w
Headlines
FB IMG

ಆಗುಂಬೆ ಘಾಟ್‌ ನಲ್ಲಿ ಧರೆ ಕುಸಿದು ನೆಲಕ್ಕುರುಳಿದ ಮರ – ಸಂಚಾರ ವ್ಯತ್ಯಯ

ಆಗುಂಬೆ ಘಾಟ್‌ ರಸ್ತೆ ಮತ್ತೆ ಸ್ಥಗಿತ – ಧರೆ ಕುಸಿದು ಮರ ಬಿದ್ದು ಸಂಚಾರ ತಡೆ ತೀರ್ಥಹಳ್ಳಿ : ಮಲೆನಾಡಿನ ಜೀವನಾಡಿಯಾದ ಆಗುಂಬೆ ಘಾಟ್‌ ರಸ್ತೆ ಮತ್ತೆ ಪ್ರಕೃತಿಯ ಕೋಪಕ್ಕೆ ತುತ್ತಾಗಿದೆ. ಐದನೇ ತಿರುವಿನ ಬಳಿ ಧರೆ ಕುಸಿದು, ದೊಡ್ಡ ಮರ ರಸ್ತೆ ಮಧ್ಯೆ ಬಿದ್ದ ಪರಿಣಾಮ ಸಂಜೆ ವೇಳೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಭಾರೀ ತೊಂದರೆಗೆ ಒಳಗಾಗಿದ್ದಾರೆ. ಮರ ಬಿದ್ದುದರಿಂದ ರಸ್ತೆ ಸಂಪೂರ್ಣ ಮುಚ್ಚಿಕೊಂಡಿದ್ದು, ತೆರವು ಕಾರ್ಯ ಕೂಡಾ ಗೊಂದಲಮಯವಾಗಿದೆ. ಸ್ಥಳೀಯರ ಪ್ರಕಾರ…

Read Full News
FIR 1 696x392

ಕೆಎಸ್ಆರ್’ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ – ಪ್ರಕರಣ ದಾಖಲು

ಕೆಎಸ್ಆರ್’ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ – ಪ್ರಕರಣ ದಾಖಲು ಶಿಕಾರಿಪುರ ತಾಲೂಕಿನ ಕೋಟಿಪುರ ಗ್ರಾಮದಲ್ಲಿ ಕೆಎಸ್ಆರ್’ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂವರು ಗ್ರಾಮಸ್ಥರ ವಿರುದ್ದ ಪ್ರಕರಣ ದಾಖಲಾದ ಘಟನೆ ನಡೆದಿದೆ. ತನ್ವೀರ್ ಹೊರಕೆರೆ (38) ಹಲ್ಲೆಗೊಳಗಾದ ಬಸ್ ಕಂಡಕ್ಟರ್ ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರು ಶಿಕಾರಿಪುರ – ಮುಡುಬಾಸಿದ್ದಾಪುರ ಮಾರ್ಗದಲ್ಲಿ ಸಂಚರಿಸುವ ಬಸ್ ನಲ್ಲಿ ಕಂಡಕ್ಟರ್ ಆಗಿದ್ದಾರೆ. ಇಬ್ಬರು…

Read Full News
GridArt 20250918

ರಿಪ್ಪನ್ ಪೇಟೆ ಬಾಲಕರ ವಸತಿ ನಿಲಯಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ , ಪರಿಶೀಲನೆ

ರಿಪ್ಪನ್ ಪೇಟೆ ಬಾಲಕರ ವಸತಿ ನಿಲಯಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ , ಪರಿಶೀಲನೆ ರಿಪ್ಪನ್ ಪೇಟೆ : ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ರಿಪ್ಪನ್‌ಪೇಟೆಯ ಹಳೆಯ ಸಂತೇಮಾರ್ಕೆಟ್ ರಸ್ತೆಯಲ್ಲಿರುವ ಬಾಲಕರ ವಸತಿ ನಿಲಯಕ್ಕೆ ದಿಡೀರ್ ಭೇಟಿ ನೀಡಿದರು. ಯಾವುದೇ ಪೂರ್ವ ಸೂಚನೆ ಇಲ್ಲದೆ ದಿಡೀರ್ ಆಗಮಿಸಿ ಮಕ್ಕಳೊಂದಿಗೆ ಕಾಲ ಕಳೆದರು. ಸಾಮಾನ್ಯವಾಗಿ ಸಭಾಂಗಣಗಳಲ್ಲಿ, ವೇದಿಕೆಗಳ ಮೇಲೆ ಮಾತ್ರ ಕಾಣುವ ನಾಯಕರು ಈ ಬಾರಿ ಮಕ್ಕಳ ನಡುವೆ ನಿಂತು ಅವರ…

Read Full News
GridArt 20250918

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಿ – ಶಾಸಕ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆಯಲ್ಲಿ ಈದ್ ಮಿಲಾದ್ ಅಂಗವಾಗಿ ಸೌಹಾರ್ಧ ಸಂಗಮ ರಿಪ್ಪನ್‌ಪೇಟೆ : ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುವ ಮೂಲಕ ಸುಸಂಸ್ಕೃತ ಸಮಾಜ ಮತ್ತು ಸದೃಢ ದೇಶ ನಿರ್ಮಾಣ ಮಾಡಬೇಕು ಹಾಗೆಯೇ ಉದ್ಯೋಗ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ನೀಡಿರುವ ಮೀಸಲಾತಿಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬೇಳೂರು ಗೋಪಾಲಕೃಷ್ಣ ಸಲಹೆ ನೀಡಿದರು. ಪಟ್ಟಣದಲ್ಲಿ ಈದ್…

