Headlines

ತುಂಗಾ ನದಿಯಲ್ಲಿ ಯುವಕನ ಶವ ಪತ್ತೆ – ಆತ್ಮಹತ್ಯೆ ಶಂಕೆ|TUNGA

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನಾನಿ ಬಳಿಯ ಹಿಂಭಾಗದ ತುಂಗಾ ನದಿಯಲ್ಲಿ ಭಾನುವಾರ ತೆಂಗಿನ ಕೊಪ್ಪದ ಯುವಕನ ಶವ ಪತ್ತೆಯಾಗಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಜತ್(26) ಮೃತಪಟ್ಟ ಯುವಕ. ಸಾಲೂರು ಹೊಸಮನೆ ತೆಂಗಿನಕೊಪ್ಪದ ಪ್ರಜತ್  4 ವರ್ಷದ ಹಿಂದೆ ಹಾವು ಕಚ್ಚಿದ ಕಾರಣ ತಾಯಿಯನ್ನು ಕಳೆದುಕೊಂಡಿದ್ದರು ಹಾಗೂ ತಂದೆ ಕೂಡ ಕ್ಯಾನ್ಸರ್ ರೋಗಕ್ಕೆ ಇತ್ತೀಚಿಗೆ ಬಲಿಯಾಗಿದ್ದರು. ಪ್ರಜತ್ ಸಾಲದ ಕಾರಣ ಹಾಗೂ ಒಳ್ಳೆಯ ಉದ್ಯೋಗ ಇಲ್ಲದ ಕಾರಣ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗುತ್ತಿದೆ….

Read More

ಕಾಂಬೋಡಿಯಾದಲ್ಲಿ ತೀರ್ಥಹಳ್ಳಿ ಟೆಕ್ಕಿ ಒತ್ತೆ|software engineer

ತೀರ್ಥಹಳ್ಳಿ : ಸಾಫ್ಟ್‌ವೇರ್‌(software) ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ತೀರ್ಥಹಳ್ಳಿಯ ಟೆಕ್ಕಿಯೊಬ್ಬರನ್ನು ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿ ಇರಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಈ ವಿಷಯ ಕೇಂದ್ರ ಸರಕಾರದ ಅಂಗಳಕ್ಕೆ ತಲುಪಿದೆ. ತೀರ್ಥಹಳ್ಳಿಯ ಕಿರಣ್‌ ಶೆಟ್ಟಿ ಅವರಿಗೆ ಥಾಯ್ಲ್ಯಾಂಡ್(thayland) ಕಂಪೆನಿಯಲ್ಲಿ ಉದ್ಯೋಗ ಹಾಗೂ ಒಳ್ಳೆಯ ಸಂಬಳದ ಭರವಸೆ ನೀಡಲಾಗಿತ್ತು. ಇದನ್ನು ನಂಬಿದ ಕಿರಣ್‌ ಕಾಂಬೋಡಿಯಾಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಬಳಿಕ ಅವರನ್ನು ಒತ್ತೆಯಾಳಾಗಿಟ್ಟುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಕಿರಣ್‌ ಶೆಟ್ಟಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಚಿಕ್ಕ ಮಗು ಕೂಡ ಇದೆ. ಈಗ…

Read More

ರಿಪ್ಪನ್‌ಪೇಟೆ : ಸಡಗರ, ಸಂಭ್ರಮ ಹಾಗೂ ಶ್ರದ್ದಾಭಕ್ತಿಯಿಂದ ಜರುಗಿದ ಮಹಾಶಿವರಾತ್ರಿಯ ಧಾರ್ಮಿಕ ಕಾರ್ಯಕ್ರಮ|shivarathri

