Ripponpete | ಜನಸ್ಪಂದನ ಸಭೆಯಲ್ಲಿ ಜನ ಮೆಚ್ಚುಗೆ ಗಳಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ
ಜನಸ್ಪಂದನ ಸಭೆಯಲ್ಲಿ ಜನ ಮೆಚ್ಚುಗೆ ಗಳಿಸಿದ ಶಾಸಕ ಬೇಳೂರು ರಿಪ್ಪನ್‌ಪೇಟೆ : ನೂರಾರು ಸಮಸ್ಯೆಗಳೊಂದಿಗೆ ಪರಿಹಾರಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಕುತೂಹಲದಿಂದ ಪರಿಹಾರ ಸಿಗಬಹುದೆಂದು ಭರವಸೆಯೊಂದಿಗೆ ಜನಸ್ಪಂದನ ಸಭೆಯಲ್ಲಿ ಭಾಗವಹಿಸಿದ್ದ ನಾಗರಿಕರಿಗೆ ತಮ್ಮ ಸಮಸ್ಯೆಗಳಿಗೆತಕ್ಷಣ ಪರಿಹಾರ ಸಿಕ್ಕರೆ ಮತ್ತು ಕೆಲವರಿಗೆ ಆರ್ಥಿಕ ನೆರವು, ಸಮಸ್ಯೆಗಳಿಗೆ ಪರಿಹಾರದ ಭರವಸೆಗಳನ್ನು ಪಡೆದುಕೊಂಡವರು ಸಂತಸದಿಂದ ಕೃತಜ್ಞತೆ ಸಲ್ಲಿಸಿದ ದೃಶ್ಯ ಜನ ಮೆಚ್ಚುಗೆ ಗಳಿಸಿದಂತಿತ್ತು. ಕಣ್ಣು ಹಾಯಿಸಿದಷ್ಟು ದೂರವೂ ಜನವೋ ಜನ.. ಸಮಸ್ಯೆ ಬಗೆಹರಿಸುವಂತೆ ಸರತಿ ಸಾಲಿನಲ್ಲಿ ನಿಂತಿರುವ ಸಾರ್ವಜನಿಕರು. ಹೊಸನಗರ ತಾಲೂಕಿನ…