ಅಪಾಯದಂಚಿನಲ್ಲಿ ಕಾರಗೋಡು ಸರ್ಕಾರಿ ಶಾಲೆ : ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ
ರಿಪ್ಪನ್‌ಪೇಟೆ : ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಗೋಡು ಕಿರಿಯ ಪ್ರಾಥಮಿಕ ಶಾಲೆಯ ಹಿಂಭಾಗವಿರುವ ಅಕೇಶಿಯ ಮರ ಬೀಳುವ ಆತಂಕದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದಿನದೂಡುತಿದ್ದಾರೆ. ಇಲ್ಲಿನ ಕಾರಗೋಡು ಕಿರಿಯ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿ ಬೆಳೆದುನಿಂತ ಅಕೇಶಿಯ ನೆಡುತೋಪು ಇದ್ದು ಈ ಮರಗಳ ರೆಂಬೆಕೊಂಬೆಗಳು ಶಾಲೆಯ ಮೇಲ್ಛಾವಣಿಗೆ ಬಾಗಿ ನಿಂತಿವೆ. ಮಲೆನಾಡಿನ ಈ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ ಗಾಳಿಯಿಂದ ಜನ ತತ್ತರಗೊಂಡಿದ್ದು ಇದೀಗ ಯಾವ ಗಳಿಗೆಯಲ್ಲಾದರೂ ಶಾಲೆಯ ಮೇಲೆ ಮರ ಬೀಳಬಹುದೆಂಬ ಆತಂಕ ಪೋಷಕರನ್ನು ಕಾಡುತ್ತಿದೆ.ಇದರಿಂದ…