ರಿಪ್ಪನ್‌ಪೇಟೆ : ಮಹಾಶಿವರಾತ್ರಿಯ ಅಂಗವಾಗಿ ಪಟ್ಟಣದ ಸಿದ್ದಪ್ಪನಗುಡಿಯ ಶ್ರೀ ಕಂತೆ ಸಿದ್ದೇಶ್ವರ ದೇವಸ್ಥಾನ,ಬರುವೆ ಈಶ್ವರ ದೇವಸ್ಥಾನ, ಮುಡುಬ ಈಶ್ವರ ದೇವಸ್ಥಾನ,ಗವಟೂರು ರಾಮೇಶ್ವರ ದೇವಸ್ಥಾನದಲ್ಲಿ ಶ್ರದ್ದಾ ಭಕ್ತಿಯಿಂದ ವಿಶೇಷ ಪೂಜಾ ಕಾರ್ಯಕ್ರಮವು ಜರುಗಿದವು.ಮುಂಜಾನೆಯಿಂದಲೇ ಭಕ್ತರು ಗ್ರಾಮದಲ್ಲಿನ ದೇವಸ್ಥಾನಗಳಿಗೆ ತೆರಳಿ ಪೂಜಾ ಸೇವೆಯನ್ನು ನೆರವೇರಿಸಿದರು. ಸಿದ್ದಪ್ಪನಗುಡಿಯ ಶ್ರೀ ಕಂತೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀಕಂತೆ  ಸಿದ್ದೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರುದ್ರಾಭಿಷೇಕ ಪೂಜೆಗೆ ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಸೇರಿದ್ದರು,ಮಧ್ಯಾಹ್ನ ಎಲ್ಲಾ ಭಕ್ತಾಧಿಗಳಿಗೂ ಸಾಮೂಹಿಕ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕ ಹಾಗೂ ಕೆಪಿಸಿಸಿ…

Read More

ರಿಪ್ಪನ್‌ಪೇಟೆ : 396 ನೇ ಶಿವಾಜಿ ಜಯಂತಿ ಆಚರಣೆ

ರಿಪ್ಪನ್‌ಪೇಟೆ : ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾದರಿ. ಭಾರತೀಯರ ಕಣ ಕಣದಲ್ಲೂ ಶಿವಾಜಿಯ ಆದರ್ಶ ಗುಣಗಳು ಕರಗತವಾಗಬೇಕು. ಸಂಸ್ಕಾರಯುತ ಸಮಾಜದ ನಿರ್ಮಾಣದಲ್ಲಿ ಶಿವಾಜಿಯ ಹೋರಾಟದೊಂದಿಗೆ ಆತನಿಗೆ ಸ್ಫೂರ್ತಿ ನೀಡಿದ್ದ ತಾಯಿ ಜೀಜಾಬಾಯಿಯ ಕೊಡುಗೆಯೂ ಸ್ಮರಣೀಯ ಎಂದು ರಿಪ್ಪನ್‌ಪೇಟೆ ಮರಾಠ ಸಮಾಜದ ಅಧ್ಯಕ್ಷ ನಾಗೇಶ್ ಹೊಸಮನೆ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಇಂದು ಪಟ್ಟಣದ ಸಾಗರ ರಸ್ತೆಯ ಶಿವಾಜಿ ಸರ್ಕಲ್  ನಡೆದ ಶಿವಾಜಿ ಜಯಂತಿ ಆಚರಣೆಯಲ್ಲಿ ಮಾತನಾಡಿ ಪರಕೀಯರ ಅಟ್ಟಹಾಸದಿಂದ ಭಾರತವನ್ನು ರಕ್ಷಿಸುವಲ್ಲಿ…

Read More

ಈಜಲು ಹೋದ ಎಂಬಿಬಿಎಸ್ ವಿದ್ಯಾರ್ಥಿ ಶವವಾಗಿ ಪತ್ತೆ|death

ಶಿವರಾತ್ರಿಯ ನಿಮಿತ್ತ ಜಾಲಿ ಮೂಡ್ ನಲ್ಲಿದ್ದ ವಿದ್ಯಾರ್ಥಿಗಳ ಗುಂಪೊಂದಕ್ಕೆ ಆಘಾತವಾಗಿದೆ ಶಿವಮೊಗ್ಗ ಜಿಲ್ಲೆಯ ಭದ್ರಾ ಚೆಕ್ ಡ್ಯಾಂ ನ ನೀರಿನಲ್ಲಿ ಈಜಲು ಹೋಗಿದ್ದ ಸಿಮ್ಸ್ ನ ವಿದ್ಯಾರ್ಥಿ ನೀರುಪಾಲಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಇಂದು ನಡೆದಿದೆ. ಭದ್ರಾ ನದಿಯ ಗೋಂದಿ ಚೆಕ್ ಡ್ಯಾಂಗೆ ಶಿವಮೊಗ್ಗದ ಸಿಮ್ಸ್ ನ ವಿದ್ಯಾರ್ಥಿ ಜಗತ್ ಮತ್ತು ಇತರೆ ಐವರು ಸ್ನೇಹಿತರು ಈಜಲು ತೆರಳಿದ್ದಾರೆ. ಜಗತ್(21) ಜೊತೆಗೆ  ಓರ್ವ ನೀರಿಗೆ ಇಳಿದಿದ್ದಾನೆ. ಜಗತ್ ನೀರಿನಲ್ಲಿ ಮುಂದೆ ಹೋಗಿದ್ದು ಆಳವಿದ್ದುದ್ದರಿಂದ ನೀರಿನಲ್ಲಿ ಮುಳುಗಿದವನು ಮೇಲೆ…

