ಮಧು ಬಂಗಾರಪ್ಪ ನವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಆಗ್ರಹ|congress
ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾದ ಮಧು ಬಂಗಾರಪ್ಪ ರವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ ಕಂದಾಯ ಇಲಾಖೆಯ ಜವಾಬ್ದಾರಿ ನೀಡುವಂತೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ ಒತ್ತಾಯಿಸಿದ್ದಾರೆ. ರಿಪ್ಪನ್‌ಪೇಟೆಯಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಮಲೆನಾಡು ಭಾಗಗಳ ಜ್ವಲಂತ ಸಮಸ್ಯೆಯಾದ ಭೂ ಹಕ್ಕಿನ ಸಮಸ್ಯೆ ಬಗ್ಗೆ ಬಂಗಾರಪ್ಪ,ಕಾಗೋಡು ತಿಮ್ಮಪ್ಪ ನಂತರದಲ್ಲಿ ಹೆಚ್ಚಿನ ಅರಿವು ಇರುವ ಮಧು ಬಂಗಾರಪ್ಪ ರವರನ್ನು ಉಪಮುಖ್ಯಮಂತ್ರಿ ಮಾಡುವುದರೊಂದಿಗೆ ಕಂದಾಯ ಇಲಾಖೆಯ ಜವಬ್ದಾರಿ ನೀಡಬೇಕು ಎಂದರು. ಮಲೆನಾಡು ಭಾಗದಲ್ಲಿ…