ರಾಷ್ಟ್ರೀಯ ಹಾಕಿ ಆಟಗಾರ್ತಿ ಕು. ಪೂಜಿತ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದಿಂದ ಸನ್ಮಾನ :
ಗ್ರಾಮೀಣ ಪ್ರದೇಶದ ವರಾಹಿ ಸಾವೆಹಕ್ಲು ಮುಳುಗಡೆ ಸಂತ್ರಸ್ಥರ ಕಡು ಬಡತನದ ಕುಟುಂಬದಲ್ಲಿ ಹುಟ್ಟಿ ಪ್ರಾಥಮಿಕ ಶಿಕ್ಷಣ ವನ್ನು ಸರಕಾರಿ ಶಾಲೆಯಲ್ಲಿ ಪಡೆದು ನಂತರ ಕ್ರೀಡಾ ಶಾಲೆಗೆ ಸೇರಿ ಕಠಿಣ ಪರಿಶ್ರಮ ನಿರಂತರ ಅಭ್ಯಾಸದ ಮೂಲಕ ಇಂದು ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಪೂಜಿತ ಗೌಡ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿ ಬಳಗದಿಂದ ರಿಪ್ಪನ್ ಪೇಟೆ ಪಟ್ಟಣದ ಬರುವೆ ಗ್ರಾಮದ ಪೂಜಿತ ರವರ ಸ್ವ-ಗೃಹದಲ್ಲಿ ಅಭಿನಂದಿಸಿ ಗೌರವಿಸಿಲಾಯಿತು. ಇದೇ ಸಂಧರ್ಭದಲ್ಲಿ ಪೂಜಿತ ರವರನ್ನು ಬೆಂಬಲಿಸಿ ರಾಷ್ಟ್ರ ಮಟ್ಟದ ಕ್ರೀಡಾಪಟುವಾಗಿ…