Read More

ಜಮೀನು ಮಂಜೂರು ವಿಚಾರದಲ್ಲಿ ಯಾರಿಗೂ ನಯಾ ಪೈಸೆ ಹಣ ಕೊಡಬೇಡಿ – ಗೃಹ ಸಚಿವ ಆರಗ ಜ್ಞಾನೇಂದ್ರ|94c

94ಸಿ ಹಾಗೂ ಬಗರ್‌ಹುಕುಂ ಹಕ್ಕು ಪತ್ರ ವಿತರಣೆ ; ಜಮೀನು ಮಂಜೂರು ವಿಚಾರದಲ್ಲಿ ನಯಾ ಪೈಸೆ ಹಣ ಕೊಡಬೇಡಿ ; ಸಚಿವ ಆರಗ ಜ್ಞಾನೇಂದ್ರ ಹೊಸನಗರ: ಜಮೀನು ಮಂಜೂರಾತಿ ವಿಚಾರದಲ್ಲಿ ಅಧಿಕಾರಿಗಳು ಹಣ ಕೇಳುವ ಕುರಿತಾಗಿ ಸಾಕಷ್ಟು ದೂರು ಬಂದಿದ್ದು ರೈತರು ನಯಾ ಪೈಸೆ ಕೊಡಬೇಡಿ. ಅರ್ಹ ಫಲಾನುಭವಿ ರೈತರಿಗೆ ಹಕ್ಕುಪತ್ರ ಸಿಕ್ಕೆ ಸಿಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ 94 ಸಿ ಹಾಗೂ ರೈತರಿಗೆ ಬಹರ್‌ಹುಕುಂ ಸಾಗುವಳಿ ಹಕ್ಕು…

Read More

ಚಲಿಸುತಿದ್ದ ರೈಲಿನಿಂದ ಕೆಳಗೆ ಬಿದ್ದು ರಿಪ್ಪನ್‌ಪೇಟೆಯ ಸರ್ಕಾರಿ ವೈದ್ಯ ಸಾವು|accident

ರಿಪ್ಪನ್‌ಪೇಟೆ : ತುಮಕೂರು ಜಿಲ್ಲೆಯ ಕ್ಯಾತಸಂದ್ರ ಬಳಿ ಚಲಿಸುತಿದ್ದ ರೈಲಿನಿಂದ ಬಿದ್ದು ಪಟ್ಟಣದ ಶಬರೀಶನಗರದ ವೈದ್ಯರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಶಬರೀಶನಗರದ ಡಾ. ಗುರುರಾಜ್ ((46) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಶುಕ್ರವಾರ ಬೆಂಗಳೂರಿನಿಂದ – ಶಿವಮೊಗ್ಗಕ್ಕೆ ರೈಲಿನಲ್ಲಿ ಸಂಚರಿಸುತಿದ್ದಾಗ ಕ್ಯಾತಸಂದ್ರದ ಬಳಿ ರೈಲಿನ ಬಾಗಿಲು ತಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತಿದೆ. ಡಾ. ಗುರುರಾಜ್ ರಿಪ್ಪನ್‌ಪೇಟೆ,ಹೊಸನಗರ ಮತ್ತು ಗೌತಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.ಪ್ರಸ್ತುತ ಸಂಪೆಕಟ್ಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತಿದ್ದರು.ಇತ್ತೀಚಿಗೆ ಕೊಡಗು ಜಿಲ್ಲೆಯಲ್ಲಿ…

