ರೋಶ , ಸ್ಥಳಕ್ಕೆ ಪಿಎಸ್‌ಐ ರಾಜುರೆಡ್ಡಿ ಭೇಟಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಕಲ್ಲುಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳ ಕೃತ್ಯ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯ ಆವರಣದಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳು ನುಗ್ಗಿ ಶಾಲಾ ಕಟ್ಟಡದ ಒಳಗೆ ಕುಡಿಯುವ ‘ಎಣ್ಣೆ ಪಾರ್ಟಿ’ ಮಾಡಿರುವುದು ಬೆಳಕಿಗೆ ಬಂದಿದೆ. ಸ್ಥಳೀಯರ ಪ್ರಕಾರ, ಕಳೆದ ಹಲವು ದಿನಗಳಿಂದ ರಾತ್ರಿ ವೇಳೆ ಶಾಲೆ ಆವರಣದಲ್ಲಿ ಅನಾಮಿಕ…