Read Full News
IMG 20250917 WA0063

ಪ್ರಧಾನಿ ನರೇಂದ್ರ ಮೋದಿ 75ನೇ ಜನ್ಮದಿನ : ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ

ಪ್ರಧಾನಿ ನರೇಂದ್ರ ಮೋದಿ 75ನೇ ಜನ್ಮದಿನ : ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮ ದಿನಾಚರಣೆಯ ಅಂಗವಾಗಿ ರಿಪ್ಪನ್‌ಪೇಟೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ನೆರೆವೇರಿಸಲಾಯಿತು. ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್ ಸತೀಶ್ ಮಾತನಾಡಿ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಅಭಿಮಾನಪೂರ್ವಕ ಶುಭಕಾಮನೆಗಳು. ಆರೋಗ್ಯಪೂರ್ಣವಾಗಿ ಇನ್ನೂ ಬಹಳ ವರ್ಷಗಳ ಕಾಲ ಮೋದಿಯವರ ರಾಷ್ಟ್ರಸೇವೆ ಹೀಗೆಯೇ ಮುಂದುವರಿಯುವಂತೆ ದೇವರು ಆಶೀರ್ವದಿಸಲಿ ಎಂದು…

Read Full News
GridArt 20250917

ರಿಪ್ಪನ್‌ಪೇಟೆಯಲ್ಲಿ ವಿಜೃಂಭಣೆಯ ವಿಶ್ವಕರ್ಮ ಜಯಂತಿ ಆಚರಣೆ

ರಿಪ್ಪನ್‌ಪೇಟೆಯಲ್ಲಿ ವಿಜೃಂಭಣೆಯ ವಿಶ್ವಕರ್ಮ ಜಯಂತಿ ಆಚರಣೆ ರಿಪ್ಪನ್‌ಪೇಟೆಯಲ್ಲಿ ವಿಶ್ವಕರ್ಮ ಜಯಂತಿಯನ್ನು ಭಕ್ತಿಭಾವದಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಮಾರಂಭಕ್ಕೆ ಹಲವು ಗಣ್ಯರು ಹಾಜರಿದ್ದರೂ, ಪ್ರಮುಖವಾಗಿ ಇಬ್ಬರು ಅತಿಥಿಗಳು ಮಾತ್ರ ಮಾತನಾಡಿ ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಉಪನ್ಯಾಸಕರಾದ ಡಾ ಗಣೇಶ್ ಆಚಾರ್ ವಿಶ್ವಕರ್ಮ ಜಯಂತಿ ಶ್ರಮಜೀವಿಗಳ ಹಬ್ಬವಾಗಿದ್ದು, ಸಮಾಜದ ನೈತಿಕ ಶಕ್ತಿ ಹಾಗೂ ಅಭಿವೃದ್ಧಿಯ ಪ್ರತೀಕವಾಗಿದೆ ಎಂದು ಹೇಳಿದರು. “ಬಡಗಿ, ಕಮ್ಮಾರರು, ಕಾರ್ಮಿಕರು ತಮ್ಮ ಪರಿಶ್ರಮದಿಂದಲೇ ಸಮಾಜಕ್ಕೆ ಆಧಾರವಾಗಿದ್ದಾರೆ. ಅವರ ಶ್ರಮವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ”…

Read Full News
Images 2025 09 17T211112.018

ಅಡಕೆ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು

ಅಡಕೆ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು ಶಿವಮೊಗ್ಗ : , ಸೆಪ್ಟೆಂಬರ್ 17: ವಿದ್ಯುತ್ ಸ್ಪರ್ಶದಿಂದ ಕಾರ್ಮಿಕನೋರ್ವ ಮೃತಪಟ್ಟ ಘಟನೆ, ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಅಡಕೆ ತೋಟವೊಂದರಲ್ಲಿ ನಡೆದಿದೆ. ಹರಮಘಟ್ಟ ಗ್ರಾಮದ ನಿವಾಸಿ ವೆಂಕಟೇಶ್ (45) ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ವಿದ್ಯುತ್ ಸ್ಪರ್ಶದಿಂದ ಗಂಭೀರ ಸ್ಥಿತಿಯಲ್ಲಿದ್ದ ವೆಂಕಟೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಕಾರ್ಮಿಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಮೃತ ಕಾರ್ಮಿಕನು…

Read Full News
Images 2025 09 17T210511.829

ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿದ್ದ ತಾಯಿಯನ್ನು ನೋಡಲು ಬಂದ ಯುವಕ ಆಸ್ಪತ್ರೆಯಲ್ಲಿಯೇ ನೇಣಿಗೆ ಶರಣು

ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿದ್ದ ತಾಯಿಯನ್ನು ನೋಡಲು ಬಂದ ಯುವಕ ಆಸ್ಪತ್ರೆಯಲ್ಲಿಯೇ ನೇಣಿಗೆ ಶರಣು ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ನಾಮಫಲಕಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣಿಗೆ ಶರಣಾದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುರಹೊನ್ನೆಯ ನಿವಾಸಿ ಆಕಾಶ್ (28) ನೇಣಿಗೆ ಶರಣಾಗಿದ್ದಾನೆ. ಆಕಾಶ್ ತಾಯಿಗೆ ಹುಷಾರಿಲ್ಲದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಾಯಿಯ ಅರೈಕೆಗಾಗಿ ಆಸ್ಪತ್ರೆಗೆ ಬಂದಿದ್ದ ಆಕಾಶ್ ಒಪಿಡಿಗೆ ಅಡ್ಮಿಷನ್ ಪತ್ರ ಪಡೆಯುವ ಪಕ್ಕದಲ್ಲಿ ಸೂಪರ್ ಸ್ಪೆಷಾಲಿಟಿಗೆ ದಾರಿ ಎಂಬ ನಾಮಫಲಕಕ್ಕೆ ನೇಣು ಬಿಗಿದುಕೊಂಡಿದ್ದಾನೆ….

