ಶಿವಮೊಗ್ಗ : ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೂರು ದಿನದ ಹಸುಗೂಸು ಮಗುವನ್ನು ಬೆಂಗಳೂರಿಗೆ ಜೀರೋ ಟ್ರಾಫಿಕ್ ಮೂಲಕ ರವಾನೆ ಮಾಡಲಾಗಿದೆ.
ಶಿವಮೊಗ್ಗದ ಸರ್ಜಿ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ್ದ ಮಗುವಿಗೆ ಹೃದಯ ಸಂಬಂಧಿ ಕಾಯಿಲೆಯಿದ್ದು ಮಗುವಿನ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ
ಮೂರು ದಿನದ ಮಗುವಿಗೆ ತೆರೆದ ಹೃದಯದ ಆಪರೇಶನ್ ಮಾಡುವ ಅವಶ್ಯಕತೆ ಇದ್ದ ಕಾರಣ ಬೆಂಗಳೂರಿನ ಎನ್ ಎಚ್ ಆಸ್ಪತ್ರೆಗೆ ರವಾನೆ ಮಾಡಲಾಯಿತು.
ಶಿವಮೊಗ್ಗದ ಗಾಂಧಿ ಬಜಾರ್ ನ ನಿಲೇಶ್ ಜೈನ್ ಮತ್ತು ಮೋನಿಕಾ ದಂಪತಿಗಳ ಮಗುವಿಗೆ ಈ ಹೃದಯ ಸಂಬಂಧಿ ಕಾಯಿಲೆ ಕಂಡು ಬಂದಿದ್ದು ಬೆಂಗಳೂರಿಗೆ ತೆರಳಲು ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಎಸ್ಪಿ ಮಿಥುನ್ ಕುಮಾರ್ ಮಾಡಿದ್ದರು.
ಶಿವಮೊಗ್ಗದಿಂದ ರಾತ್ರಿ 10.08 ಕ್ಕೆ ಹೊರಟು ರಾತ್ರಿ 1.40 ಕ್ಕೆ ಬೆಂಗಳೂರು ಆಸ್ಪತ್ರೆಗೆ ಅ್ಯಂಬುಲೆನ್ಸ್ ತಲುಪಿದ್ದು ಆಂಬುಲೆನ್ಸ್ ಚಾಲಕ ಜಗದೀಶ್ ಹಾಗೂ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.