ಆಂಜನೇಯ ಇಂದಿನ ಜನತೆಗೆ ಆದರ್ಶಪ್ರಾಯನಾಗಿದ್ದಾನೆ : ಮುರುಘಾ ಮಠದ ಶ್ರೀಗಳು.
ನಿಸ್ವಾರ್ಥ ಸೇವಕನಾಗಿದ್ದು ಹನುಮಂತ ಶ್ರೀರಾಮನಲ್ಲಿಯೇ ಜೀವನ ಕಂಡುಕೊಂಡಿದ್ದ, ರಾಮನಾಮ ತಪದಲ್ಲಿಯೇತನ್ನ ಸರ್ವಸ್ವ ಅಡಗಿದೆ ಎಂಬ ಮನಸ್ಥಿತಿಯಲ್ಲಿ ಜೀವನಕಳೆದ ಆಂಜನೇಯ ಇಂದಿನ ಜನತೆಗೆ ಆದರ್ಶಪ್ರಾಯನಾಗಿದ್ದಾನೆ. ಇರುವುದಷ್ಟನ್ನೇ ಆತ್ಮ ಸಂತೋಷದಿಂದ ಅನುಭವಿಸಿ, ಅನಾವಶ್ಯಕ ಆಸೆಗಳಿಗೆ ಬಲಿಯಾಗದೆ ಸಂತೃಪ್ತ ಜೀವನ ಸಾಗಿಸಿದ ಪ್ರೇರಕನಂತೆ ಎಲ್ಲರ ಜೀವನ ಹಸನಾಗಲೀ ಎಂದು ಆನಂದಪುರ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಗರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ರಿಪ್ಪನ್‌ಪೇಟೆ ಸಮೀಪದ ಹುಂಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ದೇವಾಲಯ ಲೋಕಾರ್ಪಣೆ ಹಾಗು ಆಂಜನೇಯ ಮೂರ್ತಿಯ ಪುನರ್ ಪ್ರತಿಷ್ಠಾಪನೆ, ಧಾರ್ಮಿಕ ಕಾರ್ಯಕ್ರಮದಲ್ಲಿ…