Read Full News
GridArt 20250916

ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರಾ ಮಹೋತ್ಸವ – ಶಾಸಕ ಬೇಳೂರು ಗೋಪಾಲಕೃಷ್ಣ ಭಾಗಿ

ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರಾ ಮಹೋತ್ಸವ – ಶಾಸಕ ಬೇಳೂರು ಗೋಪಾಲಕೃಷ್ಣ ಭಾಗಿ ರಿಪ್ಪನ್ ಪೇಟೆ : ಮಲೆನಾಡಿನ ಆರಾಧ್ಯದೈವ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ಮೂರನೇ ಜಾತ್ರಾ ಮಹೋತ್ಸವದಲ್ಲಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಮಂಗಳವಾರ ನೂರಾರು ಭಕ್ತರೊಂದಿಗೆ ಪಾಲ್ಗೊಂಡು ದೇವಿಯ ದರ್ಶನ ಪಡೆದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮ್ಮನಘಟ್ಟ ಕ್ಷೇತ್ರವು ಮುಂದಿನ ದಿನಗಳಲ್ಲಿ ಸಿಗಂದೂರು ಶ್ರೀ ಕ್ಷೇತ್ರದಂತೆಯೇ ಪ್ರಸಿದ್ಧ ಪ್ರವಾಸಿ ತಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳ ಕೊರತೆ ನಿವಾರಣೆಯಾಗುವುದರೊಂದಿಗೆ ಕ್ಷೇತ್ರವು ರಾಜ್ಯ…

Read Full News
GridArt 20250916

ಶಿವಮೊಗ್ಗದ ಈದ್ ಮೆರವಣಿಗೆಯಲ್ಲಿ ಡಿ.ಜೆ ಅಬ್ಬರ – ಮೆರವಣಿಗೆಯಲ್ಲಿದ್ದ ಕೆಲವು ಮುಸ್ಲಿಂ ಯುವಕರಿಂದ ಡಿಜೆ ಡ್ಯಾನ್ಸ್ ಗೆ ವಿರೋಧ

ಶಿವಮೊಗ್ಗದ ಈದ್ ಮೆರವಣಿಗೆಯಲ್ಲಿ ಡಿ.ಜೆ ಅಬ್ಬರ – ಮೆರವಣಿಗೆಯಲ್ಲಿದ್ದ ಕೆಲವು ಮುಸ್ಲಿಂ ಯುವಕರಿಂದ ಡಿಜೆ ಡ್ಯಾನ್ಸ್ ಗೆ ವಿರೋಧ ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆಯಲ್ಲಿ ಇವತ್ತು ನೂರಕ್ಕು ಹೆಚ್ಚು ಡಿಜೆ ಸಿಸ್ಟಮ್‌ಗಳು ಅಳವಡಿಸಲಾಗಿತ್ತು , ಇನ್ನೊಂದೆಡೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವರೆ ಡಿಜೆಗೆ ವಿರೋಧ ವ್ಯಕ್ತಪಡಿಸಿ ಭಿತ್ತಿ ಪತ್ರ ಪ್ರದರ್ಶಿಸಿದರು. ಇನ್ನೊಂದೆಡೆ ಭಾರಿ ಶಬ್ದ ಮಾಡುತ್ತಿದ್ದ ಡಿಜೆ ವಾಹನವನ್ನು ಪೊಲೀಸರು ತಡೆದು ಸೌಂಡ್ ಆಫ್ ಮಾಡಿಸಿದ ಘಟನೆ ನಡೆಯಿತು. ಶಿವಮೊಗ್ಗ ನಗರದಲ್ಲಿ ಇವತ್ತು ಅದ್ಧೂರಿಯ ಈದ್ ಮಿಲಾದ್ ಮೆರವಣಿಗೆ ನಡೆಯಿತು….

Read Full News
GridArt 20250916

ರಿಪ್ಪನ್‌ಪೇಟೆ : ಈದ್ ಮಿಲಾದ್ ಅಂಗವಾಗಿ ನಾಳೆ(17-09-2025) ಸೌಹಾರ್ದ ಸಂಗಮ

ರಿಪ್ಪನ್‌ಪೇಟೆ : ಈದ್ ಮಿಲಾದ್ ಅಂಗವಾಗಿ ನಾಳೆ(17-09-2025) ಸೌಹಾರ್ದ ಸಮಾವೇಶ ರಿಪ್ಪನ್‌ಪೇಟೆ : ಈದ್ ಮಿಲಾದ್ ಹಬ್ಬದ ಅಂಗವಾಗಿ ಬುಧವಾರ ಸೌಹಾರ್ದ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾದ ಅಫ಼್ಜಲ್ ಬ್ಯಾರಿ ಪತ್ರೀಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬುಧವಾರ ಮೊಹಿಯುದ್ದೀನ್ ಜುಮ್ಮಾ ಮಸೀದಿ,ಮೆಕ್ಕಾ ಮಸೀದಿ ,ಈದ್ ಮಿಲಾದ್ ಸಮಿತಿ ,ತಾಅಜಿಜುಲ್ ಅರಬ್ಬಿಕ್ ಮದರಸ ,ಬದ್ರಿಯಾ ಮದರಸ ಗವಟೂರು ,SYS ಹಾಗೂ SSF ರಿಪ್ಪನ್‌ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರವಾದಿಯವರ 1500ನೇ ಜನ್ಮ ದಿನದ ಪ್ರಯುಕ್ತ…

