ಅಕ್ರಮ ಕಸಾಯಿಖಾನೆ ಮೇಲೆ ದಾಳಿ : 8 ಗೋವುಗಳ ರಕ್ಷಣೆ – 7 ಗೋವುಗಳ ದಾರುಣ ಹತ್ಯೆ
ಶಿವಮೊಗ್ಗ ನಗರದ ಸೂಳೆಬೈಲ್ನ ಸಮೀಪ ಇವತ್ತು ತುಂಗಾನಗರ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಕಸಾಯಿಖಾನೆಯ ಮೇಲೆ ದಾಳಿ ನಡೆಸಿದ್ದಾರೆ. ಗೋಹತ್ಯೆ ನಿಷೇಧದ ನಡುವೆಯು, ಗೋವುಗಳನ್ನು ಮಾಂಸಕ್ಕಾಗಿ ಕೊಂದು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಬೆನ್ನಲ್ಲೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಸೂಳೆಬೈಲಿನ ಕಸಾಯಿ ಖಾನೆಯೊಂದ ಮೇಲೆ ತುಂಗನಗರ ಪೊಲೀಸರು ಬೆಳ್ಳಂಬೆಳಿಗ್ಗೆನೇ ದಾಳಿ ನಡೆಸಿ 8 ಗೋವುಗಳನ್ನ ರಕ್ಷಿಸಿದ್ದಾರೆ. ಆದರೆ 7 ಗೋವುಗಳ ಕತ್ತು ಸೀಳಿ ಹತ್ಯೆ ಮಾಡಿರುವ ದೃಶ್ಯಗಳು ಲಭ್ಯವಾಗಿವೆ. ಸೂಳೆಬೈಲಿನ ಅಜೀಜ್ ಮನೆಯ ಹಿಂಭಾಗದ…