Read More

ಶಿವಮೊಗ್ಗ ಜೈಲಿನಲ್ಲಿ ಮಾರಾಮಾರಿ : ಒಬ್ಬನಿಗೆ ಆರು ಜನರಿಂದ ಥಳಿತ|jail

ಶಿವಮೊಗ್ಗ : ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಮೇಲೆ ಹಳೇ ದ್ವೇಷದಿಂದ ಇತರ ಆರು ಕೈದಿಗಳು ಹಲ್ಲೆ ನಡೆಸಿದ್ದಾರೆ. ನಾಗರಾಜ್ ಎಂಬ ವಿಚಾರಣಾಧೀನ ಕೈದಿ ಮೇಲೆ ಸಚಿನ್ ಅಲಿಯಾಸ್ ಸ್ಯಾಡೋ, ದರ್ಶನ್, ಪರಶುರಾಮ, ಅನಿಲ್‌ಕುಮಾರ್, ವಿಶ್ವನಾಥ, ವಿಶಾಲ್ ಎಂಬುವರು ಹಲ್ಲೆ ಮಾಡಿದ್ದಾರೆ. ನಾಗರಾಜ್ ಭದ್ರಾವತಿಯ ಎರಡನೇ ಅಪರ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಲು ಜೈಲಿನಲ್ಲಿರುವ ವಿಡಿಯೋ ಕಾನ್ಫರೆನ್ಸ್ ಕೊಠಡಿಗೆ ತೆರಳುವಾಗ ಆರು ಕೈದಿಗಳು ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಜೈಲು ನಿರೀಕ್ಷಕ ಆತ್ಮಾನಂದ ಕುದರಿ ಮತ್ತು…

Read More

ಸಾಗರ : ಐಗಿನಬೈಲ್ ಬಳಿ ದ್ವಿಚಕ್ರ ಹಾಗೂ ಕಾರಿನ ನಡುವೆ ಡಿಕ್ಕಿ – ಯುವತಿ ಸ್ಥಳದಲ್ಲೇ ಸಾವು|accident

ಕಾರು ಮತ್ತು ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ ನಡೆದು ಸ್ಥಳದಲ್ಲೇ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಸಾಗರ ತಾಲೂಕಿನ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗಿನಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ 24 ವರ್ಷದ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಶೃತಿ(24) ಮೃತಪಟ್ಟಿರುವ ಯುವತಿಯಾಗಿದ್ದು  ಶಿವಮೊಗ್ಗದ ಸಿಟಿ ಸೆಂಟರ್ ನಲ್ಲಿ ಸೆಕ್ಯೂರಿಟಿ ಗಾರ್ಡಾಗಿ…

Read More

ತೀರ್ಥಹಳ್ಳಿ ಪಟ್ಟಣದ ತುಡ್ಕಿಯಲ್ಲಿ ಕಾಣಿಸಿಕೊಂಡ ಚಿರತೆ – ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಆಟದ ಮೈದಾನಕ್ಕೆ ತೆರಳದಂತೆ ಕಟ್ಟಪ್ಪಣೆ|leopard

ವನ್ಯಜೀವಿಗಳ ಕಾಟ ಬರೀ ಗ್ರಾಮಾಂತರ ಪ್ರದೇಶಕ್ಕೆ ಸೀಮಿತವಾಗಿಲ್ಲ, ಪಟ್ಟಣ, ನಗರ ಪ್ರದೇಶಕ್ಕೂ ವನ್ಯಜೀವಿಗಳು ದಾಂಗುಡಿ ಇಡುತ್ತಿದ್ದು ಭಯ ಮೂಡಿಸುತ್ತಿವೆ. ಕೆಲದಿನದಿಂದ ಪಟ್ಟಣ ಸಮೀಪದ ತುಡ್ಕಿಯ ಆನಂದಗಿರಿ ಗುಡ್ಡದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಂಡು ಬಂದಿದ್ದು ಜನರು ಗಾಬರಿಗೊಂಡಿದ್ದಾರೆ. ಆನಂದಗಿರಿ ಗುಡ್ಡದಲ್ಲಿರುವ ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಆಟದ ಮೈದಾನಕ್ಕೆ ತೆರಳದಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಮಕ್ಕಳ ಪ್ರಾರ್ಥನಾ ಕಾರ್ಯಕ್ರಮದ ಅವಧಿಯನ್ನು ಕೆಲ ದಿನದ ಮಟ್ಟಿಗೆ ಬದಲಾಯಿಸಲಾಗಿದೆ. ಕಟ್ಟಡ ಒಳಾಂಗಣ, ಕೊಠಡಿಯಲ್ಲಿ ಇರುವಂತೆ ಮಕ್ಕಳಿಗೆ ಸೂಚಿಸಲಾಗಿದೆ. ಚಿರತೆ ಓಡಾಟವನ್ನು ಸಾರ್ವಜನಿಕರು…

Read More