Read Full News
GridArt 20250916 145748769 wm wm

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ಓರ್ವ ಮಹಿಳೆ ಸಾವು , ಇನ್ನಿಬ್ಬರು ಗಂಭೀರ

ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ಓರ್ವ ಮಹಿಳೆ ಸಾವು , ಇನ್ನಿಬ್ಬರು ಗಂಭೀರ ರಿಪ್ಪನ್ ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ ಸ್ತ್ಗಳದಲ್ಲಿಯೇ ಓರ್ವ ವೃದ್ದೆ ಮೃತಪಟ್ಟಿದ್ದು ಇನ್ನಿಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಪಟ್ಟಣದ ಚಿಪ್ಪಿಗರ ಕೆರೆಯಲ್ಲಿ ನಡೆದಿದೆ. ತ್ಯಾಗರ್ತಿಯಿಂದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದರ್ಶನ ಪಡೆದು ಹಿಂದಿರುಗುತ್ತಿರುವ ಸಂಧರ್ಭದಲ್ಲಿ ಪಟ್ಟಣದ ಚಿಪ್ಪಿಗರ ಕೆರೆ ಏರಿಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಸ್ವಿಫ಼್ಟ್ ಕಾರು…

Read Full News
GridArt 20250916

ನೀರಿನ ಹೊಂಡಕ್ಕೆ ಬಿದ್ದು 14 ವರ್ಷದ ಬಾಲಕನ ಅನುಮಾನಾಸ್ಪದ ಸಾವು – ಇದು ಆಕಸ್ಮಿಕವಲ್ಲ, ಕೊಲೆ ಎಂದು ಪೋಷಕರ ಕಣ್ಣೀರಿನ ಅಳಲು

ನೀರಿನ ಹೊಂಡಕ್ಕೆ ಬಿದ್ದು 14 ವರ್ಷದ ಬಾಲಕನ ಅನುಮಾನಾಸ್ಪದ ಸಾವು – ಇದು ಆಕಸ್ಮಿಕವಲ್ಲ, ಕೊಲೆ ಎಂದು ಪೋಷಕರ ಕಣ್ಣೀರಿನ ಅಳಲು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕರಿನಗೊಳ್ಳಿ ಗ್ರಾಮದಲ್ಲಿ 14 ವರ್ಷದ ಬಾಲಕನ ಸಾವು ಆಘಾತ ಮೂಡಿಸಿದೆ. ಮೇ 26 ರಂದು ಸುರೇಶ್ ಎಂಬುವರ ಪುತ್ರ ಸುಬ್ರಹ್ಮಣ್ಯ(14) ಮನೆಯ ಸಮೀಪದ ಶುಂಠಿ ತೋಟದಲ್ಲಿದ್ದ ಕೃತಕ ನೀರಿನ ಹೊಂಡದಲ್ಲಿ ನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ದುರಂತದ ಕರಿ ನೆರಳನ್ನು ಬೀರಿದೆ. ಪೊಲೀಸರು ಇದನ್ನು “ಆಕಸ್ಮಿಕ ಸಾವು”…

Read Full News
GridArt 20250915 210217213 wm

ಹುಂಚ ಅಡಿಕೆ ತೋಟದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆ – ಅಧಿಕಾರಿಗಳ ತುರ್ತು ಭೇಟಿ ,ತನಿಖೆ ಚುರುಕು

ಹುಂಚ ಅಡಿಕೆ ತೋಟದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆ – ಅಧಿಕಾರಿಗಳ ತುರ್ತು ಭೇಟಿ ,ತನಿಖೆ ಚುರುಕು ಹುಂಚ ಭಾಗದಲ್ಲಿ ಕಾಡುಕೋಣಗಳ ಮಾರಣಹೋಮಕ್ಕೆ ಅಂತ್ಯ ಯಾವಾಗ? ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಸರ್ವೆ ನಂ. 52/2 ರಲ್ಲಿ ರಾಮಪ್ಪ ಬಿನ್ ಮರಿಯಪ್ಪ ಅವರ ಅಡಿಕೆ ತೋಟದ ಹೊಂಡದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆಯಾಗಿದ್ದು, ಈ ಘಟನೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಸೋಮವಾರ ಬೆಳಿಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಹೊರಬಿದ್ದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ…

Read Full News
IMG 20250915 WA0044

ಒಕ್ಕಲಿಗರ ಸಂಘ ಜನಹಿತ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ – ಆರ್ ಎಂ ಮಂಜುನಾಥ್ ಗೌಡ

