ರಂಭಾಪುರಿ ಶ್ರೀಗಳ ಕಾರು ಅಪಘಾತ – ತಪ್ಪಿದ ಭಾರಿ ಅನಾಹುತ|accident
ಶಿವಮೊಗ್ಗ – ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ರಂಭಾಪುರಿ ಶ್ರೀಗಳಿದ್ದ ಕಾರಿಗೆ ಅಪಘಾತ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ರಂಭಾಪುರಿ ಶ್ರೀಗಳು ಅಪಾಯದಿಂದ ಪಾರಾಗಿರುವ ಘಟನೆ ಹರಪನಹಳ್ಳಿ ತಾಲ್ಲೂಕಿನ ಚಿರಸ್ತಹಳ್ಳಿಯ ತಿರುವಿನಲ್ಲಿ ನಡೆದಿದೆ. ರಂಭಾಪುರಿ ಶ್ರೀಗಳು ರಂಭಾಪುರಿ ಪೀಠದಿಂದ ಆಲಮಟ್ಟಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಶ್ರೀಗಳು ಶಿವಮೊಗ್ಗ- ಹೊಸಪೇಟೆ ರಾಜ್ಯ ಹೆದ್ದಾರಿ 25ರಲ್ಲಿ ಹರಿಹರದಿಂದ ಹರಪನಹಳ್ಳಿ ಮಾರ್ಗವಾಗಿ ಚಲಿಸುತ್ತಿದ್ದಾಗ ಶ್ರಿಗಳ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಶ್ರೀಗಳ ಕಾರಿನ ಮೇಲೆ ಹಾರಿ ಬಿದ್ದಿದ್ದಾರೆ. …