ಒಕ್ಕಲಿಗರ ಸಂಘ ಜನಹಿತ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ – ಆರ್ ಎಂ ಮಂಜುನಾಥ್ ಗೌಡ ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕಿನ ಒಕ್ಕಲಿಗರ ಸಮಾಜವು ಜನಸಂಖ್ಯೆಯಲ್ಲಿ ಕಡಿಮೆಯಾದರೂ ಜನಹಿತ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಬಡವರ ಸಹಾಯಕ್ಕೆ ಸದಾ ಕೈಚಾಚಿ ಸಮಾಜದಲ್ಲಿ ಮಾದರಿಯಾಗುತ್ತಿದೆ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅಭಿಪ್ರಾಯಪಟ್ಟರು. ರಿಪ್ಪನ್‌ಪೇಟೆಯ ವಿಶ್ವಮಾನವ ಒಕ್ಕಲಿಗರ ಸಭಾಭವನದ ಹಿಂಭಾಗದಲ್ಲಿ ನೂತನ ಅಡುಗೆ ಕೊಠಡಿಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, “ಒಕ್ಕಲಿಗ ಸಮಾಜವು ತನ್ನ ಸಂಘಟನೆಯೊಂದಿಗೆ ಇತರ ಸಮಾಜಗಳನ್ನೂ ಪ್ರೀತಿ–ವಿಶ್ವಾಸದಿಂದ ಸ್ವೀಕರಿಸುತ್ತದೆ. ಕುವೆಂಪುರವರ…

Read Full News
GridArt 20250915

ರಸ್ತೆ ಅಪಘಾತ : ಮೆಡಿಕಲ್ ಪ್ರತಿನಿಧಿ ಮಹೇಶ್ ಅಕಾಲಿಕ ಸಾವು

ರಸ್ತೆ ಅಪಘಾತ : ಮೆಡಿಕಲ್ ಪ್ರತಿನಿಧಿ ಮಹೇಶ್ ಅಕಾಲಿಕ ಸಾವು ಶಿವಮೊಗ್ಗ: ಮಲವಗೋಪ್ಪದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ಮೆಡಿಕಲ್ ಪ್ರತಿನಿಧಿ ಮಹೇಶ್ ಅವರು ದುರ್ಮರಣ ಕಂಡಿದ್ದಾರೆ. ಮಹೇಶ್ ಅವರು ಎಥರ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ರಸ್ತೆಯ ಆಳವಾದ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸುವ ವೇಳೆ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಅಕಾಲಿಕವಾಗಿ ಜೀವ ಕಳೆದುಕೊಂಡರು. ನಗರದಲ್ಲಿ…

Read Full News
PO14 BS Market scam

SHIVAMOGGA | ವೈದ್ಯೆಯ ವಾಟ್ಸಪ್ ಹ್ಯಾಕ್ ಮಾಡಿ ಹಣ ವಂಚನೆ

SHIVAMOGGA | ವೈದ್ಯೆಯ ವಾಟ್ಸಪ್ ಹ್ಯಾಕ್ ಮಾಡಿ ಹಣ ವಂಚನೆ ಶಿವಮೊಗ್ಗ: ವೈದ್ಯೆಯೊಬ್ಬರ ವಾಟ್ಸಪ್ ಹ್ಯಾಕ್  ಮಾಡಿ ವೈದ್ಯರೊಬ್ಬರ ಮೊಬೈಲ್‌ಗೆ ಮೆಸೇಜ್ ಕಳುಹಿಸಿ ೯೫,೦೦೦ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. ಶಿವಮೊಗ್ಗದ ವೈದ್ಯೆಯೊಬ್ಬರ ವಾಟ್ಸಪ್ ನಂಬರ್ ಹ್ಯಾಕ್ ಮಾಡಿದ ದುಷ್ಕರ್ಮಿಗಳು ಹಣದ ತುರ್ತು ಅಗತ್ಯವಿದೆ ಎಂದು ಸಹೋದ್ಯೋಗಿಗೆ ಮೆಸೇಜ್ ಕಳುಹಿಸಿದ್ದರು. ಅದನ್ನು ನಂಬಿದ ಸಹೋದ್ಯೋಗಿ ಆ ವಾಟ್ಸಪ್ ಮೆಸೇಜ್‌ನಲ್ಲಿ ಕಳುಹಿಸಲಾಗಿದ್ದ ಮತ್ತೊಂದು ಮೊಬೈಲ್ ನಂಬರ್‌ಗೆ ಫೋನ್ ಪೇ ಮೂಲಕ ಎರಡು…

Read Full News
GridArt 20250915 075459788 wm wm wm

HUMACHA | ಎರಡು ಕಾಡುಕೋಣಗಳ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ – ವಿಷಪ್ರಯೋಗ ಶಂಕೆ!

HUMACHA | ಕೊಳೆತ ಸ್ಥಿತಿಯಲ್ಲಿ ಎರಡು ಕಾಡುಕೋಣಗಳ ಕಳೇಬರ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ತೋಟವೊಂದರ ಹೊಂಡದಲ್ಲಿ ಕೊಳೆತ ಸ್ಥಿತಿಯಲ್ಲಿ ಎರಡು ಕಾಡುಕೋಣಗಳ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಸರ್ವೆ ನಂಬರ 52 /2 ರ ರಾಮಪ್ಪ ಬಿನ್ ಮರಿಯಪ್ಪ ಎಂಬುವವರ ಅಡಿಕೆ ತೋಟದ ಹೊಂಡವೊಂದರಲ್ಲಿ ಎರಡು ಕಾಡುಕೋಣಗಳ ಮೃತದೇಹ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಕಾಡುಕೋಣ ಮೃತಪಟ್ಟು ನಾಲ್ಕೈದು ದಿನಗಳಾಗಿರಬಹುದು ಎನ್ನಲಾಗುತಿದ್ದು , ವಿಷಪ್ರಾಶನ…

Read Full News
GridArt 20250914

ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಗುಂಡಿಕ್ಕಿ ಕೊಲ್ಲಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ

ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಗುಂಡಿಕ್ಕಿ ಕೊಲ್ಲಬೇಕು – ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ಸಾಗರ: “ನಮ್ಮ ದೇಶದಲ್ಲಿ ಇದ್ದುಕೊಂಡು ಪಾಕಿಸ್ತಾನ ಜಿಂದಾಬಾದ್ ಎನ್ನುವವರು ದೇಶದ್ರೋಹಿಗಳು. ಅವರಿಗೆ ಈ ನೆಲದಲ್ಲಿ ಬದುಕುವ ಹಕ್ಕಿಲ್ಲ. ಅಂತಹವರನ್ನು ಗುಂಡಿಕ್ಕಿ ಕೊಲ್ಲಬೇಕು” ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಾಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, “ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಅತ್ಯಂತ ಖಂಡನೀಯ ಕೃತ್ಯ. ಇಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಈ…

Read Full News
PO14 BS Market scam

ಟ್ರೇಡಿಂಗ್ ಹೆಸರಲ್ಲಿ ವ್ಯಕ್ತಿಗೆ 1.06 ಕೋಟಿ ರೂ. ವಂಚನೆ – ದೂರು ದಾಖಲು

ಟ್ರೇಡಿಂಗ್ ಹೆಸರಲ್ಲಿ ವ್ಯಕ್ತಿಗೆ 1.06 ಕೋಟಿ ರೂ. ವಂಚನೆ – ದೂರು ದಾಖಲು ಟ್ರೇಡಿಂಗ್ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ 1.06 ಕೋಟಿ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗ ಜಿಲ್ಲೆಯ ವ್ಯಕ್ತಿಗೆ ಕರೆ ಮಾಡಿದ ಅಪರಿಚಿತನೊಬ್ಬ ಟ್ರೇಡಿಂಗ್ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿ ವಾಟ್ಸ್‌ಆಪ್ ಗ್ರೂಪ್‌ಗೆ ಸೇರುವಂತೆ ಲಿಂಕ್ ಕಳುಹಿಸಿದ್ದ. ವಾಟ್ಸ್‌ಆಪ್ ಗ್ರೂಪ್‌ನಲ್ಲಿ ತನಿಷ್ಕಾ ಸನ್ಯಾಮ್ ಎಂದು ಪರಿಚಯ ಮಾಡಿಕೊಂಡು, ಟ್ರೇಡಿಂಗ್ ಮಾಡುವ ಮೊಬೈಲ್…

Read Full News
IMG 20250914 WA0010

ಉಕ್ಕಡ ಮಗುಚಿ ನೀರುಪಾಲಾಗಿದ್ದ ಯುವಕನ ಶವ ಪತ್ತೆ – ಮುಳುಗು ತಜ್ಞ ಈಶ್ವರ್ ಮಲ್ಪೆ ನೇತ್ರತ್ವದ ಕಾರ್ಯಾಚರಣೆ

ಹೊಸನಗರ : ಹೊಳೆ ದಾಟುವಾಗ ಉಕ್ಕಡ ಮಗುಚಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾರೆ. ಮುಳುಗು ತಜ್ಞ ಈ‍ಶ್ವರ್‌ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೃತದೇಹ ಪತ್ತೆ ಮಾಡಿದ್ದಾರೆ. ಉಕ್ಕಡ ಮಗುಚಿ ಪೂರ್ಣೇಶ್‌ (22) ನಾಪತ್ತೆಯಾಗಿದ್ದರು. ಇವತ್ತು ಬೆಳಗ್ಗೆ ಮೃತದೇಹ ಹೊರ ತೆಗೆಯಲಾಗಿದೆ. ಮೃತದೇಹ ಕಂಡು ಪೂರ್ಣೇಶ್‌ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹೊಸನಗರ ತಾಲೂಕು ಬಂಟೋಡಿಯಲ್ಲಿ ಉಕ್ಕಡ ಮಗುಚಿ ಪೂರ್ಣೇಶ್ ನಾಪತ್ತೆಯಾಗಿದ್ದರು. ಶರತ್‌ ಮತ್ತು ರಂಜನ್‌ ಪಾರಾಗಿದ್ದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಶೋಧ…

Read Full News
GridArt 20250914 102521170 wm

ಹೊಸನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನಾಗೋಡಿ ವಿಶ್ವನಾಥ್ ಹಾಗೂ ಉಬೇದುಲ್ಲಾ ಷರೀಫ್ ನೇಮಕ

ಶಿವಮೊಗ್ಗ: ಜಿಲ್ಲೆಯ ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರನ್ನಾಗಿ ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯ, ಯುವ ಮುಖಂಡ ನಾಗೋಡಿ ವಿಶ್ವನಾಥ್ ಹಾಗೂ ಕೆಂಚನಾಲ ಗ್ರಾಪಂ ಮಾಜಿ ಅಧ್ಯಕ್ಷ ಉಬೇದುಲ್ಲಾ ಷರೀಫ್ ಅವರನ್ನು ನೇಮಕ ಮಾಡಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ( KPCC) ಆದೇಶಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಶಿಫಾರಸ್ಸಿನ ಮೇರೆಗೆ ಹೊಸನಗರ ಬ್ಲಾಕ್…

Read Full News
1201444 377748

ಹೊಸನಗರ ಬ್ಲಾಕ್ ಕಾಂಗ್ರೆಸ್ ನೂತನ ಪಟ್ಟಿ ಬಿಡುಗಡೆ

ಹೊಸನಗರ ಬ್ಲಾಕ್ ಕಾಂಗ್ರೆಸ್ ನೂತನ ಪಟ್ಟಿ ಬಿಡುಗಡೆ ಹೊಸನಗರ ; ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಶಿಫಾರಸ್ಸಿನಂತೆ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯು, ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಿವಿಧ ಸ್ಥಾನಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ನೂತನ ಅಧ್ಯಕ್ಷರಾಗಿ ಕೋಡೂರು ಬಿ.ಜಿ. ಚಂದ್ರಮೌಳಿ, ಉಪಾಧ್ಯಕ್ಷರಾಗಿ ನಾಗೋಡಿ ವಿಶ್ವನಾಥ್, ಕೆಂಚನಾಲ ಉಬೇದ್ದುಲ್ಲಾ ಷರೀಫ್, ಜಯನಗರ ಚನ್ನಬಸವ, ಬಾಳೂರು ಲೀಲಾವತಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹೊಸನಗರ ಪಟ್ಟಣದ ಎಂ.ಪಿ.ಸುರೇಶ್, ಸದಾಶಿವ ಶ್ರೇಷ್ಟಿ, ರಿಪ್ಪನ್‌ಪೇಟೆಯ ಮಧುಸೂಧನ್…

Read Full News
GridArt 20250914

HOSANAGARA | ಉಕ್ಕಡ ಮಗುಚಿ ಯುವಕ ನೀರುಪಾಲು

HOSANAGARA | ಉಕ್ಕಡ ಮಗುಚಿ ಯುವಕ ನೀರುಪಾಲು ಹೊಳೆ ದಾಟುವಾಗ ತೆಪ್ಪ ಮಗುಚಿ ಯುವಕ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೊಸೂರು (ಸಂಪೆಕಟ್ಟೆ) ಗ್ರಾಪಂ ವ್ಯಾಪ್ತಿಯ ಬಂಟೋಡಿ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಪೂರ್ಣೇಶ್ (22) ಮೃತ ದುರ್ಧೈವಿ. ಅದೃಷ್ಟವಶಾತ್ ಜೊತೆಯಲ್ಲಿದ್ದ ಶರತ್ ಮತ್ತು ರಂಜನ್ ಎಂಬ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಕಾಲು ಸಂಕ ನಿರ್ಮಾಣ ಮಾಡುವಂತೆ 20 ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಮೃತದೇಹಕ್ಕಾಗಿ ಅಗ್ನಿಶಾಮಕ ದಳದ…

Read Full News
GridArt 20250912 114419284 wm

RIPPONPETE | ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿ ಸಾವು

RIPPONPETE |  ಅಕ್ರಮ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿ ಸಾವು ಸದ್ದು ಮಾಡುತ್ತಿರುವ ಅಕ್ರಮ ನಾಡ ಬಂದೂಕುಗಳು – ಕಾನೂನಿಗೆ ಬಿಗಿ ಕಡಿವಾಣ ಅಗತ್ಯ – ಅನಧಿಕೃತ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡು ವ್ಯಕ್ತಿಯೊಬ್ಬರನ್ನು ಬಲಿ ಪಡೆದುಕೊಂಡ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿರಿಯೋಗಿ ಗ್ರಾಮದಲ್ಲಿ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಕೋಡೂರು ಸಮೀಪದ ಹಿರಿಯೋಗಿ ಗ್ರಾಮದ ದೇವರಾಜ…

Read Full News
GridArt 20250912

ಆನೆಗದ್ದೆ ಶಾಲೆಯ ಶಿಕ್ಷಕಿಯ ವರ್ಗಾವಣೆ – ವಿದ್ಯಾರ್ಥಿಗಳಿಂದ ಶಿಕ್ಷಣಾಧಿಕಾರಿ ಕಛೇರಿ ಎದುರು ಪ್ರತಿಭಟನೆ

ಆನೆಗದ್ದೆ ಶಾಲೆಯ ಶಿಕ್ಷಕಿಯ ವರ್ಗಾವಣೆ – ವಿದ್ಯಾರ್ಥಿಗಳಿಂದ ಶಿಕ್ಷಣಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಆನೆಗದ್ದೆ ಶಾಲೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಶಾಲೆ ಆದರೆ ಖಾಸಗಿ ವಿದ್ಯಾಸಂಸ್ಥೆಗಳ ವಾಹನವು ಈ ಭಾಗದ ಹಳ್ಳಿಹಳ್ಳಿಗೆ ನುಗ್ಗಿದ ಪರಿಣಾಮ ಇಂತಹ ಹೆಸರುವಾಸಿ ಶಾಲೆಯು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ಹೋಗಿತ್ತು ಇದನ್ನು ಮನಗಂಡ ಊರಿನ ಗ್ರಾಮಸ್ಥರು ವಿಶೇಷ ಆಸಕ್ತಿ ವಹಿಸಿ ಹಲವು ಹೊಸ ದಾಖಲಾತಿಗಳನ್ನು ಸೇರಿಸುವ ಮೂಲಕ ಇಂತಹ ಶಾಲೆಯನ್ನು ಉಳಿಸಿಕೊಂಡಿದ್ದರು ಹಾಗೇಯೆ ಅಲ್ಲಿನ ಶಿಕ್ಷಕರು ಅದಕ್ಕೆ…

Read Full News
Screenshot 2025 09 12 10 21 42 795 com.miui.gallery edit

ಕಾಡುಹಂದಿ ದಾಳಿ – ಪ್ರಾಣಾಪಾಯದಿಂದ ಪಾರಾದ ರೈತ

ಕಾಡುಹಂದಿ ದಾಳಿ – ರೈತ ಪ್ರಾಣಾಪಾಯದಿಂದ ಪಾರು ಸಾಗರ ತಾಲ್ಲೂಕು ಬಾರಂಗಿ ಹೋಬಳಿ ಕಾನೂರು ಗ್ರಾಮದ ರೈತ ರಾಮಪ್ಪ ಜಟ್ಟನಾಯ್ಕ (60) ಅವರ ಮೇಲೆ ಕಾಡುಹಂದಿ ದಾಳಿ ನಡೆಸಿದ ಘಟನೆ ನಡೆದಿದೆ. ದಾಳಿಯ ತೀವ್ರತೆಯ ನಡುವೆಯೂ ಅವರು ಪ್ರಾಣಾಪಾಯದಿಂದ ಪಾರಾಗಿರುವುದು ಅಚ್ಚರಿಯ ಸಂಗತಿಯಾಗಿ ಪರಿಣಮಿಸಿದೆ. ದುರ್ಗಮ ಪ್ರದೇಶವಾದ ಕಾನೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಕಾಡುಹಂದಿಯ ಹರಿತವಾದ ಕೋರೆಗಳಿಂದ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗೊಂಡ ರಾಮಪ್ಪ ಜಟ್ಟನಾಯ್ಕ ಅವರು ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು…

Read Full News
IMG 20250911 WA0039

ಕನ್ನಡ ಶಿಕ್ಷಕರನ್ನು ಒದಗಿಸಿ – ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಿದ ಹೊಸನಗರದ ವಿದ್ಯಾರ್ಥಿನಿಯರು

ಕನ್ನಡ ಶಿಕ್ಷಕರನ್ನು ಒದಗಿಸಿ – ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಿದ ಹೊಸನಗರದ ವಿದ್ಯಾರ್ಥಿನಿಯರು ಶಿವಮೊಗ್ಗ: ಕನ್ನಡ ಶಿಕ್ಷಕರನ್ನು ಒದಗಿಸಿ ಎಂದು ಆಗ್ರಹಿಸಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು  ಹೊಸನಗರದಿಂದ ಬಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಘಟನೆ ಗುರುವಾರ ಇಲ್ಲಿ ನಡೆದಿದೆ. ಹೊಸನಗರದ ಜೂನಿಯರ್ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಿದರು. ಕನ್ನಡ, ಇಂಗ್ಲೀಷ್ ಬರೆಯಲು ಬಾರದ ಉರ್ದು ಶಿಕ್ಷಕರಿಂದ ಕನ್ನಡ ಪಾಠ ಮಾಡಿಸಲು ಮುಂದಾಗಿರುವ…

Read Full News
IMG 20250911 WA0038

ಅಪರಿಚಿತ ವಾಹನ ಡಿಕ್ಕಿ: ಚಿರತೆ ಮರಿ ಸಾವು

ಅಪರಿಚಿತ ವಾಹನ ಡಿಕ್ಕಿ: ಚಿರತೆ ಮರಿ ಸಾವು ಸೊರಬ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿಯೊಂದು ಸಾವು ಕಂಡ ಘಟನೆ ಬುಧವಾರ ತಡ ರಾತ್ರಿ ಸೊರಬ-ಸಾಗರ ಮಾರ್ಗದಲ್ಲಿ ನಡೆದಿದೆ. ತಾಲ್ಲೂಕಿನ ಅವಲುಗೋಡು ಬಳಿಯ ರಸ್ತೆಯಲ್ಲಿ ಅಂದಾಜು ಏಳುಬತಿಂಗಳ‌ ಹೆಣ್ಣು ಚಿರತೆ ಮರಿ ಸಾವಿಗೀಡಾಗಿದೆ. ವಿಷಯ ತಿಳಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಮರೋಣೋತ್ತರ ಪರೀಕ್ಷೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ‌. ಈ ವೇಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಕುಳ್ಳೊಳ್ಳಿ, ಉಪ ವಲಯ…

Read Full News
GridArt 20250911

ಹುಂಚ ಸಹಕಾರ ಸಂಘದ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ

ಹುಂಚ ಸಹಕಾರ ಸಂಘದ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಹುಂಚ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಂಘದ ಅಧ್ಯಕ್ಷರಾಗಿ ರಾಘವೇಂದ್ರ ತೋಟದಕಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಗಿರೀಶ್ ಹೊನ್ನೆಬೈಲು ಬಹುಮತದೊಂದಿಗೆ ಸ್ಥಾನ ಗೆದ್ದಿದ್ದಾರೆ. ಸೆಪ್ಟೆಂಬರ್ 10ರ ಬುಧವಾರ ನಡೆದ ಚುನಾವಣೆಯಲ್ಲಿ ಮೊದಲಿಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ಘೋಷಣೆ ಪ್ರಕ್ರಿಯೆ ನೆರವೇರಿತು. ಯಾವುದೇ ಪ್ರತಿಸ್ಪರ್ಧಿ ನಾಮಪತ್ರ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.